ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಸಂದೇಶ; ಪೊಲೀಸರಿಗೆ ಕೆಪಿಸಿಸಿ ದೂರು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸಾಮಾಜಿಕ ಜಲ ತಾಣದಲ್ಲಿ ಅವಹೇಳನಕಾರಿ ಸಂದೇಶ ಹಾಕಿರುವ ಪ್ರಕರಣದ ವಿರುದ್ಧ ಕೆಪಿಸಿಸಿ ಕಾನೂನು ಸಮರಕ್ಕೆ ಮುನ್ನುಡಿ ಬರೆದಿದೆ. ಸಂದೇಶ ಹಾಕಿರುವ ಕಿಡಿಗೇಡಿಗಳ ವಿರುದ್ಧ ಕೆಪಿಸಿಸಿ ಕಾನೂನು ಘಟಕದಿಂದ ಬೆಂಗಳೂರು ನಗರ ಪೊಲೀಸರಿಗೆ ದೂರು ನೀಡಿದೆ. ವಕೀಲ ಸೂರ್ಯ ಮುಕುಂದರಾಜ್ ಮೂಲಕ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿರುವ ಕಾಂಗ್ರೆಸ್ ನಾಯಕರು, ಆರೋಪಿಗಳ ವಿರುದ್ಧ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.    

ಕರ್ನಾಟಕದಲ್ಲಿ ಕೊರೋನಾ ಆರ್ಭಟ; ಒಂದೇ ದಿನ 100 ಮಂದಿ ಬಲಿ

ಬೆಂಗಳೂರು: ದಿನ ಕಳೆದರೂ ಕೊರೋನಾ ಹಾವಳಿ ತಗ್ಗಿಲ್ಲ. ಸೋಂಕಿನ ಪ್ರಮಾಣ ಹೆಚ್ಚುತ್ತಲೇ ಇದ್ದು ಸಾವಿನ ಸಂಖ್ಯೆಯೂ ಬೆಳೆದಿದೆ. ಕರ್ನಾಟಕದಲ್ಲೂ ಕೊರೋನಾ ವೈರಾಣು ಆರ್ಭಟ ಜೋರಾಗಿದ್ದು ಬುಧವಾರ ಒಂದೇ ದಿಂದ ವರದಿಯಲ್ಲಿ 100 ಮಂದಿ ಕೊರೋನಾಗೆ ಬಲಿಯಾದ ಸುದ್ದಿ ಆತಂಕವನ್ನೇ ಸೃಷ್ಟಿಸಿದೆ. ಕರ್ನಾಟಕದಲ್ಲಿ ಬುಧವಾರ 5,619 ಕೊರೋನಾ ಸೋಂಕು ಪತ್ತೆಯಾಗಿದ್ದು  ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,51,449ಕ್ಕೆ ಏರಿಕೆಯಾಗಿದೆ. ಒಂದೇ ದಿನ 100 ಮಂದಿ ಸಾವನ್ನಪ್ಪಿದ್ದು ಸೋಂಕಿಗೆ ಬಲಿಯಾದವರ ಸಂಖ್ಯೆ 2,804ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ ಬುಧವಾರ 29 ಮಂದಿ ಮೃತಪಟ್ಟಿದ್ದು, ಉದ್ಯಾನನಗರಿಯಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 1163ಕ್ಕೆ ಏರಿಕೆಯಾಗಿದೆ. ಮೈಸೂರಿನಲ್ಲಿ 11 ಮಂದಿ, ದಕ್ಷಿಣ ಕನ್ನಡದಲ್ಲಿ 10 ಮಂದಿ , ಶಿವಮೊಗ್ಗದಲ್ಲಿ 6 ಮಂದಿ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಇಂದಿನ 05/08/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_…

ಬಂಬೂ ವೆಜ್ ಬಿರಿಯಾನಿ.. ಸ್ವಾದ ಹೇಗಿದೆ ಗೊತ್ತಾ?

ತರಕಾರಿಯಲ್ಲಿ ಹಲವಾರು ಬಗೆಯ ಬಿರಿಯಾನಿ ಮಾಡಬಹುದು. ನಳ ಪಾಕ ಪ್ರವೀಣರು ‘ಬಿದಿರು ತರಕಾರಿ ಬಿರಿಯಾನಿ’ ತಯಾರಿಕೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಈ ‘ಬಿದಿರು ತರಕಾರಿ ಬಿರಿಯಾನಿ’ ಘಮಿಸುವ ಸುವಾಸಾಸನೆಯ ಜೊತೆ ಸ್ವಾದಿಷ್ಟ ರುಚಿಯೂ ಹೌದು. ಇದನ್ನು ಮಾಡುವ ವಿಧಾನವೂ ಸುಲಭ.. ಈರುಳ್ಳಿ 1 ವರೆ ಕಪ್ ಟೊಮ್ಯಾಟೋ 2 ಕಪ್ ಬೀನ್ಸ್ 1 ವರೆ ಕಪ್ ಕ್ಯಾರೆಟ್ 1 ಕಪ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಚಮಚ ಪುದಿನ ಸೊಪ್ಪು 1 ಕಪ್ ಕೊತ್ತಂಬರಿ ಸೊಪ್ಪು 1 ಕಪ್ ಬಿರಿಯಾನಿ ಹುಡಿ 2 ಚಮಚ ಲವಂಗ 5 ಏಲಕ್ಕಿ 2 ಚೆಕ್ಕೆ 1 ಚಮಚ ನಕ್ಷತ್ರ ಹೂ 1 ಕಾಯಿ ಮೆಣಸು 2 ಲಿಂಬೆ ರಸ 3 ಚಮಚ ತುಪ್ಪ 5 ಚಮಚ ಎಣ್ಣೆ ಅರ್ಧ ಕಪ್ ಕಲ್ಲುಪ್ಪು 2 ಚಮಚ ಅರಿಶಿನ ಹುಡಿ 1 ಚಮಚ ಅಕ್ಕಿ…

ರಾಮಮಂದಿರ ಶಿಲಾನ್ಯಾಸ; ಶ್ರೀ ಕ್ಷೇತ್ರ ಪೊಳಲಿಯಲ್ಲಿ ಕೈಂಕರ್ಯ

ಮಂಗಳೂರು: ಬಹುತೇಕ ಹಿಂದೂ ಸಂಘಟನೆಗಳ ಪ್ರಮುಖರೂ ಕೊರೋನಾ ಸಂಕಟದಿಂದಾಗಿ ಅಯೋಧ್ಯೆಯ ಸಮಾರಂಭದಲ್ಲಿ ಭಾಗಿಯಾಗಿಲ್ಲ. ಬದಲಾಗಿ ತಮ್ಮ ಊರುಗಳಲ್ಲೇ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಮಂದಿರ ನಿರ್ಮಾಣ ಕಾರ್ಯ ನಿರ್ವಿಘ್ನವಾಗಿ ನಡೆಯಲೆಂದು ಪುರಾಣ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ವಿಶೇಷ ಕೈಂಕರ್ಯ ನೆರವೇರಿಸಲಾಯಿತು. ಪೊಳಲಿ ಕ್ಷೇತ್ರದಲ್ಲಿ ಅಮ್ಮನವರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ನೇತೃತ್ವದಲ್ಲಿ ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪ್ರಾರ್ಥನೆ ನೆರವೇರಿತು. ಬಿಜೆಪಿ ನಾಯಕರಾದ ದೇವಪ್ಪ ಪೂಜಾರಿ, ವೆಂಕಟೇಶ್ ನಾವಡ, ತಾ.ಪಂ ಸದಸ್ಯ ಯಶವಂತ ಪೊಳಲಿ, ಯುವ ಮೋರ್ಚಾದ ಸುದರ್ಶನ್ ಬಜ, ಪ್ರದೀಪ್ ಅಜ್ಜಿಬೆಟ್ಟು, ಅಶ್ವಥ್, ಕಾರ್ತಿಕ್ ಬಳ್ಳಾಲ್, ಕಿಶೋರ್ ಪಲ್ಲಿಪ್ಪಾಡಿ, ಲೋಕೇಶ್ ಭರಣಿ, ನಂದರಾಮ್ ರೈ, ಸುಕೇಶ್ ಚೌಟ, ವಾಮನ ಆಚಾರ್ಯ ಮೊದಲಾದವರು ಈ ಕೈಂಕರ್ಯದಲ್ಲಿ ಭಾಗವಹಿಸಿದ್ದರು. ಇನ್ನೊಂದೆಡೆ, ಮಂಗಳೂರಿನ ಬೆಳ್ಳೂರಿನಲ್ಲಿ ಹಿಂದೂ ಕಾರ್ಯಕರ್ತರು ವೆಶೇಷ ಪೂಜಾ ಕಾರ್ಯಕ್ರಮ ನೆರವೇರಿಸಿ ಅಯೋಧ್ಯೆಯಲ್ಲಿನ ಕಾರ್ಯಕ್ರಮಕ್ಕೆ…

ಕರಾವಳಿ ಶೈಲಿ ‘ಪನೀರ್ ಗೀ ರೋಸ್ಟ್’ನ ರುಚಿ ಸವಿದಿದ್ದೀರಾ?

ಹೋಟೆಲ್’ನಲ್ಲಿ ಸ್ನೇಹಿತರಿಗೆ ಪಾರ್ಟಿ ಕೊಡುವಾಗ ಪಕ್ಕ ವೆಜ್ ಅಂದುಕೊಂಡವರಿಗೆ ಚಿಕನ್-ಮಟನ್’ಗೆ ಪರ್ಯಾಯವಾಗಿ ಆಯ್ಕೆ ಮಾಡುವ ಪದಾರ್ಥವೇ ಪನೀರ್.. ಹಾಲಿನಿಂದ ತಯಾರಾದ ಪನೀರ್’ನಲ್ಲಿ ಹಲವಾರು ಸ್ವಾದಿಷ್ಟ ಪದಾರ್ಥಗಳನ್ನು ತಯಾರಿಸಬಹುದು. ಉತ್ತರ ಭಾರತ ಶೈಲಿಯ ಖಾದ್ಯಕ್ಕಿಂತಲೂ ವಿಶಿಷ್ಟವಾಗಿ ಕರಾವಳಿ ಶೈಲಿ (ಉಡುಪಿ ಶೈಲಿ) ಡಿಶ್ ಅಂದ್ರೆ… ಅದು ವಿಶಿಷ್ಟದಲೂ ವಿಶಿಷ್ಟ. ಅದರಲ್ಲೂ ಮಂಗಳೂರು-ಉಡುಪಿ ಕಡೆ ಔತಣಕ್ಕೆ ಪ್ರತಿಷ್ಠೆ ಕರುಣಿಸುವ ‘ಪನೀರ್ ಗೀ ರೋಸ್ಟ್’ನ ರುಚಿ ಸವಿದಿದ್ದೀರಾ? ಹಾಗಿದ್ದರೆ ಈ ರೀತಿ ‘ಪನೀರ್ ಗೀ ರೋಸ್ಟ್’ ತಯಾರಿಸಿ ರುಚಿ ಸವಿಯಿರಿ.. ಇದನ್ನು ಮಾಡುವ ವಿಧಾನವೂ ಸುಲಭ..    

ಕಾಶೀ ಮಠದಲ್ಲಿ ಋಗುಪಾಕರ್ಮ; ಸಂಯಮಿಂದ್ರ ತೀರ್ಥರಿಂದ ವಿಶೇಷ ಕೈಂಕರ್ಯ

ಮಂಗಳೂರು : ಬಂದರು ನಗರಿಯ ಕೊಂಚಾಡಿಯಲ್ಲಿರುವ ಕಾಶೀ ಮಠದಲ್ಲಿ ಇದೀಗ ವಿಶೇಷ ಉತ್ಸವ ಕಾಲ. ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿ ಅವರು ಈ ಕ್ಷೇತ್ರದಲ್ಲಿ ಚಾತುರ್ಮಾಸ್ಯ ಆಚರಿಸುತ್ತಿದ್ದು ಈ ಹಿನ್ನೆಲೆಯಲ್ಲಿ ನಿತ್ಯ ಧಾರ್ಮಿಕ ಕಾರ್ಯಕ್ರಮಗಳು ಆಯೋಜಿತವಾಗಿವೆ. ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ ಮಂಗಳವಾರ ನೂಲ ಹುಣ್ಣಿಮೆ- ಋಗುಪಾಕರ್ಮ ಪ್ರಯುಕ್ತ ವಿಶೇಷ ಕೈಂಕರ್ಯ ನೆರವೇರಿತು. ಚಾತುರ್ಮಾಸ ನಿರತ ಶ್ರೀಗಳವರು ಶ್ರೀ ಸಂಸ್ಥಾನದ ಆರಾಧ್ಯ ದೇವರಾದ ಶ್ರೀ ವ್ಯಾಸರಘುಪತಿ ನರಸಿಂಹ ದೇವರಿಗೆ ವೈದಿಕ ವಿಧಿ ವಿಧಾನದೊಂದಿಗೆ ಪೂಜಿಸಲ್ಪಟ್ಟ ಪವಿತ್ರ ನೂಲನ್ನು ತೊಡಿಸಿದರು. ಬಳಿಕ ನೆರೆದ ಸಮಾಜ ಬಾಂಧವರಿಗೆ ಯಜ್ನೋಪವೀತಧಾರಣೆ ಶ್ರೀಗಳವರ ಸಾರಥ್ಯದಲ್ಲಿ ನೆರವೇರಿತು. ಶ್ರಾವಣ ಶುದ್ಧ ಪೌರ್ಣಮಿ (ನೂಲ ಹುಣ್ಣಿಮೆಯ)ಯಂದು ಆಚರಿಸಲಾಗುವ ಯಜ್ಞೋಪವೀತ ಧಾರಣೆ ನಗರದ ಸೇರಿದಂತೆ ತಾಲೂಕಿನ ಹಲವು ಭಾಗಗಳಲ್ಲಿ ಭಾನುವಾರ…

ಶಿಲಾನ್ಯಾಸಕ್ಕೂ ಮುನ್ನ ಲಕ್ಷದೀಪೋತ್ಸವ; ಅಯೋಧ್ಯೆಯಲ್ಲಿ ಅನನ್ಯ ದೃಶ್ಯಾಧಾರೆ..

ಅಯೋಧ್ಯೆ: ಶ್ರೀ ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಸುಮಾರು ಐನೂರು ವರ್ಷಗಳ ನಂತರ ವಿಶೇಷ ಸಡಗರ. ಭವ್ಯ ರಾಮ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರುವ ಮುನ್ನಾ ಮಂಗಳವಾರ ದಿನ ರಾತ್ರಿ ನಡೆದ ಲಕ್ಷ ದೀಪೋತ್ಸವ ರಾಮ ಭಕ್ತರ ಸಡಗರವನ್ನು ಹೆಚ್ಚಿಸಿದೆ. ಶಿಲಾನ್ಯಾಸ ಸ್ಥಳವಾಗಿರುವ ಸರಾಯೂ ನದಿ ತೀರದ ಪ್ರದೇಶದಲ್ಲಿ ರಾಮಸ್ಮರಣೆ ಜೋರಾಗಿಯೇ ಸಾಗಿದೆ. ಈ ಸಂದರ್ಭದಲ್ಲೇ ರಾತ್ರಿ ವಿಶೇಷ ಪೂಜಾ ಮಹೋತ್ಸವ ಹಾಗೂ ಲಕ್ಷ ದೀಪೋತ್ಸವ ನೆರವೇರಿದೆ. ಊರ ಜನರು ಲಕ್ಷಾಂತರ ದೀಪ ಹಚ್ಚಿ ಈ ಕೈಂಕರ್ಯದಲ್ಲಿ ಕೈ ಜೋಡಿಸಿದರು. ನಾಡಿನ ವಿವಿಧೆಡೆಯ ಯತಿಗಳು, ಧಾರ್ಮಿಕ ಮುಖಂಡರೂ ಭಾಗಿಯಾಗಿದ್ದರು. ರಾಮ ಮಂದಿರ ಭೂಮಿ ಪೂಜೆಯನ್ನು ಒಂದು ಮಹೋತ್ಸವದ ರೀತಿಯಲ್ಲಿ ದೇಶದ ಜನ ಸಂಭ್ರಮಿಸುತ್ತಿದ್ದು, ರಾಮ ಹುಟ್ಟಿದ ನಾಡು ಅಯೋಧ್ಯೆ ನಗರ ಅಲಂಕಾರದಿಂದ ಕಂಗೊಳಿಸುತ್ತಿದೆ. ಮಂಗಳವಾರದಿಂದ ಹಲವು ಧಾರ್ಮಿಕ ವಿಧಿ ವಿಧಾನಗಳಿಗೆ ಚಾಲನೆ ದೊರೆಯುವ ಮೊದಲು ನಡೆದ ದೀಪೋತ್ಸವ, ದೀಪ…

‘ದಿ ಕಾರ್ಗಿಲ್ ಗರ್ಲ್..’ ವೀರ ವನಿತೆಯ ಸಾಹಸ ಗಾಥೆ; ಟ್ರೈಲರ್’ನಲ್ಲೇ ಅಡಗಿದೆ ಥ್ರಿಲ್

ವರ್ಷಗಳ ಹಿಂದೆ ಪ್ರಸಿದ್ಧ ತಾರೆಯರ ಅಭಿನಯದ ಬಾರ್ಡರ್ ಸಿನಿಮಾ ಗಡಿಯಲ್ಲಿನ ಯುದ ಸನ್ನಿವೇಶವನ್ನು ಅನಾವರಣಮಾಡಿತ್ತು. ಇದೀಗ ಅಂಥದ್ದೇ ಯುದ ಕೌತುಕವನ್ನು ಹುಟ್ಟಿಸಿದೆ ‘ಗುನ್ಜನ್ ಸಕ್ಸೆನಾ: ದಿ ಕಾರ್ಗಿಲ್ ಗರ್ಲ್’ ಚಿತ್ರ. ಈ ಚಿತ್ರದ ಟ್ರೈಲರ್ ಬಿಡುಗಡೆಯಾಡಿದ್ದು ಬಾಲಿವುಡ್’ನಲ್ಲಿ ಸಕತ್ ಸದ್ದು ಮಾಡುತ್ತಿದೆ. ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅಭಿನಯದ ‘ಗುನ್ಜನ್ ಸಕ್ಸೆನಾ: ದಿ ಕಾರ್ಗಿಲ್ ಗರ್ಲ್’ ಚಿತ್ರವು ಓರ್ವ ವೀರ ವನಿತೆಯ ಜೀವನಾಧಾರಿತ ಕಥೆಯನ್ನು ಹೊಂದಿದೆ ಎಂಬ ವಿಚಾರದಿಂದಾಗಿ ಕುತೂಹಲ ಹೆಚ್ಚಿಸಿರುವುದು.

ಪ್ಲಾಸ್ಮಾ ದಾನಕ್ಕೆ ಎಸಿಪಿ ಪ್ರೇರಣೆ; ದಾನಿಗಳ ಸಂಖ್ಯೆ ಹೆಚ್ಚಳಕ್ಕೆ ಡಿಜಿಪಿ ಸಂತಸ

ಬೆಂಗಳೂರು: ಕೊರೋನಾ ಇಲಾಖೆ ಕೂಡಾ ನಲುಗಿದೆ. ಅಂಕ ಪೊಲೀಸರೂ ಕೊರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದಿದ್ದಾರೆ. ಈ ನಡುವೆ ಕೊರೋನಾ ಸೋಂಕಿಗೊಳಗಾಗಿ ಗುಣಮುಖರಾದವರು ಇತರರ ಪಾಲಿಗೂ ಜೀವಸಂಜೀವಿನಿಯಾಗುತ್ತಿದ್ದಾರೆ. ಅದರಲ್ಲೂ ಪೊಲೀಸರನೇಕರು ಪ್ಲಾಸ್ಮಾ ದಾನ ಮಾಡಲು ಮುಂದೆ ಬರುತ್ತಿದ್ದಾರೆ. ಕೆಲ ದಿನಗಳ ಹಿಂದೆ ಎಸಿಪಿ ಸತೀಶ್ ಅವರು ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾದ ನಂತರ ಪ್ಲಾಸ್ಮಾ ದಾನ ಮಾಡಿದ್ದರು. ಅವರ ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಅಷ್ಟೇ ಅಲ್ಲ ಇತರರಿಗೂ ಪ್ಲಾಸ್ಮಾ ದಾನ ಮಾಡಲು ಅವರು ಪ್ರೇರಣೆಯಾದರು. ಇದೀಗ ಹಲವು ಪೊಲೀಸರು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡು ಇದೀಗ ಪ್ಲಾಸ್ಮಾ ದಾನ ಮಾಡಲು ಮುಂದೆ ಬಂದಿದ್ದಾರೆ. ಈ ಬಗ್ಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. Many of the policemen recovered from Covid 19 are coming forward to donate PLASMA…

ರಾಮಭಕ್ತರನ್ನು ರೊಚ್ಚಿಗೆಬ್ಬಿಸಿದ ಹಾಡು.. ಪೂಜಾ ಹಾಡಿನ ಮೋಡಿ ಹೇಗಿದೆ ಗೊತ್ತಾ?

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಂಬಂಧ ಪ್ರಕ್ರಿಯೆಗಳು ಬಿರುಸುಗೊಂಡಿದೆ. ಶಿಲಾನ್ಯಾಸ ಸಮಾರಂಭದ ಸನ್ನಿವೇಶದಿಂದಾಗಿ ರಾಮ ಜನ್ಮಸ್ಥಾನ ಸುತ್ತಮುತ್ತಲ ನಗರಗಳಲ್ಲಿ ಹಬ್ಬದ ವಾತಾವರಣ ಕಂಡುಬಂದಿದೆ. ಈ ಸಡಗರ ಅಯೋಧ್ಯೆಗಷ್ಟೇ ಸೀಮಿತವಾಗಿಲ್ಲ. ದೇಶವ್ಯಾಪಿ ಕೇಸರಿ ಕಾರ್ಯಕರ್ತರಲ್ಲಿ ಸಂಭ್ರಮ ಮೂಡಿಸಿದೆ. ಈ ಸಂದರ್ಭದಲ್ಲಿ ವಿಶೇಷ ಹಾಡೊಂದು ರಾಮಭಕ್ತರನ್ನು ರೊಚ್ಚಿಗೆಬ್ಬಿಸಿದೆ. ‘ಮೇರಾ ಭಾರತ್ ಕ ಬಚ್ಚಾ ಬಚ್ಚಾ ಜೈ ಜೈ ಶ್ರೀ ರಾಮ್ ಬೋಲೆಗ’ ಹಾಡು ಶ್ರೀಮ ಭಕ್ತರ ಉತ್ಸಾಹವನ್ನು ಹೆಚ್ಚಿಸಿದೆ. ಸುಮಾರು 2 ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ಹರಿದಾಡಿತ್ತಾದರೂ, ಇತ್ತೀಚಿನ ಕೆಲವು ದಿನಗಳಲ್ಲಿ ಈ ಹಾಡು ಮುನ್ನೆಲೆಗೆ ಬಂದಿದೆ. ಪೂಜಾ ಗೊಲ್ಹಾನಿಯಾ ಹಾಡಿನ ಮೋಡಿ ಎಲ್ಲರ ಗಮನವನ್ನು ಸೂಜಿಗಲ್ಲಿನಂತೆ ಸೆಳೆದಿದೆ. ಎಲ್ಲೆಲ್ಲೂ ಈ ಹಾಡೇ ಝೇಂಕರಿಸುತ್ತಿದ್ದು, ಭಾರೀ ಸುದ್ದಿಯಾಗುತ್ತಿದೆ. ಇದನ್ನೂ ನೋಡಿ..  ‘ದಿ ಕಾರ್ಗಿಲ್ ಗರ್ಲ್..’ ವೀರ ವನಿತೆಯ ಸಾಹಸ ಗಾಥೆ; ಟ್ರೈಲರ್’ನಲ್ಲೇ ಅಡಗಿದೆ ಥ್ರಿಲ್