ಮುಂಬಯಿ: ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣಾ ಅಖಾಡ ರಂಗೇರಿದ್ದು, ರಾಜಕೀಯ ಪಕ್ಷಗಳ ಪ್ರಚಾರ ಭರಾಟೆಯ ನಡುವೆ ರಣಾಂಗಣದಲ್ಲಿ ಝಣಝಣ ಕಾಂಚಾಣದ ಸದ್ದು ಮೊಳಗಿದೆ.
ಮತದಾನದ ಅಖಾಡದಲ್ಲಿ ಅಕ್ರಮವಾಗಿ ಚಿಣ್ಣಾಭರಣ ಸಾಗಿಸುತ್ತಿದ್ದ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಚುನಾವಣಾ ಅಧಿಕಾರಿಗಳು ಶುಕ್ರವಾರ ಭರ್ಜರಿ ಭೇಟೆಯಾಡಿದ್ದು, ಪುಣೆಯ ಲಾಜಿಸ್ಟಿಕ್ ಸೇವಾ ಸಂಸ್ಥೆಯೊಂದರ ವಾಹನದಲ್ಲಿ ಸಾಗಿಸುತ್ತಿದ್ದ 139 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಆದರೆ, ಇದು ತಮಗೆ ಸೇರಿದ್ದು, ಕಾನೂನು ಬದ್ದವಾಗಿಯೇ ಸಾಗಿಸಲಾಗುತ್ತಿತ್ತು ಎಂದು ಜ್ಯುವೆಲ್ಲರ್ಸ್ ಸಂಸ್ಥೆಯೊಂದು ಸ್ಪಷ್ಟನೆ ನೀಡಿದೆ.