14 ರಾಜ್ಯಗಳ ಅಖಾಡದಲ್ಲೂ NDA ಮೇಲುಗೈ

ನವದೆಹಲಿ: ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿದಾನಸಭೆಗಳ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ವ್ಯಕ್ತವಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸಾರಥ್ಯದ ಮೈತ್ರಿಕೂಟ ಜಯಭೇರಿ ಭಾರಿಸಿದೆ.
ಇದೇ ಸಂದರ್ಭದಲ್ಲಿ ನಡೆದ ಉಪಚುನಾವಣೆಯ ಫಲಿತಾಂಶವೂ ಗಮನಾರ್ಹ. 14 ರಾಜ್ಯಗಳ 48 ವಿಧಾನಸಭಾ ಸ್ಥಾನಗಳಲ್ಲಿ ಎನ್‌ಡಿಎ 28 ಸ್ಥಾನಗಳನ್ನು ಗೆದ್ದಿದೆ. ಇಂಡಿಯಾ ಮೈತ್ರಿಕೂಟ 20 ಸ್ಥಾನಗಳನ್ನು ಗಳಿಸಿದೆ.

ಬಿಜೆಪಿ (ನಾಂದೇಡ್) ಮತ್ತು ಕಾಂಗ್ರೆಸ್ (ವಯನಾಡ್) ಲೋಕಸಭಾ ಕ್ಷೇತ್ರಗಳ ಪೈಕಿ ತಲಾ ಒಂದೊಂದು ಸ್ಥಾನ ಗೆದ್ದುಕೊಂಡಿವೆ.

ವಿಧಾನಸಭಾ ಕ್ಷೇತ್ರಗಳ ಉಪಚುನಾವಣಾ ಫಲಿತಾಂಶ ಹೀಗಿದೆ:

  • ರಾಜಸ್ಥಾನ: ಬಿಜೆಪಿ- 5; ಕಾಂಗ್ರೆಸ್-1; BAP- 1,

  • ಉತ್ತರ ಪ್ರದೇಶ: ಬಿಜೆಪಿ-6 ಎಸ್‌ಪಿ-2; ಆರ್‌ಎಲ್‌ಡಿ- 1,

  • ಪಶ್ಚಿಮ ಬಂಗಾಳ: ಟಿಎಂಸಿ 6,

  • ಪಂಜಾಬ್: ಆಮ್ ಆದ್ಮಿ- 3; ಕಾಂಗ್ರೆಸ್-1,

  • ಅಸ್ಸಾಂ: ಬಿಜೆಪಿ-3; ಯುಪಿಎಲ್-1; ಎಜಿಪಿ- 1,

  • ಬಿಹಾರ: ಬಿಜೆಪಿ- 2; ಹಿಂದುಸ್ಥಾನ್ ಅವಾಮ್ ಮೋರ್ಚಾ -1; ಜೆಡಿ(ಯು)-1,

  • ಛತ್ತೀಸ್‌ಗಢ: ಬಿಜೆಪಿ-1,

  • ಗುಜರಾತ್: ಬಿಜೆಪಿ- 1,

  • ಕರ್ನಾಟಕ: ಕಾಂಗ್ರೆಸ್: 3,

  • ಕೇರಳ: ಕಾಂಗ್ರೆಸ್-1; ಸಿಪಿಐ(ಎಂ)-1,

  • ಮಧ್ಯಪ್ರದೇಶ: ಬಿಜೆಪಿ-1; ಕಾಂಗ್ರೆಸ್-1,

  • ಸಿಕ್ಕಿಂ: SKM-2,

  • ಮೇಘಾಲಯ: ಎನ್‌ಪಿಪಿ -1,

  • ಉತ್ತರಾಖಂಡ್: ಬಿಜೆಪಿ-1

Related posts