ಯೋಗಾಯೋಗ; ನಳಿನ್ ಸಹಿತ ಹಲವರಿಂದ ಯೋಗಾಸನ

ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಇಂದು ನಾಡಿನೆಲ್ಲೆಡೆ ಆಚರಿಸಲಾಯಿತು. ಕೊರೋನಾ ವೈರಾಣು ನಿಯಂತ್ರಣ ಕಾರಣಕ್ಕಾಗಿ ಸಾರ್ವಜನಿಕ ಯೋಗ ಪ್ರದರ್ಶನಕ್ಕೆ ಅವಕಾಶವಿರಲಿಲ್ಲ. ಹಾಗಾಗಿ ಸಾಮಾಜಿಕ ಆನಂತರ ಕಾಯ್ದುಕೊಂಡು ಸಂಘ ಸಂಸ್ಥೆಗಳ ಕಚೇರಿ, ಆಶ್ರಮ ಸಹಿತ ಹಲವೆಡೆ ಯೋಗ ದಿನ ಆಚರಿಸಲಾಯಿತು.

ಬೆಂಗಳೂರಿನಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮದಲ್ಲಿ ನಾಯಕರನೇಕರು ಭಾಗವಹಿಸಿದ್ದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ , ರಾಜ್ಯ ಸಂಘಟನಾ ಪ್ರಧಾನಕಾರ್ಯದರ್ಶಿ ಅರುಣ್ ಕುಮಾರ್, ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಸೇರಿದಂತೆ ಅನೇಕರು ಭಾಗಿಯಾಗಿ ಯೋಗಾಸನ ಮಾಡಿ ಗಮನಸೆಳೆದರು.

Related posts