ನಟಿ ರಾಗಿಣಿ ನಂಟು; ಸಚಿವ ರವಿ ಸ್ಪಷ್ಟನೆ ಏನು ಗೊತ್ತಾ?

ಚಿಕ್ಕಮಗಳೂರು: ಡ್ರಗ್ಸ್ ದಂಧೆ ಪ್ರಕರಣದಲ್ಲಿ ನಟಿ ರಾಗಿಣಿ ಬಂಧನಕ್ಕೊಳಗಾಗುತ್ತಿದ್ದಂತೆಯೇ ಈ ನಟಿ ಬಿಜೆಪಿ ನಾಯಕರೊಂದಿಗಿರುವ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಹಿಂದೆ ಉಪ ಚುನಾವಣೆ ವೇಳೆ ನಟಿ ರಾಗಿಣಿ ಬಿಜೆಪಿ ಪರ ಪ್ರಚಾರ ಕೈಗೊಂಡಿದ್ದರು. ಆ ಕುರಿತ ಫೋಟೋ ಹಾಗೂ ವೀಡಿಯೋಗಳನ್ನು ಬೊಟ್ಟು ಮಾಡಿ ರಾಗಿಣಿಯನ್ನು ಬಿಜೆಪಿ ಪಕ್ಷದವರೆಂಬಂತೆ ಬಿಂಬಿಸಲಾಗುತ್ತಿದೆ.

ಈ ಬಗ್ಗೆ ಸ್ಪಷ್ಟಪಡಿಸಿರುವ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ತಮ್ಮ ಪಕ್ಷ ಬಿಜೆಪಿಗೂ ನಟಿ ರಾಗಿಣಿಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಡ್ರಗ್ಸ್ ದಂಧೆಯ ಪ್ರಕರಣದಲಿ ಬಂಧಿತರಾಗಿರುವ ನಟಿ ರಾಗಿಣಿ ಈ ಹಿಂದೆ ಉಪ ಚುನಾವಣೆ ವೇಳೆ ಬಿಜೆಪಿ ಪರ ಪ್ರಚಾರ ಮಾಡುತ್ತಿದ್ದ ವೀಡಿಯೋಗಳು ಹರಿದಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ನಟಿ ರಾಗಿಣಿಯವರಿಗೆ ನೇರವಾಗಿ ಪಕ್ಷದ ಯಾವ ಜವಾಬ್ದಾರಿ ಇಲ್ಲ. ನಟಿಯಾಗಿ ಅವರಿಗೆ ಅವರದೇ ಸ್ಥಾನವಿದೆ.ಬಿಜೆಪಿಗೂ ಅವರಿಗೂ ಯಾವ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಮ್ಮದು ಕಾಂಪ್ರಮೈಸ್, ಅಡ್ಜೆಸ್ಟ್ ಮೆಂಟ್ ಮಾಡಿಕೊಳ್ಳುವ ಪಕ್ಷವಲ್ಲ. ಯಾರೇ ಆಗಲಿ, ತಪ್ಪು ಮಾಡಿದ್ದವರಿಗೆ ಶಿಕ್ಷೆ ಆಗಲೇಬೇಕು ಎಂದು ಸಚಿವ ರವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Related posts

One Thought to “ನಟಿ ರಾಗಿಣಿ ನಂಟು; ಸಚಿವ ರವಿ ಸ್ಪಷ್ಟನೆ ಏನು ಗೊತ್ತಾ?”

Comments are closed.