ನೀವು ಕಂಟೈನ್‍ಮೆಂಟ್ ಝೋನ್’ನಲ್ಲಿದ್ದೀರಾ? ಇಲ್ಲಿದೆ ಪಟ್ಟಿ

ಬೆಂಗಳೂರು: ಕೊರೊನಾ ವೈರಾಣು ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗಾಗಿ ಲಾಕ್’ಡೌನ್ ಮೇ 3ರ ವರೆಗೂ ಮುಂದುವರಿದಿದೆ. ಅದರಲ್ಲೂ ಸೋಂಕು ಹೆಚ್ಚಿರುವ ಪ್ರದೇಶಗಳನ್ನು ಹಾಟ್’ಸ್ಪಾಟ್ ಎಂದು ಗುರುತಿಸಲಾಗಿದ್ದು ಆ ಪ್ರದೇಶಗಳಲ್ಲಿ ಕಟ್ಟು ನಿಟ್ಟಿನ ನಿಯಮ ಜಾರಿಯಲ್ಲಿದೆ.

ಈ ನಡುವೆ ಕಂಟೈನ್‍ಮೆಂಟ್ ಝೋನ್ ಹೊರತುಪಡಿಸಿ ಉಳಿದೆಡೆ ಬುಧವಾರ ಮಧ್ಯರಾತ್ರಿಯಿಂದ ಲಾಕ್’ಡೌನ್ ಸಡಿಲಿಸಲಾಗಿದೆ. ಪ್ರಸ್ತುತ ರಾಜ್ಯದಲ್ಲಿ 359 ಪ್ರದೇಶಗಳನ್ನು ಕಂಟೈನ್‍ಮೆಂಟ್ ಝೋನ್  ಎಂದು ಗುರುತಿಸಲಾಗಿದೆ. ಆದರೆ ಜನಸಾಮಾನ್ಯರಿಗೆ ಯಾವ ಪ್ರದೇಶ ಕಂಟೈನ್‍ಮೆಂಟ್ ಝೋನ್, ತಾವು ಆ ಪ್ರದೇಶದಲ್ಲಿದ್ದೇವೆಯೇ ಎಂಬ ಗೊಂದಲ ಇದೆ.

ಎಲ್ಲೆಲ್ಲಿ ಎಷ್ಟೆಷ್ಟು ಕಂಟೈನ್‍ಮೆಂಟ್ ಝೋನ್’ಗಳಿವೆ ಎಂಬ ಬಗ್ಗೆ ಇಲ್ಲಿದೆ ಪಟ್ಟಿ.

  • ಬೆಂಗಳೂರಿನಲ್ಲಿ  19
  • ಕಲಬುರಗಿಯಲ್ಲಿ 17
  • ಮೈಸೂರಿನಲ್ಲಿ  12
  • ಬಾಗಲಕೋಟೆಯಲ್ಲಿ 11
  • ಮಂಗಳೂರಿನಲ್ಲಿ  7
  • ನಂಜನಗೂಡು 6
  • ಚಿಕ್ಕಬಳ್ಳಾಪುರದಲ್ಲಿ 4
  • ಬಳ್ಳಾರಿಯಲ್ಲಿ 3
  • ಬೆಳಗಾವಿಯಲ್ಲಿ 3
  • ಬೆಂಗಳೂರು ಗ್ರಾಮಾಂತರದಲ್ಲಿ 2
  • ಮಂಡ್ಯದಲ್ಲಿ 2
  • ಹುಬ್ಬಳ್ಳಿಯಲ್ಲಿ 2
  • ಬೀದರ್’ನಲ್ಲಿ 2
  • ಗೌರಿಬಿದನೂರಿನಲ್ಲಿ 2
  • ಚಿತ್ತಾಪುರದಲ್ಲಿ  1
  • ಶಹಬಾದ್’ನಲ್ಲಿ 1
  • ವಾಡಿಯಲ್ಲಿ 1
  • ಆಳಂದಲ್ಲಿ 1
  • ಸಂಕೇಶ್ವರದಲ್ಲಿ 1
  • ಕುಡಚಿಯಲ್ಲಿ 1
  • ಬಸವಕಲ್ಯಾಣದಲ್ಲಿ 1
  • ಚಿತ್ರದುರ್ಗದಲ್ಲಿ 1
  • ಶಿರಾದಲ್ಲಿ 1
  • ಕಾರವಾರದಲ್ಲಿ 1
  • ವಿಜಯಪುರದಲ್ಲಿ 1
  • ಗದಗದಲ್ಲಿ 1

Related posts