ಬೆಂಗಳೂರು: ನಭೋಮಂಡಲ ಇಂದು ವಿಶೇಷ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಭಾನು ಭುವಿ ಚಂದ್ರ ನಡುವಿನ ನೆರಳು ಬೆಳಕಿನ ಆಟವನ್ನು ಜನ ಕಣ್ತುಂಬಿಕೊಂಡರು. ಶಾರ್ವರಿ ಸಂವತ್ಸರದ ಮೊದಲ ಖಂಡಗ್ರಾಸ ಸೂರ್ಯಗ್ರಹಣ ಇದಾಗಿದ್ದು ಬೆಳಿಗ್ಗೆ 10.04 ಗಂಟೆಗೆ ಆರಂಭವಾಗಿ ಮಧ್ಯಾಹ್ನ 1.38ರ ತನಕ ನೆರಳು ಬೆಳಕಿನಾಟಕ್ಕೆ ಸಾಕ್ಷಿಯಾಯಿತು. ವಿವಿಧ ದೇಶಗಳಲ್ಲಿ ವಿಭಿನ್ನ ಸಮಯದಲ್ಲಿ ಈ ಗ್ರಹಣ ಗೋಚರಿಸಿತು. ಭಾರತದಲ್ಲೂ ಬೇರೆಬೇರೆ ಸಮಯದಲ್ಲಿ ಗ್ರಹಣ ಆರಂಭ ಹಾಗೂ ವಿಮುಕ್ತಿತಾಯಿತು. ಈ ನಡುವೆ ಗ್ರಹಣದ ಸಂದರ್ಭದಲ್ಲಿ ನಾಡಿನ ದೇವಾಲಯಗಳಲ್ಲಿ ಪೂಜೆ ಪುನಸ್ಕಾರಗಳು ನಡೆಯಲಿಲ್ಲ. ಮೈಸೂರಿನ ಚಾಮುಂಡೇಶ್ವರಿ, ಧರ್ಮಸ್ಥಳ ಮಂಜುನಾಥ ಕ್ಷೇತ್ರ, ಕುಕ್ಕೆ ಸುಬ್ರಹ್ಮಣ್ಯ ದೇಗುಲ, ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ, ಪೊಳಲಿ ರಾಜರಾಜೇಶ್ವರಿ ದೇವಾಲಯ ಸೇರಿದಂತೆ ರಾಜ್ಯದ್ಯಂತ ಬಹುತೇಕ ದೇವಸ್ಥಾನಗಳಲ್ಲಿ ಗ್ರಹಣ ಅವಧಿಯಲ್ಲಿ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ರಾಜ್ಯ ರಾಧಾನಿ ಬೆಂಗಳೂರಿನ ಕಾಡುಮಲ್ಲೇಶ್ವರ, ಗವಿಗಂಗಾಧರೇಶ್ವರ, ದೊಡ್ಡ ಗಣಪತಿ, ಕೋಟೆ ಆಂಜನೇಯ ಸ್ವಾಮಿ, ಬನಶಂಕರಿ ದೇವಾಲಯ ಸಹಿತ…
Year: 2020
ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದ ಸಿಬ್ಬಂದಿ ನಿರಾಳ
ಬೆಂಗಳೂರು; ಅಗೋಚರ ಕೊರೋನಾ ವೈರಾಣು ಬಗ್ಗೆ ಆತಂಕದಲ್ಲಿದ್ದ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದ ಸಿಬ್ಬಂದಿ ಈಗ ನಿರಾಳರಾಗಿದ್ದಾರೆ. ಕೃಷ್ಣಾದಲ್ಲಿ ಕರ್ತವ್ಯನಿರತ ಮಹಿಳಾ ಪೇದೆಯ ಪತಿಯಲ್ಲಿ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಚಟುವಟಿಕೆಗಳನ್ನು ಸ್ತಬ್ಧಗೊಳಿಸಲಾಗಿತ್ತು. ಸಿಎಂ ಅವರ ಕೆಲಸ ಕಾರ್ಯ ವಿಧಾನಸೌಧಕ್ಕೆ ಶಿಫ್ಟ್ ಮಾಡಲಾಗಿತ್ತು. ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾ ಸೀಲ್’ಡೌನ್ ಆಗಿದ್ದರಿಂದ ಸಾರ್ವಜನಿಕರ ಪ್ರವೇಶ ನಿರಾಕರಿಸಲಾಗಿತ್ತು. ಇದೀಗ ಮಹಿಳಾ ಪೇದೆಯನ್ನೂ ಪರೀಕ್ಷೆಗೆ ಗುರಿಪಡಿಸಲಾಗಿದ್ದು ಕೊರೋನಾ ವರದಿ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮೂಡಿದ ಆತಂಕ ದೂರವಾಗಿದೆ. ಜೊತೆಗೆ ಎಲ್ಲ ಚಟುವಟಿಕೆಗಳು ಮೊದಲಿನಂತೆ ಪ್ರಾರಂಭಗೊಂಡಿವೆ.
ರಾಜ್ಯದಲ್ಲಿ ‘ಸಪ್ತಪದಿ’ ಕಾರ್ಯಕ್ರಮ ಸದ್ಯಕ್ಕಿಲ್ಲ
ಬೆಂಗಳೂರು: ಕೊರೋನಾ ವೈರಾಣು ಹಾವಳಿ ರಾಜ್ಯ ಸರ್ಕಾರದ ‘ಸಪ್ತಪದಿ’ ಕಾರ್ಯಕ್ರಮಕ್ಕೂ ಅಡ್ಡಿಯಾಗಿದೆ. ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ‘ಎ’ ದರ್ಜೆ ದೇವಸ್ಥಾನಗಳ ವತಿಯಿಂದ ‘ಸಪ್ತಪದಿ’ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಿದೆ. ಆದರೆ ಕೊರೋನಾ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳ ‘ಸಪ್ತಪದಿ’ ಯೋಜನೆ ಪರಿಪೂರ್ಣವಾಗಿಲ್ಲ. ಹಾಗಾಗಿ ವಿವಾಹ ದಿನಾಂಕಗಳನ್ನು ಸರ್ಕಾರ ಮುಂದೂಡಿದೆ. ಜುಲೈ ಮತ್ತು ಆಗಸ್ಟ್ ತಿಂಗಳ ಶುಭ ಮುಹೂರ್ತದಲ್ಲಿ ‘ಸಪ್ತಪದಿ’ ನಿರ್ಧರಿಸಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಈ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಿರುವ ಮಂದಿಗೆ ಮಾಹಿತಿ ನೀಡಿ ಮುಂದಿನ ಸಾಮೂಹಿಕ ವಿವಾಹ ಕಾರ್ಯಕ್ರಮ ದಿನಾಂಕ ಸೂಚಿಸುವ ಕುರಿತು ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೂ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಸೂಚಿಸಿದ್ದಾರೆ.
ದೇಶದಲ್ಲಿ ಕೊರೋನಾ ತಲ್ಲಣ; ಸೋಂಕಿತರ ಸಂಖ್ಯೆ 4 ಲಕ್ಷಕ್ಕೂ ಹೆಚ್ಚು
ದೆಹಲಿ: ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿರುವ ಕೊರೋನಾ ವೈರಾಣು ಭಾರತದಲ್ಲಿ ಶರವೇಗದಲ್ಲಿ ಹಬ್ಬುತ್ತಿದ್ದು ಸೋಂಕಿತರ ಸಂಖ್ಯೆ ಸೋಂಕಿತರ ಸಂಖ್ಯೆ 4.10 ಲಕ್ಷಕ್ಕೆ ಏರಿಕೆಯಾಗಿದೆ. ಭಾನುವಾರ ಬಹಿರಂಗವಾಗಿರುವ ಮಾಹಿತಿಯಂತೆ ಹೊಸದಾಗಿ 15,413 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಭೀತಿಯ ಸುಳಿಯಲ್ಲಿ ದೇಶ ಸಿಲುಕಿದ್ದು ಶನಿವಾರ ರಾತ್ರಿವರೆಗೆ 24ತಾಸುಗಳಲ್ಲಿ ಸುಮಾರು 306 ಮಂದಿ ಸಾವನ್ನಪ್ಪಿದ್ದು, ಇದರೊಂದಿಗೆ ಸಾವಿನ ಸಂಖ್ಯೆ ಕೂಡ 13,254ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಲಾಕ್’ಡೌನ್ ಸಡಿಲಿಕೆಯಾದ ನಂತರ ಅಂದರೆ ಜೂನ್ 1ರಿಂದ 20ರ ನಡುವೆ ಸುಮಾರು 2 ಲಕ್ಷ ಸೋಂಕಿತರು ಪತ್ತೆಯಾಗಿದ್ದಾರೆಂದು ಕೇಂದ್ರ ಸರ್ಕಾರದ ಅಂಕಿ ಅಂಶ ಹೇಳುತ್ತಿದೆ. ಮಹಾರಾಷ್ಟ್ರದಲ್ಲಿ ಈವರೆಗೆ 1,28,205 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ದೆಹಲಿಯಲ್ಲಿ ಈವರೆಗೆ 56,746 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.
ದೇಶ ರಕ್ಷಕ ಯೋಧರಿಂದಲೂ ಯೋಗ ತಾಲೀಮು
ದೆಹಲಿ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಾಡಿನೆಲ್ಲೆಡೆ ಯೋಗ ಕಾರ್ಯಕ್ರಮಗಳು ಗಮನಸೆಳೆದವು. ವಿವಿಧ ಸಂಘ ಸಂಸ್ಥೆಗಳು ಯೋಗ ದಿನಾಚಾರಣೆ ಅಂಗವಾಗಿ ಯೋಗ ಪ್ರದರ್ಶನಗಳನ್ನು ನಡೆದಿಸಿದರೆ ಗಡಿ ಭಾಗಗಳಲ್ಲಿ ಸೈನಿಕರ ಯೋಗ ಕಾರ್ಯಕ್ರಮಗಳೂ ಗಮನ ಸೆಳೆದವು. ಭಾರತ ಪಾಕ್ ಗಡಿ ಭಾಗ, ಸಿಕ್ಕಿಂ ಗಡಿ ಪ್ರದೇಶ, ಟಿಬೆಟ್ ಗಡಿ ಕಾಯುತ್ತಿರುವ ಯೋಧರು ತಮ್ಮ ಕಾಯಕದ ನಡುವೆಯೂ ಈ ಯೋಗ ದಿನ ಆಚರಿಸಿ ದೇಶದ ಜನರಿಗೆ ಯೋಗ ದಿನದ ಮಹತ್ವ ಸಾರಿದರು. ಮಂಜು ಆವರಿಸಿದ ಪ್ರದೇಶದಲ್ಲೂ ಕಠಿಣ ಕಾಯಕದ ನಡುವೆ ಯೋಧರು ನಡೆಸಿದ ಯೋಗ ತಾಲೀಮು ಕೂಡಾ ಜನರ ಗಮನ ಕೇಂದ್ರೀಕರಿಸಿತು.
ಯಲಹಂಕ ಬಳಿ ಬೈಕ್ ದುರಂತ; ಮೂವರ ದುರ್ಮರಣ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಯಲಹಂಕ ಬಳಿ ಇಂದು ಬೆಳ್ಳಂಬೆಳಗ್ಗೆ ಭೀಕರ ಅಪಘಾತ ಸಂಭವಿಸಿದೆ. ಬೈಕ್ ಅಪಘಾತಕ್ಕೀಡಾಗಿ ಮೂವರು ಯುವಕರು ಸಾವನ್ನಪ್ಪಿದ್ದಾರೆ. ಯಲಹಂಕದ ಜೆಕೆವಿಕೆ ಬಳಿ ಈ ಅಪಘಾತ ಸಂಭವಿಸಿದೆ. ಮೃತಪಟ್ಟವರನ್ನು ಮಾಜ್ ಅಹಮ್ಮದ್ ಖಾನ್(17) ಹಾಗೂ ಸಯ್ಯದ್ ರಿಯಾಜ್ (22) ಹಾಗೂ ಮಹಮ್ಮದ್ ಆದಿ ಆಯಾನ್ (16) ಎಂದು ಗುರುತಿಸಲಾಗಿದೆ. ಯುವಕರು ಹೆಲ್ಮೆಟ್ ಇಲ್ಲದೆ ಬೈಕ್ ಸವಾರಿ ಮಾಡುತ್ತಿದ್ದರು ಎನ್ನಲಾಗಿದೆ. ಬೈಕ್ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದು ಬೈಕ್ ಛಿದ್ರವಾಗಿದೆ. ಬೈಕ್ ಸವಾರರ ತಲೆಗೆ ಬಲವಾದ ಏಟು ಬಿದ್ದಿದ್ದರಿನಾಗಿ ಯುವಕರು ಸಾವನ್ನಪ್ಪಿದ್ದಾರೆ. ಯಲಹಂಕ ಸಂಚಾರಿ ವಿಭಾಗದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವ್ಹೀಲಿಂಗ್ ಅವಾಂತರದಿಂದಾಗಿ ಬೈಕ್’ಗಳು ಮುಖಾ ಮುಖಿ ಡಿಕ್ಕಿಯಾಗಿರಬಹುದೆಂಬ ಸಂಖ್ಯೆಯನ್ನು ವ್ಯಕ್ತಪಡಿಸಿದ್ದಾರೆ.
ಯೋಗಾಯೋಗ; ನಳಿನ್ ಸಹಿತ ಹಲವರಿಂದ ಯೋಗಾಸನ
ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇಂದು ನಾಡಿನೆಲ್ಲೆಡೆ ಆಚರಿಸಲಾಯಿತು. ಕೊರೋನಾ ವೈರಾಣು ನಿಯಂತ್ರಣ ಕಾರಣಕ್ಕಾಗಿ ಸಾರ್ವಜನಿಕ ಯೋಗ ಪ್ರದರ್ಶನಕ್ಕೆ ಅವಕಾಶವಿರಲಿಲ್ಲ. ಹಾಗಾಗಿ ಸಾಮಾಜಿಕ ಆನಂತರ ಕಾಯ್ದುಕೊಂಡು ಸಂಘ ಸಂಸ್ಥೆಗಳ ಕಚೇರಿ, ಆಶ್ರಮ ಸಹಿತ ಹಲವೆಡೆ ಯೋಗ ದಿನ ಆಚರಿಸಲಾಯಿತು. ಬೆಂಗಳೂರಿನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ನಾಯಕರನೇಕರು ಭಾಗವಹಿಸಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ , ರಾಜ್ಯ ಸಂಘಟನಾ ಪ್ರಧಾನಕಾರ್ಯದರ್ಶಿ ಅರುಣ್ ಕುಮಾರ್, ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಸೇರಿದಂತೆ ಅನೇಕರು ಭಾಗಿಯಾಗಿ ಯೋಗಾಸನ ಮಾಡಿ ಗಮನಸೆಳೆದರು.
ಪರಪ್ಪನ ಅಗ್ರಹಾರ ಠಾಣೆ ಪೊಲೀಸರ ವಿರುದ್ದ ಡಿಜಿಪಿಗೆ ದೂರು
ಬೆಂಗಳೂರು: ಪೊಲೀಸರು ಕಾನೂನು ಕಾಪಾಡುವವರೇ ಅಥವಾ ಖಾಸಗಿ ಕಂಪೆನಿಗಳ ಏಜೆಂಟರೇ ಎಂಬ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಉದಾಹರಣೆಯಂತಿದೆ ಬೆಂಗಳೂರಿನ ಪರಪ್ಪನ ಅಗ್ರಹಾರ ಠಾಣೆಯ ಪೊಲೀಸರ ವಿರುದ್ಧದ ಆರೋಪ. ಒಂದು ಕುತೂಹಲಕಾರಿ ದೂರೊಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಸಲ್ಲಿಕೆಯಾಗಿದ್ದು, ಪರಪ್ಪನ ಅಗ್ರಹಾರ ಠಾಣೆಯ ಕೆಲವು ಪೊಲೀಸರು ಖಾಸಗಿ ಕಂಪೆನಿಯ ನೌಕರ ಶಿವರಾಜ್ ಕುಮಾರ್ ಎಂಬವರನ್ನು ಠಾಣೆಗೆ ಕರೆಸಿ ದೌರ್ಜನ್ಯ ನಡೆಸಿ, ಬಲವಂತವಾಗಿ ರಾಜೀನಾಮೆ ಪತ್ರ ಬರೆಸಿಕೊಂಡಿದ್ದಾರೆನ್ನಲಾಗಿದೆ. ಶಿವರಾಜ್ ಕುಮಾರ್ ತಮಗಾಗಿರುವ ಅನ್ಯಾಯದ ಬಗ್ಗೆ ಡಿಜಿಪಿಯವರ ಗಮನಸೆಳೆದಿದ್ದಾರೆ. ಸಬ್ ಇನ್‌ಸ್ಪೆಕ್ಟರ್‌ಗಳಾದ ನಂದೀಶ್, ಆನಂದ್ ಹಾಗೂ ಮುಖ್ಯ ಪೇದೆ ವೆಂಕಟಸ್ವಾಮಿ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಏನಿದು ದೂರು? ದೂರುದಾರ ಶಿವರಾಜ್ ಕುಮಾರ್ ಎಂಬವರು ಪೂರ್ವಗೆಂಜ್ ಕಂಪೆನಿಯ ಉದ್ಯೋಗಿಯಾಗಿದ್ದು, ಆ ಕಂಪೆನಿ ಶಬರಿ ಟೆಲಿಕಾಂ ಎಂಬ ಕಂಪೆನಿಯ ಗುತ್ತಿಗೆ ಕೆಲಸ ವಹಿಸಿದೆ. ಆ ಕೆಲಸಕ್ಕಾಗಿ ಶಿವರಾಜ್ ಕುಮಾರ್…
ಆಪರೇಷನ್ ಕಮಲಕ್ಕೆ ಬಲಿಯಾದವರು ಸೇಫ್ ಅಲ್ಲ?
ಬೆಂಗಳೂರು: ವಿಧಾನ ಪರಿಷತ್ ಚುನಾವಣಾ ರಾಜ್ಯ ಬಿಜೆಪಿಯಲ್ಲಿ ಸಂಚಲನ ಸೃಷ್ಟಿಸಿದೆ. ಆಪರೇಷನ್ ಕಮಲ ಮೂಲಕ ಬಿಜೆಪಿ ಸೇರ್ಪಡೆಯಾಗಿರುವ ಎಲ್ಲರಿಗೂ ಚುನಾವಣೆಯಲ್ಲಿ ಸ್ಪರ್ದಿಸುವ ಅವಕಾಶ ಸಿಕ್ಕಿದೆಯಾದರೂ ಬಿಜೆಪಿ ಸರ್ಕಾರದಲ್ಲಿ ಪಾಲುದಾರನಾಗುವ ಹಿರಿಯ ರಾಜಕಾರಣಿ ಎಚ್.ವಿಶ್ವನಾಥ್ ಅವರ ಕನಸು ಇನ್ನೂ ಈಡೇರಿಲ್ಲ. ಈ ಬಾರಿ ಮೇಲ್ಮನೆಗೆ ಆಯ್ಕೆಯಾಗುವ ಹೊಂಗನಸು ಹೊತ್ತ ಅವರಿಗೆ ಹೈಕಮಾಂಡ್ ಅಡ್ಡಿಯಾಯಿತು. ಈ ವಿಚಾರ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದೆ. ಆಪರೇಷನ್ ಕಮಲಕ್ಕೆ ಬಲಿಯಾದವರು ರಾಜಕೀಯವಾಗಿ ಸೇಫ್ ಅಲ್ಲ ಎಂಬ ಎದುರಾಳಿ ಪಕ್ಷಗಳ ನಾಯಕರ ಪ್ರಶ್ನೆಗೆ ಉತ್ತರಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ ಬಿಜೆಪಿ ನಾಯಕರು. ಈ ಮಧ್ಯೆ, ಹೆಚ್. ವಿಶ್ವನಾಥ್ ಅವರಿಗೆ ಸೂಕ್ತ ಸ್ಥಾನಮಾನ ನೀಡಲಾಗುವುದು ಎಂದು ಬಿಜೆಪಿ ನಾಯಕರು ಹೇಳಿಕೊಂಡಿದ್ದಾರೆ. ಈ ಕುರಿತಂತೆ ಕೊಪ್ಪಳದಲ್ಲಿ ಪ್ರತಿಕ್ರಿಯಿಸಿರುವ ಸಚಿವ ಜಗದೀಶ್ ಶೆಟ್ಟರ್, ವಿಶ್ವನಾಥ್ ಅವರಿಗೆ ಮುಂದಿನ ದಿನಗಳಲ್ಲಿ ಪಕ್ಷ ಸೂಕ್ತ ಸ್ಥಾನಮಾನ ಕೊಟ್ಟು ಗೌರವಿಸಲಿದೆ ಎಂದಿದ್ದಾರೆ. ಇದನ್ನೂ…
ಈ ವರ್ಷ ಪೂರ್ವ ಪ್ರಾಥಮಿಕ ಶಾಲೆ ಬೇಡ; ಸರ್ಕಾರಕ್ಕೆ ಸಲಹೆ
ಬೆಂಗಳೂರು: ನಾಡಿಗೆ ಕೊರೋನಾ ವಕ್ಕರಿಸಿರುವ ಹಿನ್ನೆಲೆಯಲ್ಲಿ ಈ ವರ್ಷ ಪೂರ್ವಪ್ರಾಥಮಿಕ ಶಾಲೆ ತೆರೆಯುವುದೇ ಬೇಡ ಎಂಬ ಅಭಿಪ್ರಾಯ ಸಾರ್ವಜನಿಕವಲಯದಲ್ಲಿ ವ್ಯಕ್ತವಾಗಿದೆ. ಈ ರೀತಿಯ ಅಭಿಪ್ರಾಯಗಳನ್ನು ಮಕ್ಕಳ ಪೋಷಕರು ಶಿಕ್ಷಣ ಇಲಾಖೆ ಮುಂದಿಟ್ಟಿದ್ದಾರೆ. ಇನ್ನುಳಿದ ತರಗತಿಗಳನ್ನೊಳಗೊಂಡ ಶಾಲೆಗಳನ್ನು ಆಗಸ್ಟ್ ಅಂತ್ಯದವರೆಗೂ ಆರಂಭಿಸುವುದೇ ಬೇಡ ಎಂಬ ಒತ್ತಾಯ ಇತ್ತು, ಇದೀಗ ಸೆಪ್ಟೆಂಬರ್ ವರೆಗೆ ಶಾಲಾರಂಭ ಬೇಡ ಎಂದು ಹಲವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಶಾಲಾರಂಭ ಕುರಿತಂತೆ ಪೋಷಕರ ಅಭಿಪ್ರಾಯ ಸಂಗ್ರಹಿಸುವಂತೆ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರ ಸೂಚಿಸಿದ್ದು ಅದರಂತೆ ನಡೆಸಲಾದ ಸಭೆಗಳಲ್ಲಿ ಈ ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ. ಅನೇಕ ಶಾಲೆಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿಸಲಾಗಿದೆ. ಅಂತಹ ಶಾಲೆಗಳಿಗೆ ಕಳುಹಿಸಲು ಹೆತ್ತವರು, ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಕೊರೋನಾ ವೈರಾಣು ಹಾವಳಿ ಸಂಪೂರ್ಣ ಹತೋಟಿಗೆ ಬಂದ ನಂತರವೇ ಶಾಲೆ ಆರಂಭವಾಗಲಿ ಎಂದು ಹೇಳಿಕೊಂಡವರೇ ಹೆಚ್ಚು ಮಂದಿ.
