ಕೊಂಚಾಡಿ ಕಾಶೀ ಮಠದಲ್ಲಿ ದಶಮಸ್ಕಂದ ಹವನ; ಬುಧವಾರ ಸೀಮೋಲಂಘನ ಕೈಂಕರ್ಯ

ಮಂಗಳೂರು : ಗೌಡ ಸಾರಸ್ವತ ಸಮಾಜದ ಪರಮ ಪೂಜ್ಯ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ವ್ರತವು ಸೆಪ್ಟೆಂಬರ್ 2ರಂದು ಸಮಾಪನಗೊಳ್ಳಲಿದೆ. ಈ ಪ್ರಯುಕ್ತ ಶ್ರೀಗಳವರ ಚಾತುರ್ಮಾಸ ವ್ರತದ ಸೀಮೋಲಂಘನ ಕಾರ್ಯಕ್ರಮ ಜರುಗಲಿದೆ. ಸಂಜೆ 5:30 ಕ್ಕೆ ಶ್ರೀ ವೆಂಕರಮಣ ದೇವಳಕ್ಕೆ ಭೇಟಿ ನೀಡಿ ವೀರ ವೆಂಕಟೇಶ ದೇವರ ದರ್ಶನ ಪಡೆಯಲಿದ್ದು ಬಳಿಕ ಸಮಸ್ತ ಸಮಾಜ ದ ಪರವಾಗಿ ಶ್ರೀ ದೇವಳದ ಆಡಳಿತ ಮಂಡಳಿ ವತಿಯಿಂದ ಶ್ರೀಗಳವರ ಪಾದ ಪೂಜೆ ನೆರವೇರಲಿದೆ. ಬಳಿಕ ದೇವಳದಲ್ಲಿ ಆಶೀರ್ವಚನ ಕಾರ್ಯಕ್ರಮ ನೆರವೇರಲಿದೆ.

ಕೊರೋನಾ ಮಹಾಮಾರಿಯನ್ನು ತಡೆಗಟ್ಟು ವ ಹಿನ್ನೆಲೆಯಲ್ಲಿ ಸರಕಾರದ ಆದೇಶ ಹಾಗೂ ನಿಯಮ ಪ್ರಕಾರ ದೇವಳದ ಒಳಗಡೆ 50 ಜನರಿಗಿಂತ ಹೆಚ್ಚು ಜನರು ಪಾಲ್ಗೊಳ್ಳುವ ಅವಕಾಶ ಇಲ್ಲ. ಹಾಗಾಗಿ ದೇವಳದ ಆಡಳಿತ ಮಂಡಳಿ ಮತ್ತು ಅರ್ಚಕರಿಗೆ ಹಾಗೂ ವಿಶೇಷ ಆಹ್ವಾನಿತರಿಗೆ ಮಾತ್ರ ದೇವಳದ ಒಳಗಡೆ ಪ್ರವೇಶಿಸುವ ಅವಕಾಶ ಕಲ್ಪಿಸಲಾಗಿದೆ ಎಂದು ಕ್ಷೇತ್ರದ ಪ್ರಮುಖರು ತಿಳಿಸಿದ್ದಾರೆ.

ಭಾಗವತಾಂತರ್ಗತ ದಶಮಸ್ಕಂದ ಹವನ

ಈ ನಡುವೆ ಸೋಮವಾರ ಕೊಂಚಾಡಿ ಶ್ರೀ ಕಾಶೀ ಮಠದಲ್ಲಿ ಭಾಗವತಾಂತರ್ಗತ ದಶಮಸ್ಕಂದ ಹವನ ನೆರೆವೇರಿತು. ಶ್ರೀ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಮಹಾ ಪೂರ್ಣಾಹುತಿ ಜರಗಿತು.

Related posts