ಈ ವರ್ಷ ಪೂರ್ವ ಪ್ರಾಥಮಿಕ ಶಾಲೆ ಬೇಡ; ಸರ್ಕಾರಕ್ಕೆ ಸಲಹೆ

ಬೆಂಗಳೂರು: ನಾಡಿಗೆ ಕೊರೋನಾ ವಕ್ಕರಿಸಿರುವ ಹಿನ್ನೆಲೆಯಲ್ಲಿ ಈ ವರ್ಷ ಪೂರ್ವಪ್ರಾಥಮಿಕ ಶಾಲೆ ತೆರೆಯುವುದೇ ಬೇಡ ಎಂಬ ಅಭಿಪ್ರಾಯ ಸಾರ್ವಜನಿಕವಲಯದಲ್ಲಿ ವ್ಯಕ್ತವಾಗಿದೆ. ಈ ರೀತಿಯ ಅಭಿಪ್ರಾಯಗಳನ್ನು ಮಕ್ಕಳ ಪೋಷಕರು ಶಿಕ್ಷಣ ಇಲಾಖೆ ಮುಂದಿಟ್ಟಿದ್ದಾರೆ. ಇನ್ನುಳಿದ ತರಗತಿಗಳನ್ನೊಳಗೊಂಡ ಶಾಲೆಗಳನ್ನು ಆಗಸ್ಟ್‌ ಅಂತ್ಯದವರೆಗೂ ಆರಂಭಿಸುವುದೇ ಬೇಡ ಎಂಬ ಒತ್ತಾಯ ಇತ್ತು, ಇದೀಗ ಸೆಪ್ಟೆಂಬರ್ ವರೆಗೆ ಶಾಲಾರಂಭ ಬೇಡ ಎಂದು ಹಲವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಶಾಲಾರಂಭ ಕುರಿತಂತೆ ಪೋಷಕರ ಅಭಿಪ್ರಾಯ ಸಂಗ್ರಹಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಸೂಚಿಸಿದ್ದು ಅದರಂತೆ ನಡೆಸಲಾದ ಸಭೆಗಳಲ್ಲಿ ಈ ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ.

ಅನೇಕ ಶಾಲೆಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿಸಲಾಗಿದೆ. ಅಂತಹ ಶಾಲೆಗಳಿಗೆ ಕಳುಹಿಸಲು ಹೆತ್ತವರು, ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಕೊರೋನಾ ವೈರಾಣು ಹಾವಳಿ ಸಂಪೂರ್ಣ ಹತೋಟಿಗೆ ಬಂದ ನಂತರವೇ ಶಾಲೆ ಆರಂಭವಾಗಲಿ ಎಂದು ಹೇಳಿಕೊಂಡವರೇ ಹೆಚ್ಚು ಮಂದಿ.

Related posts