ಕೊರೋನಾ ಪ್ಯಾಕೇಜ್ ಬಗ್ಗೆ ಡಿಕೆಶಿಗೆ ಅನುಮಾನ; ಕೊಟ್ಟ ಮಾತನ್ನು ಉಳಿಸಿಕೊಳ್ಳಲಿ ಎಂದ ಕೈ ನಾಯಕ

ಬೆಂಗಳೂರು: ಕೊರೋನಾ ಪ್ಯಾಕೇಜ್ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ತಾವು ನೀಡಿದ ಭರವಸೆಯಂತೆ ನಡೆದುಕೊಳ್ಳಲಿ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮೋದಿ ಪ್ಯಾಕೇಜ್ ಬಗ್ಗೆ ಪ್ರತಿಕ್ರಿಯಿಸುತ್ತಾ ಈ ಮಾತುಗಳನ್ನಾಡಿದ್ದಾರೆ. ಮೋದಿ ಪ್ಯಾಕೇಜ್ ಬಗ್ಗೆ ಅಭಿಪ್ರಾಯ ಹೇಳಿದ ಸಂದರ್ಭದಲ್ಲಿ ಅವರು ಸಿಎಂ ಯಡಿಯೂರಪ್ಪ ಅವರ ಪ್ಯಾಕೇಜ್ ಜನರಿಗೆ ತಲುಪುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಪ್ರಧಾನಿ ನರೇಂದ್ರ ಮೋದಿ 20‌ ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಿರುವುದನ್ನು ಸಂತಸದ ವಿಚಾರ ಎಂದರು. ಆದರೆ ಈ ಹಿಂದೆ ಘೋಷಿಸಿದ್ದ ಬಿಜೆಪಿ ಸರ್ಕಾರ ಘೋಷಿಸಿದ್ದ 1610 ಕೋಟಿ ರೂಪಾಯಿಗಳ ಪ್ಯಾಕೇಜ್ ಏನಾಯಿತು? ಒಬ್ಬರಿಗಾದರೂ ಆ ಪ್ಯಾಕೇಜ್ ತಲುಪಿದೆಯೇ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.

ಯಡಿಯೂರಪ್ಪ ಅವರು ಪರಿಹಾರ ಪ್ಯಾಕೇಜ್ ಘೋಷಿಸಿ ಹಲವು ದಿನಗಳಾದರೂ ಈ ವರೆಗೆ ಯಾರಿಗೂ ತಲುಪಿದ್ದನ್ನು ನೋಡಿಲ್ಲ. ಹಾಗಾಗಿ ಮೋದಿ ಹಾಗೂ ಯಡಿಯೂರಪ್ಪ ಮಾತುಕೊಟ್ಟಂತೆ ಉಳಿಸಿಕೊಳ್ಳಲಿ, ನಡೆಯಲಿ ಎಂದರು.

ಕೊರೋನಾದಿಂದ ಜನರಿಗಾದ ನಷ್ಟ ಭರಿಸಿ ಅವರಿಗೆ ಬದುಕು ಕಟ್ಟಿಕೊಡಬೇಕೆಂದು ಸಲಹೆ ನೀಡಿದ ಡಿ.ಕೆ.ಶಿವಕುಮಾರ್, ರಾಜ್ಯದಿಂದ ಬೇರೆ ಕಡೆ ಕಾರ್ಮಿಕರನ್ನು ಕಳುಹಿಸಲಾಗಲೀ ಅಥವಾ ಅಲ್ಲಿಂದ ಕಾರ್ಮಿಕರನ್ನು ರಾಜ್ಯಕ್ಕೆ ಕರೆಸುವುದಕ್ಕಾಗಲಿ ಸರ್ಕಾರ ಇನ್ನೂ ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಬಿ.ಎಸ್.ವೈ. ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

Related posts