ಯೋಗಿಯ ನಾಡಲ್ಲಿ ಭೀಕರ ನರಮೇಧ; ರೌಡಿಯ ಬೇಟೆಗಿಳಿದ ೮ ಪೊಲೀಸರ ಹತ್ಯೆ

ಕಾನ್ಪುರ: ಯೋಗಿಯ ನಾಡು ಉತ್ತರ ಪ್ರದೇಶದಲ್ಲಿ ರಓದಿಗಳು ಅಟ್ಟಹಾಸ ಮೆರೆದಿದ್ದಾರೆ. ಸಿನಿಮಾದಲ್ಲಿನ ರೀತಿಯಲ್ಲೇ ರೋಡಿ ಪದೇ ಪೈಶಾಚಿಕತೆ ಮೆರೆದಿದ್ದು 8 ಮಂದಿ ಪೊಲೀಸ್ ಸಿಬ್ಬಂದಿಯನ್ನು ಹತ್ಯೆ ಮಾಡಿದ್ದಾರೆ.

ಕಾನ್ಪುರದಲ್ಲಿ ರೌಡಿ ಶೀಟರ್ ವಿಕಾಸ್ ದುಬೆಯನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ಪೊಲೀಸ್ ತಂಡದ ಮೇಲೆ ಕಿಡಿಗೇಡಿಗಳು ಗುಂಡಿನ ದಾಳಿ ನಡೆಸಿದ್ದಾರೆ.

ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕಾನ್ಪುರದ ಚೌಬೆಪುರ್ ನ ಬಿತೂರ್ ಪ್ರದೇಶದಲ್ಲಿ ಈ ದಾಳಿ ನಡೆದಿದ್ದು, ಈ ಹತ್ಯಾಕಾಂಡದಲ್ಲಿ ಅಧಿಕಾರಿಗಳು ಸೇರಿದಂತೆ 8 ಮಂದಿ ಪೊಲೀಸರು ಹುತಾತ್ಮರಾಗಿದ್ದಾರೆ. 7 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಹುತಾತ್ಮ ಪೊಲೀಸರನ್ನು ದೇವೇಂದ್ರ ಕುಮಾರ್ ಮಿಶ್ರಾ, ಮಹೇಶ್ ಯಾದವ್, ಅನೂಪ್ ಕುಮಾರ್, ನೆಬುಲಾಲ್, ಸುಲ್ತಾನ್ ಸಿಂಗ್, ರಾಹುಲ್, ಜಿತೇಂದ್ರ ಮತ್ತು ಬಬ್ಲು ಎಂದು ಗುರುತಿಸಲಾಗಿದೆ.

Related posts