ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಈ ವರೆಗೂ ಸೋಂಕಿಗೆ 2230 ಮಂದಿ ಬಲಿಯಾಗಿದ್ದಾರೆ. ಗುರುವಾರ ಒಂದೇ ದಿನ 83 ಮಂದಿ ಸಾವನ್ನಪ್ಪಿದ್ದು 6128 ಹೊಸ ಪ್ರಕರಣಗಳು ವರದಿಯಾಗುವ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 1,18,632ಕ್ಕೇರಿಕೆಯಾಗಿದೆ. ಈ ಕುರಿತು ಮಾಹಿತಿ ಬಹಿರಂಗಪಡಿಸಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬೆಂಗಳೂರು ನಗರದಲ್ಲಿ ಗುರುವಾರ 2,233 ಹೊಸ ಪ್ರಕರಣಗಳು ವರದಿಯಾಗಿವೆಎಂದು ಹೇಳಿದೆ. ಮೈಸೂರಿನಲ್ಲಿ 430, ಬಳ್ಳಾರಿಯಲ್ಲಿ 343, ಉಡುಪಿಯಲ್ಲಿ 248, ಬೆಂಗಳೂರು ಗ್ರಾಮಾಂತರದಲ್ಲಿ 224, ಕಲಬುರಗಿಯಲ್ಲಿ 220, ಬೆಳಗಾವಿಯಲ್ಲಿ 202 ಹೊಸ ಕೇಸ್’ಗಳು ಪತ್ತೆಯಾಗಿವೆ. ದಕ್ಷಿಣ ಕನ್ನಡದಲ್ಲಿ 198, ಧಾರವಾಡದಲ್ಲಿ 180, ರಾಯಚೂರಿನಲ್ಲಿ 166, ಶಿವಮೊಗ್ಗದಲ್ಲಿ 143, ಚಿಕ್ಕಮಗಳೂರಿನಲ್ಲಿ 126, ವಿಜಯಪುರದಲ್ಲಿ 124, ಉತ್ತರಕನ್ನಡದಲ್ಲಿ 120, ರಾಮನಗರದಲ್ಲಿ 106, ತುಮಕೂರಿನಲ್ಲಿ 104 ಹೊಸ ಸೋಂಕಿನ ಪ್ರಕರಣಗಳು ದೃಢಪಟ್ಟಿವೆ ಎಂದು ಹೆಲ್ತ್ ಬುಲೆಟಿನ್ ಹೇಳಿದೆ.
Year: 2020
ಭಾರೀ ಚರ್ಚೆಗೆ ಕಾರಣವಾಯಿತೇ ಕೈ ಶಾಸಕ ರಿಜ್ವನ್ ಅರ್ಷದ್ ಟ್ವೀಟ್
ಬೆಂಗಳೂರು: ಕೊರೋನಾ ವೈರಾಣು ಇಡೀ ದೇಶವನ್ನು ತತ್ತರಗೊಳ್ಳುವಂತೆ ಮಾಡಿದೆ. ಅದರಲ್ಲೂ ಕರ್ನಾಟಕದಲ್ಲಿ ನಿತ್ಯವೂ ಸಾವಿರಾರು ಸಂಖ್ಯೆಯಲ್ಲಿ ಸೋಂಕಿತರ ಹೆಸರುಗಳು ಪಟ್ಟಿಯನ್ನು ಸೇರುತ್ತಿವೆ. ಇದನ್ನೂ ಓದಿ.. ಬಿಲ್ ವಾರ್ ; ಪ್ರಭಾವಿಗಳ ಬವರಿಳಿಸಿದ ಕನ್ನಡತಿ ಐಪಿಎಸ್ ಅಧಿಕಾರಿ ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಕಾಂಗ್ರೆಸ್ ನಾಯಕ, ಶಾಸಕ ರಿಜ್ವನ್ ಅರ್ಷದ್ ಮಾಡಿರುವ ಟ್ವೀಟ್ ಪರಿಸ್ಥಿತಿಯ ವೈಚಿತ್ರ್ಯದತ್ತ ಬೊಟ್ಟು ಮಾಡಿದೆ. ಅಂದು ಕೊರೋನಾ ಸೋಂಕಿತರ ಸಂಖ್ಯೆ 1 ಸಾವಿರಕ್ಕೂ ಕಡಿಮೆ ಇದ್ದಾಗ ಇಡೀ ದೇಶವನ್ನೇ ಲಾಕ್ ಮಾಡಲಾಗಿತ್ತು; ಇದೀಗ ಸೋಂಕಿತರ ಸಂಖ್ಯೆ 10 ಲಕ್ಷ ದಾಟಿದಾಗ ಬಾಯಿಗಳಿಗೆ ಬೀಗ ಹಾಕಲಾಗಿದೆ ಎಂದು ಶಾಸಕ ರಿಜ್ವನ್ ಅರ್ಷದ್ ಅವರು ಟ್ವೀಟ್ ಮಾಡಿದ್ದಾರೆ. After all, Karnataka's Health Minister Sriramulu was right when he said "Only God can save us”#BJPfailsCoronaFight pic.twitter.com/kMNHOptXst — Rizwan Arshad (@ArshadRizwan)…
ಕೊರೋನಾ ಸೋಂಕಿತರ ಮೇಲೆ ದುಬಾರಿ ಬಿಲ್ ಪ್ರಯೋಗ; ಸಚಿವ ಡಾ.ಸುಧಾಕರ್ ಕೆಂಡಾಮಂಡಲ
ಬೆಂಗಳೂರು: ಕೊರೋನಾ ವಾವಳಿಯಿಂದಾಗಿ ರಾಜ್ಯದ ಜನ ತತ್ತರಿಸಿದ್ದು ಚಿಕಿತ್ಸೆಗಾಗಿ ಸೋಂಕಿತರು ಪರದಾಡುವಂತಾಗಿದೆ ಎಂಬ ಅಸಮಾಧಾನದ ಮಾತುಗಳು ಹರಿದಾಡುತ್ತಿವೆ. ಇನ್ನೊಂದೆಡೆ ಸೋಂಕಿತರ ಚಿಕಿತ್ಸೆಗಾಗಿ ಆಸ್ಪತ್ರೆಗಳು ದುಬಾರಿ ಶುಲ್ಕ ವಸೂಲಿ ಮಾಡುತ್ತಿವೆ ಎಂಬ ಆರೋಪಗಳೂ ಪ್ರತಿಧ್ವನಿಸಿವೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ರಾಜರಾಜೇಶ್ವರಿನಗರ ಖಾಸಗಿ ಆಸ್ಪತ್ರೆಯಲ್ಲಿನ ಅವಾಂತರ ಬಗ್ಗೆ ಐಜಿಪಿ ಡಿ.ರೂಪಾ ಸಿಡಿಮಿಡಿಗೊಂಡು ಶಿಸ್ತು ಕ್ರಮದ ಎಚ್ಚರಿಕೆ ನೀಡಿದ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಬೆಚ್ಚಿದ ಆಸ್ಪತ್ರೆ ರೋಗಿಗಳಿಂದ ಪಡೆದಿರುವ ಹೆಚ್ಚುವರಿ ಹಣವನ್ನು ವಾಪಸ್ ಮಾಡಿದೆ. ಈ ನಡುವೆ, ಬೆಂಗಳೂರಿನ ಶೇಷಾದ್ರಿಪುರಂನ ಆಸ್ಪತ್ರೆ ಕೂಡಾ ಸುದ್ದಿಯಲ್ಲಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಕೊರೊನಾ ರೋಗಿಗೆ 5 ಲಕ್ಷ ಬಿಲ್ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ.. ಪ್ರಭಾವಿಗಳ ಆಸ್ಪತ್ರೆಗಳನ್ನೇ ನಡುಗಿಸಿದ ಕನ್ನಡತಿ ಐಪಿಎಸ್ ಅಧಿಕಾರಿ ಈ ಬಗ್ಗೆ ಮಾಹಿತಿ ಪಡೆದಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಆ ಆಸ್ಪತ್ರೆಗೆ ಎಚ್ಚರಿಕೆ ನೀಡಿದ್ದಾರೆ.…
ರಾಷ್ಟ್ರವನ್ನು ಭದ್ರಪಡಿಸುವುದಕ್ಕಿಂತ ದೊಡ್ಡ ಪುಣ್ಯವಿಲ್ಲ; ದೇವ ಭಾಷೆಯಲ್ಲಿ ಟ್ವೀಟ್ ಮಾಡಿದ ಪ್ರಧಾನಿ
ದೆಹಲಿ: ಫ್ರಾನ್ಸ್’ನಲ್ಲಿ ನಿರ್ಮಾಣಗೊಂಡಿರುವ ರಫೇಲ್ ಯುದ್ಧ ವಿಮಾನಗಳು ಅಂಬಾಲ ವಾಯು ನೆಲೆಗೆ ಬಂದಿಳಿದಿದ್ದು, ಈ ವಿಮಾನಗಳ ಸೇರ್ಪಡೆ ಮೂಲಕ ಭಾರತದ ವಾಯುಪಡೆಗೆ ಭೀಮ ಬಲ ಬಂದಿದೆ. ಅಂಬಾಲದಲ್ಲಿ ಬುಧವಾರ ಈ ವಿಮಾನಗಳನ್ನು ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭೌದೂರಿಯಾ ಬರಮಾಡಿಕೊಂಡಾಗ ಇಡೀ ದೇಶದ ಮಂದಿ ಪುಳಕಿತರಾದರು. ಹರಿಯಾಣದ ಅಂಬಾಲ ವಾಯುನೆಲೆಗೆ ಮೊದಲ ತಂಡದ 5 ರಫೇಲ್ ಯುದ್ಧ ವಿಮಾನಗಳ ಆಗಮನ ಸನ್ನಿವೇಶ ಬಗ್ಗೆ ಸಂತಸ ಹಂಚಿಕೊಂಡಿರುವ ಪ್ರಧಾನಿ ನರೇಂದ್ರಮೋದಿ, ದೇವ ಭಾಷೆ ಸಂಸ್ಕೃತದಲ್ಲಿ ಟ್ವೀಟ್ ಮಾಡಿ ಗಮನಸೆಳೆದಿದ್ದಾರೆ. ರಾಷ್ಟ್ರವನ್ನು ಭದ್ರಪಡಿಸುವುದಕ್ಕಿಂತ ದೊಡ್ಡ ಪುಣ್ಯವಿಲ್ಲ ಎಂದವರು ಹೇಳಿದ್ದಾರೆ. राष्ट्ररक्षासमं पुण्यं, राष्ट्ररक्षासमं व्रतम्, राष्ट्ररक्षासमं यज्ञो, दृष्टो नैव च नैव च।। नभः स्पृशं दीप्तम्…स्वागतम्! #RafaleInIndia pic.twitter.com/lSrNoJYqZO — Narendra Modi (@narendramodi) July 29, 2020 ಇದನ್ನೂ ಓದಿ.. ಒಂದೇ ನಂಬರ್..…
ಕೊರೋನಾ ತಲ್ಲಣ; ರಾಜ್ಯದಲ್ಲಿ 369 ಮಂದಿ ಸೋಂಕಿತರ ಸ್ಥಿತಿ ಗಂಭೀರ
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಲೇ ಇದ್ದು ಇತ್ತೀಚಿನ ದಿನಗಳಲ್ಲಿ ಪ್ರತೀ ದಿನ 5 ಸಾವಿರಕ್ಕೂ ಹೆಚ್ಚು ಹೊಸ ಕೇಸ್’ಗಳು ಪತ್ತೆಯಾಗುತ್ತಿವೆ. ಅದರಲ್ಲೂ ಬೆಂಗಳೂರಿನಲ್ಲಿ ಸೋಂಕಿನ ವೇಗ ಆತಂಕಕಾರಿ ಎಂಬಂತಿದೆ. ರಾಜ್ಯದಲ್ಲಿ ಬುಧವಾರ 5503 ಹೊಸ ಸೋಂಕಿನ ಪ್ರಕರಣಗಳು ದೃಢಪಟ್ಟಿದ್ದು 92 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 1,12,504ಕ್ಕೇರಿಕೆಯಾಗಿದೆ. ಬೆಂಗಳೂರಿನಲ್ಲಿ 50 ಸಾವಿರ ಕೇಸ್: ಬೆಂಗಳೂರಿನಲ್ಲಿ ಬುಧವಾರ 2270 ಮನದಿಯಲ್ಲಿ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಇದರೊಂದಿಗೆ ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ 51,091ಕ್ಕೆ ಏರಿಕೆಯಾಗಿದೆ. ಈ ಪೈಕಿ 36,224 ಸಕ್ರಿಯ ಪ್ರಕರಣಗಳಿವೆ. ಇದೇ ರೀತಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 67447 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 369 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. https://twitter.com/DHFWKA/status/1288452782416998401
ಬಿಟಿ ಸಿಟಿಗೆ ಖ್ಯಾತಿಯ ಗರಿ; ‘ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್’ಗೆ ಮುನ್ನುಡಿ
ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದಿಂದಾಗಿ ಇಡೀ ವಿಶ್ವದ ಗಮನ ಸೆಳೆದಿರುವ ಬೆಂಗಳೂರು ಇದೀಗ ಬಯೊ ಟಡಕ್ನಾಲಜಿ ವಿಚಾರದಲ್ಲೂ ಜಗತ್ತಿನ ಗಮನ ಕೇಂದ್ರೀಕರಿಸಿದೆ. ಈ ಸಂಬಂಧ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಕುತೂಹಲದ ಕೇಂದ್ರಬಿಂದುವಾಯಿತು. ಸುಮಾರು ಎರಡು ದಶಕಗಳ ಕನಸಾಗಿದ್ದ ’ಬೆಂಗಳೂರು ಲೈಫ್ ಸೈನ್ಸೆಸ್ ಪಾರ್ಕ್’ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಡಿಗಲ್ಲು ಹಾಕಿದ್ದಾರೆ. ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಉಪಸ್ಥಿತಿಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಈ ಮಹತ್ವಾಕಾಂಕ್ಷೆಯ ಪಾರ್ಕ್‌ಗೆ ಶಿಲಾನ್ಯಾಸ ನೆರವೇರಿಸಿದರು. ಎಲೆಕ್ಟ್ರಾನಿಕ್ ಸಿಟಿ ಬಳಿ ಸುಮಾರು 5,000 ಕೋಟಿ ರೂಪಾಯಿ ಹೂಡಿಕೆಯಲ್ಲಿ ತಲೆ ಎತ್ತಲಿರುವ ಈ ‘ಲೈಫ್ ಸೈನ್ಸೆಸ್ ಪಾರ್ಕ್’ನಿಂದ ಬೆಂಗಳೂರು ಬಿಟಿ ರಾಜಧಾನಿ ಎಂಬ ಹಿರಿಮೆಯನ್ನು ಉಳಿಸಿಕೊಳ್ಳಲಿದೆ.
ಒಂದೇ ನಂಬರ್.. 4 ಮೊಬೈಲ್’ಗಳಲ್ಲಿ ಬಳಕೆ : WhatsApp ಹೊಸ ಫೀಚರ್ ಬಗ್ಗೆ ಗೊತ್ತಾ?
ಸಾಮಾಜಿಕ ಜಾಲತಾಣಗಳ ಪೈಕಿ ಜನಸ್ನೇಹಿಯಾಗಿರುವ ವಾಟ್ಸಪ್ ಇದೀಗ ತನ್ನ ಚಂದಾದಾರರಿಗೆ ಮತ್ತಷ್ಟು ಅನುಕೂಲ ಕಲ್ಪಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಫೇಸ್’ಬುಕ್’ನ ಅಂಗ ಸಂಸ್ಥೆ ವಾಟ್ಸಪ್ ದಿಟ್ಟ ಹೆಜ್ಜೆ ಇಟ್ಟಿದೆ. ಒಂದೇ ನಂಬರಿನ ವಾಟ್ಸಪ್’ನ್ನು ನಾಲ್ಕು ಮೊಬೈಲ್ ಸೆಟ್’ಗಳಲ್ಲಿ ಆಪರೇಟ್ ಮಾಡಲು ಸಾಧ್ಯವಾಗುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ಪ್ರಸ್ತುತ ಒಂದು ನಂಬರಿನಲ್ಲಿ ಇನ್’ಸ್ಟಾಲ್ ಮಾಡಿರುವ ವಾಟ್ಸಪ್’ನ ಆಪ್ ಅದೇ ಹೊತ್ತಿಗೆ ಬೇರೋದು ಸೆಟ್’ನಲ್ಲಿ ಬಳಸಲು ಸಾಧ್ಯವಿಲ್ಲ. ಒಂದು ಮೊಬೈಲ್ ಸೆಟ್ ಹಾಗೂ ನಿಗದಿತ ಅಂತರದಲ್ಲಿ ಒಂದು ವೆಬ್ ವಾಟ್ಸಾಪ್ ಮೂಲಕ ಬಳಕೆ ಸಾಧ್ಯವಿದೆ. ಇನ್ನು ಮುಂದೆ ಮಲ್ಟಿ ಡಿವೈಸ್ ಫೀಚರನ್ನು ನೀಡಲು ವಾಟ್ಸಪ್ ಮುಂದಾಗಿದೆ. ಈ ಮೂಲಕ ಯಾರಾದರೂ ತಮ್ಮ ಒಂದೇ ವಾಟ್ಸಪ್ ನಂಬರನ್ನು ಏಕಕಾಲದಲ್ಲಿ ನಾಲ್ಕು ಬೇರೆಬೇರೆ ಡಿವೈಸ್ ಗಳಲ್ಲಿ ಬಳಸಲು ಅನುಕೂಲವಾಗಲಿದೆ. ಸಧ್ಯ ವಾಟ್ಸಪ್ ಬಿಟಾ ಆವೃತ್ತಿಯಲ್ಲಿ ಈ ಫೀಚರ್ ಲಭ್ಯವಿದ್ದು, ಶೀಘ್ರದಲ್ಲೇ ಎಲ್ಲರೂ…
ಶಾಲೆಗಳನ್ನು ತೆರೆಯುವ ಅವಸರ ಸರ್ಕಾರಕ್ಕಿಲ್ಲ; ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ
ಬೆಂಗಳೂರು: ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳ ಚಟುವಟಿಕೆಗಳು ಸ್ತಬ್ಧವಾಗಿದ್ದು ಶಾಲಾ ಕಾಲೇಜುಗಳ ಆರಂಭ ಸದ್ಯಕ್ಕಿಲ್ಲ. ನವೆಂಬರ್ ತಿಂಗಳಲ್ಲಿ ಶಾಲಾ ಕಾಲೇಜು ಆರಂಭವಾಗುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರುತ್ತಿದ್ದು ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಪ್ರಸ್ತುತ ಆನ್’ಲೈನ್ ಶಿಕ್ಷಣ ಮತ್ತು ಶಾಲಾ ಚಟುವಟಿಕೆ ಕುರಿತಂತೆ ಸರ್ಕಾರೇತರ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಚಿವ ಎಸ್. ಸುರೇಶ್ ಕುಮಾರ್ ವೆಬಿನಾರ್’ನಲ್ಲಿ ನಡೆಸಿದ ಸಮಾಲೋಚನೆ ಕುತೂಹಲದ ಕೇಂದ್ರಬಿಂದುವಾಯಿತು. ವಿವಿಧ ರೀತಿಯ ಸಲಹೆಗಳು ಕೇಳಿಬಂದವು. ಈ ಸಂದರ್ಭದಲ್ಲಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ ಸಚಿವರು, ಪ್ರಸಕ್ತ ಸನ್ನಿವೇಶದಲ್ಲಿ ಶಾಲೆಗಳನ್ನು ತೆರೆಯುವ ಅವಸರ ಸರ್ಕಾರಕ್ಕಿಲ್ಲ. ಮಕ್ಕಳ ಹಿತದೃಷ್ಟಿಯಿಂದ ಅವಸರದಲ್ಲಿ ಶಾಲೆ ತೆರೆಯುವುದಿಲ್ಲ ಎಂದು ಹೇಳಿದರು. ಮಕ್ಕಳನ್ನು ಕಲಿಕೆಗೆ ನೆರವಾಗಲು ಮನೆಶಾಲೆ, ತಂತ್ರಜ್ಞಾನಾಧಾರಿತ ಶಿಕ್ಷಣ, ಆಕಾಶವಾಣಿ, ದೂರದರ್ಶನ, ಶಿಕ್ಷಣ ಇಲಾಖೆಯ ಚಾನೆಲ್ ಸೇರಿದಂತೆ ಎಲ್ಲ ಅವಕಾಶವನ್ನೂ ಮುಕ್ತವಾಗಿರಿಸಿಕೊಂಡು…
ಸಿನಿಮಾವಾಗುತ್ತಿರುವ ಮರ್ಯಾದಾ ಹತ್ಯೆ ಸನ್ನಿವೇಶ; ‘ಮರ್ಡರ್’ ಟ್ರೇಲರ್
ಕ್ರಿಯಾಶೀಲ ನಿರ್ದೇಶನಕ್ಕೆ ಹೆಸರಾಗಿರುವ ರಾಮಗೋಪಾಲ್ ವರ್ಮಾ ಇದೀಗ ‘ಮರ್ಡರ್’ ವಿಚಾರದಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ. ವರ್ಷಗಳ ಹಿಂದಿನ ತೆಲಂಗಾಣದಲ್ಲಿ ತಲ್ಲಣ ಸೃಷ್ಟಿಸಿದ್ದ ಮರ್ಯಾದಾ ಹತ್ಯೆ ಘಟನೆಯ ಸನ್ನಿವೇಶಗಳನ್ನು ಮುಂದಿಟ್ಟು ‘ಮರ್ಡರ್’ ಸಿನಿಮಾ ನಿರ್ಮಿಸಲಾಗಿದ್ದು ಅದರ ಟ್ರೈಲರ್ ಬಿಡುಗಡೆಯಾಗಿದೆ.
ಬೆಂಗಳೂರಿನಲ್ಲಿ ಕುಸಿದ ಬೃಹತ್ ಕಟ್ಟಡ; ಭಯಾನಕ ದೃಶ್ಯ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡವೊಂದು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಗಾಂಧೀನಗರದಲ್ಲಿ ಬಹುಮಹಡಿ ಕಟ್ಟಡವೊಂದಕ್ಕೆ ತಳಪಾಯ ನಿರ್ಮಿಸಲು ನೆಲವನ್ನು ಅಗೆಯಲಾಗಿದೆ. ಅದರ ಪಕ್ಕದಲ್ಲೇ ಮತ್ತೊಂದು ಬೃಹತ್ ಕಟ್ಟಡ ನಿರ್ಮಾಣ ಹಂತದಲ್ಲಿತ್ತು. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು ಇನ್ನೇನು ಕೆಲ ಸಮಯದಲ್ಲೇ ಈ ಕಟ್ಟಡ ಸೇವೆಗೆ ಸಮರ್ಪಣೆಯಾಗಬೇಕಿತ್ತು. ಈ ಬೃಹತ್ ಕಟ್ಟಡ ಇದ್ದಕ್ಕಿದ್ದಂತೆ ನೆಲಕ್ಕುರುರುಳಿದೆ. ಈ ಭಯಾನಕ ದೃಶ್ಯ ಮೊಬೈಲ್’ನಲ್ಲಿ ಸೆರೆಯಾಗಿದ್ದು ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. https://www.facebook.com/UdayaNewsUpdate/videos/3629394847090671/?eid=ARAvLTnKSQLviv6c3ALFwDgdSyuZPNur099JKvH3AMlqCEF8Op81-0pl_IZ4uo9laauQlNGKt-c-ZsDH ಇದನ್ನೂ ಓದಿ.. ಕಡಲ ತೀರದಲ್ಲಿ ಸುನಾಮಿ ರೀತಿ ಅಲೆ? ಪ್ರವಾಹದ ಸುಳಿಯಲ್ಲಿ ಸಿಲುಕಿದ ಜನ.. ಭಾಯಾನಕ ದೃಶ್ಯ
