ಇಸ್ಲಾಮಾಬಾದ್: ಪಾಕಿಸ್ತಾನಕ್ಕೆ ರಕ್ತಸಿಕ್ತ ಭಾನುವಾರ! ವಾಯುವ್ಯ ಪಾಕಿಸ್ತಾನದಲ್ಲಿರುವ ಪೊಲೀಸ್ ಚೆಕ್‌ಪಾಯಿಂಟ್ ಮೇಲೆ ಭಯೋತ್ಪಾದಕರು ನಡೆಸಿದ ಉಗ್ರ ದಾಳಿಯಲ್ಲಿ 21 ಸೈನಿಕರು ಮೃತಪಟ್ಟಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ದಾಳಿಕೋರರು ಮೊದಲು ಕಾರು ಬಾಂಬ್ ಸ್ಫೋಟಗೊಳಿಸಿ, ನಂತರ ಭಾರೀ ಗುಂಡಿನ ದಾಳಿ ನಡೆಸಿದ್ದಾರೆ. ಸ್ಫೋಟದ ತೀವ್ರತೆಗೆ ಚೆಕ್‌ಪಾಯಿಂಟ್ ಕ್ಷಣಾರ್ಧದಲ್ಲಿ ಧ್ವಂಸವಾಗಿದ್ದು, ಪೊಲೀಸರು ಪ್ರತಿದಾಳಿಗೆ ಸಿದ್ಧಗೊಳ್ಳುವ ಮೊದಲು ಪರಿಸ್ಥಿತಿ ನಿಯಂತ್ರಣದ ಹೊರಗೆ ಹೋಗಿದೆ. ದಾಳಿಯ ನಂತರ ಉಗ್ರರು ಪೊಲೀಸರ ಶಸ್ತ್ರಾಸ್ತ್ರಗಳನ್ನು ದೋಚಿ ಪರಾರಿಯಾಗಿದ್ದು, ಗಡಿಯತ್ತ ಓಡಿಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಘಟನೆಯು ಖೈಬರ್ ಪಖ್ತುಂಖ್ವಾದ ಬನ್ನು ಜಿಲ್ಲೆಯಲ್ಲಿ ಶನಿವಾರ ತಡರಾತ್ರಿ ಈ ವಿಧ್ವಂಸ ನಡೆದಿದ್ದು, ಈ ದಾಳಿಯ ಹೊಣೆಯನ್ನು ಇತ್ತೇಹಾದ್-ಉಲ್-ಮುಜಾಹಿದ್ದೀನ್ ಪಾಕಿಸ್ತಾನ್ ಸಂಘಟನೆ ಹೊತ್ತುಕೊಂಡಿದೆ.
Day: May 11, 2026
ರಕ್ತದೊತ್ತಡ ನಿಯಂತ್ರಣಕ್ಕೆ ಶುಂಠಿ ಸಹಾಯಕವೇ? ಹೇಗೆ ಬಳಸಬಹುದು?
ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ (High Blood Pressure) ಸಮಸ್ಯೆ ಅನೇಕ ಮಂದಿಯನ್ನು ಕಾಡುತ್ತಿದೆ. ಆಹಾರ ಪದ್ಧತಿ, ಒತ್ತಡದ ಜೀವನಶೈಲಿ ಹಾಗೂ ವ್ಯಾಯಾಮದ ಕೊರತೆಯಿಂದ ಈ ಸಮಸ್ಯೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮನೆಯಲ್ಲೇ ಸಿಗುವ ಶುಂಠಿ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಉಪಯೋಗವಾಗುತ್ತದೆ ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯವಾಗಿದೆ. ಶುಂಠಿಯಲ್ಲಿ ಇರುವ ಜಿಂಜರೋಲ್ (Gingerol) ಹಾಗೂ ಶೋಗೋಲ್ (Shogaol) ಎಂಬ ಸಕ್ರಿಯ ಅಂಶಗಳು ದೇಹದಲ್ಲಿ ರಕ್ತಪ್ರವಾಹ ಸುಧಾರಿಸಲು ನೆರವಾಗುತ್ತವೆ. ಇದರಿಂದ ರಕ್ತನಾಳಗಳು ವಿಶ್ರಾಂತಿ ಪಡೆಯುವ ಸಾಧ್ಯತೆ ಇದ್ದು, ರಕ್ತದೊತ್ತಡ ನಿಯಂತ್ರಣಕ್ಕೆ ಸಹಕಾರಿಯಾಗಬಹುದು ಎಂದು ಹೇಳಲಾಗುತ್ತದೆ. ಶುಂಠಿ ರಕ್ತದೊತ್ತಡ ಕಡಿಮೆ ಮಾಡಲು ಹೇಗೆ ಸಹಾಯ ಮಾಡುತ್ತದೆ? ತಜ್ಞರ ಪ್ರಕಾರ, ಶುಂಠಿ ದೇಹದಲ್ಲಿ ರಕ್ತಸಂಚಾರ ಸುಧಾರಿಸಲು ನೆರವಾಗುತ್ತದೆ. ಜೊತೆಗೆ ದೇಹದ ಉರಿಯೂತವನ್ನು ಕಡಿಮೆ ಮಾಡುವ ಗುಣವೂ ಇದಕ್ಕಿದೆ. ಕೆಲ ಅಧ್ಯಯನಗಳ ಪ್ರಕಾರ ಶುಂಠಿ: ರಕ್ತನಾಳಗಳ ಒತ್ತಡವನ್ನು ಕಡಿಮೆ ಮಾಡಲು ನೆರವಾಗಬಹುದು ರಕ್ತದ…
