ಶಿಲಾನ್ಯಾಸಕ್ಕೂ ಮುನ್ನ ಲಕ್ಷದೀಪೋತ್ಸವ; ಅಯೋಧ್ಯೆಯಲ್ಲಿ ಅನನ್ಯ ದೃಶ್ಯಾಧಾರೆ..

ಅಯೋಧ್ಯೆ: ಶ್ರೀ ರಾಮನ ಜನ್ಮಸ್ಥಳ ಅಯೋಧ್ಯೆಯಲ್ಲಿ ಸುಮಾರು ಐನೂರು ವರ್ಷಗಳ ನಂತರ ವಿಶೇಷ ಸಡಗರ. ಭವ್ಯ ರಾಮ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರುವ ಮುನ್ನಾ ಮಂಗಳವಾರ ದಿನ ರಾತ್ರಿ ನಡೆದ ಲಕ್ಷ ದೀಪೋತ್ಸವ ರಾಮ ಭಕ್ತರ ಸಡಗರವನ್ನು ಹೆಚ್ಚಿಸಿದೆ.

ಶಿಲಾನ್ಯಾಸ ಸ್ಥಳವಾಗಿರುವ ಸರಾಯೂ ನದಿ ತೀರದ ಪ್ರದೇಶದಲ್ಲಿ ರಾಮಸ್ಮರಣೆ ಜೋರಾಗಿಯೇ ಸಾಗಿದೆ. ಈ ಸಂದರ್ಭದಲ್ಲೇ ರಾತ್ರಿ ವಿಶೇಷ ಪೂಜಾ ಮಹೋತ್ಸವ ಹಾಗೂ ಲಕ್ಷ ದೀಪೋತ್ಸವ ನೆರವೇರಿದೆ. ಊರ ಜನರು ಲಕ್ಷಾಂತರ ದೀಪ ಹಚ್ಚಿ ಈ ಕೈಂಕರ್ಯದಲ್ಲಿ ಕೈ ಜೋಡಿಸಿದರು. ನಾಡಿನ ವಿವಿಧೆಡೆಯ ಯತಿಗಳು, ಧಾರ್ಮಿಕ ಮುಖಂಡರೂ ಭಾಗಿಯಾಗಿದ್ದರು.

ರಾಮ ಮಂದಿರ ಭೂಮಿ ಪೂಜೆಯನ್ನು ಒಂದು ಮಹೋತ್ಸವದ ರೀತಿಯಲ್ಲಿ ದೇಶದ ಜನ ಸಂಭ್ರಮಿಸುತ್ತಿದ್ದು, ರಾಮ ಹುಟ್ಟಿದ ನಾಡು ಅಯೋಧ್ಯೆ ನಗರ ಅಲಂಕಾರದಿಂದ ಕಂಗೊಳಿಸುತ್ತಿದೆ. ಮಂಗಳವಾರದಿಂದ ಹಲವು ಧಾರ್ಮಿಕ ವಿಧಿ ವಿಧಾನಗಳಿಗೆ ಚಾಲನೆ ದೊರೆಯುವ ಮೊದಲು ನಡೆದ ದೀಪೋತ್ಸವ, ದೀಪ ಅಲಂಕಾರಗಳಿಂದ ಅಯೋಧ್ಯೆ ಹಾಗೂ ಸರಯೂ ನದಿ ಬಳಿ ಇರುವ ಘಾಟ್ ಗಳು ಅನನ್ಯ ದೃಶ್ಯಗಳಿಂದ ಕಂಗೊಳಿಸುತ್ತಿದ್ದವು.

ಇದನ್ನೂ ಓದಿ. ರಾಮಭಕ್ತರನ್ನು ರೊಚ್ಚಿಗೆಬ್ಬಿಸಿದ ಹಾಡು.. ಪೂಜಾ ಹಾಡಿನ ಮೋಡಿ ಹೇಗಿದೆ ಗೊತ್ತಾ?

 

Related posts