2020ನೇ ಸಾಲಿನ ಪ್ರಶಸ್ತಿ ಘೋಷಣೆ; ಪುರಸ್ಕೃತರ ವಿವರ ಇಂತಿದೆ

ಚಾಮರಾಜನಗರ: ಕರ್ನಾಟಕ ಜಾನಪದ ಅಕಾಡೆಮಿಯು 2020ನೇ ಸಾಲಿನ ಪ್ರಶಸ್ತಿಯನ್ನು ಘೋಷಣೆ ಮಾಡಿದೆ. 30 ಜಿಲ್ಲೆಗಳ ತಲಾ ಒಬ್ಬ ಜಾನಪದ ಕಲಾವಿದರು ಹಾಗೂ ಇಬ್ಬರನ್ನು ತಜ್ಞ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷೆ ಮಾತಾ ಬಿ. ಮಂಜಮ್ಮ ಜೋಗತಿ ಅವರು ಚಾಮರಾಜನಗರಲ್ಲಿ ಸುದ್ದಿಗೋಷ್ಠಿ ನಡೆಸಿ ಅಕಾಡೆಮಿಯ 2020ನೇ ಸಾಲಿನ ವಾರ್ಷಿಕ ಪ್ರಶಸ್ತಿಗಾಗಿ ರಾಜ್ಯದ 30 ಜಿಲ್ಲೆಗಳ 30 ಹಿರಿಯ ಜಾನಪದ ಕಲಾವಿದರು ಹಾಗೂ ಇಬ್ಬರು ಜಾನಪದ ತಜ್ಞರನ್ನು ಆಯ್ಕೆ ಮಾಡಿರುವ ಪಟ್ಟಿ ಪ್ರಕಟಿಸಿದರು. ವಾರ್ಷಿಕ ಗೌರವ ಜಾನಪದ ತಜ್ಞ ಪ್ರಶಸ್ತಿಗೆ ದಕ್ಷಿಣ ಕನ್ನಡ ಜಿಲ್ಲೆಯ ಡಾ. ಗಾಯತ್ರಿ ನಾವಡ ಅವರು ಡಾ. ಜೀ.ಶಂ. ಪಶಸ್ತಿಗೆ ಮತ್ತು ಕಲಬುರ್ಗಿ ಜಿಲ್ಲೆಯ ಬಸವರಾಜ ಸಬರದ ಅವರು ಡಾ. ಗದ್ದಗೀಮಠ ಆಯ್ಕೆಯಾಗಿದ್ದಾರೆ ಎಂದವರು ತಿಳಿಸಿದರು. ಪ್ರಶಸ್ತಿ ಪುರಸ್ಕೃತರ ವಿವರ ಇಂತಿದೆ: ಬೆಂಗಳೂರು ಜಿಲ್ಲೆ ಎಂ.ಕೆ.ಸಿದ್ದರಾಜು-ಜಾನಪದಗಾಯನ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊನ್ನಗಂಗಮ್ಮ-…

ಸರ್ಕಾರಿ ವ್ಯವಸ್ಥೆಯಡಿ ಕೊರೊನಾ ಲಸಿಕೆ ವಿತರಣೆಗೆ ಸಿದ್ಧತೆ

ಬೆಂಗಳೂರು: ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಸವಾಲೊಡ್ಡಿ ನಮ್ಮ ದೇಶದಲ್ಲೇ ಶೀಘ್ರವಾಗಿ ಕೊರೊನಾ ಲಸಿಕೆ ಆವಿಷ್ಕಾರ ಮಾಡಿದ್ದು, ಇದು ಭಾರತೀಯರಿಗೆ ಹೆಮ್ಮೆಯ ವಿಚಾರ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುಧಾಕರ್. ಲಸಿಕೆ ಆವಿಷ್ಕಾರಕ್ಕಾಗಿ ಶ್ರಮವಹಿಸಿದ ವಿಜ್ಞಾನಿಗಳು ಮತ್ತು ಪ್ರೋತ್ಸಾಹಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದಿಸುತ್ತೇನೆ. ಅಭಿವೃದ್ಧಿ ರಾಷ್ಟ್ರಗಳಿಗೆ ಸವಾಲೊಡ್ಡಿ ನಮ್ಮದೇ ಆದ ಕೊರೊನಾ ಲಸಿಕೆ ಕಂಡುಹಿಡಿಯಲಾಗಿದೆ. ಈ ಲಸಿಕೆಯನ್ನು ಮೊದಲಿಗೆ ಕೊರೊನಾ ಯೋಧರಿಗೆ ನೀಡಬಹುದು ಎಂಬ ಅಭಿಪ್ರಾಯ ಇದೆ. 3 ನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆದ ಬಳಿಕ ಅಂತಿಮವಾಗಿ ಪರವಾನಗಿ ದೊರೆಯಬಹುದು. ನಾನು ಕೂಡ ಸಂಬಂಧಪಟ್ಟ ವಿಜ್ಞಾನಿಗಳೊಂದಿಗೆ ಮಾತನಾಡಿದ್ದು, ಇದು ಯಶಸ್ವಿಯಾದ ಲಸಿಕೆ ಹಾಗೂ ಯಾವುದೇ ಅಡ್ಡ ಪರಿಣಾಮ ಇಲ್ಲ ಎಂದು ತಿಳಿದುಬಂದಿದೆ. ಇದು ವಿಶ್ವಕ್ಕೆ ಭಾರತೀಯರ ಕೊಡುಗೆ ಎಂದರು. ಸರ್ಕಾರಿ ವ್ಯವಸ್ಥೆಯಡಿ ಲಸಿಕೆ ವಿತರಣೆ ಮಾಡಲು…

ರಾಜ್ಯದಲ್ಲಿ ಮತ್ತೆ ಮಳೆ ಸಾಧ್ಯತೆ; ಈ ವಾರಾಂತ್ಯವರೆಗೂ ಮೋಡ ಕವಿದ ವಾತಾವರಣ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ತೀವ್ರವಾದ ಹಿನ್ನೆೆಲೆಯಲ್ಲಿ ರಾಜ್ಯದ ವಿವಿಧೆಡೆ ತುಂತುರು ಮಳೆಯಾಗುತ್ತಿದ್ದು , ಜ.9ರ ವರೆಗೆ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು: ರಾಜ್ಯದ ದಕ್ಷಿಣಒಳನಾಡಿನಳ್ಳಿ ಮಳೆಯಾಗುವ ಸಾಧ್ಯತೆಗಳಿವೆ. ಬೆಂಗಳೂರು ಸಹಿತ ರಾಜ್ಯವ್ಯಾಪಿ ಮೋಡಕವಿದ ವಾತಾವರಣ ಕಂಡುಬಂದರೆ, ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಇನ್ನೆರಡು ದಿನಗಳಲ್ಲಿ ಮಳೆಯಾಗುವ ಸಾಧ್ಯತೆಗಳಿವೆ. 64.5 ಮಿ.ಮೀನಿಂದ 115.5 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು ಈ ಹಿನ್ನೆಲೆಯಲ್ಲಿ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ. ಈ ವಾರಾಂತ್ಯದವರೆಗೂ ಅಂದರೆ, ಜ.9ರ ವರೆಗೆ ಬಹುತೇಕ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಕರಾವಳಿ ಸಹಿತ ಅಲ್ಲಲ್ಲಿ ತುಂತುರು ಮಳೆಯಾಗಲಿದೆ. ಚಳಿಯ ವಾತವರಣ ಇರಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ರಾಜ್ಯದಲ್ಲಿ ತುಘಲಕ್ ಸರ್ಕಾರ ನಡೆಯುತ್ತಿದೆ: ಡಿಕೆಶಿ ಆಕ್ರೋಶ

ಬೆಂಗಳೂರು: ‘ರಾಜ್ಯದಲ್ಲಿ ತುಘಲಕ್ ಸರ್ಕಾರ ನಡೆಯುತ್ತಿದೆ. ಕೊರೋನಾ ಸಮಯದಲ್ಲಿ ಸರ್ಕಾರವೇ ಲಾಕ್ ಡೌನ್, ಸೀಲ್ ಡೌನ್ ಮಾಡಿ ಈಗ ಜನ ಸಾಮಾನ್ಯರ ಮೇಲೆ ತೆರಿಗೆ ಹೊರೆ ಹಾಕುತ್ತಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಕೊರೋನಾ ಮತ್ತು ಆರ್ಥಿಕ ಸಂಕಷ್ಟ ಸಂದರ್ಭದಲ್ಲಿ ರಾಜ್ಯ ಸರಕಾರವು ಜನರ ಮೇಲೆ ನಾನಾ ತೆರಿಗೆ ವಿಧಿಸಿರುವುದನ್ನು ಖಂಡಿಸಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಸೋಮವಾರ ಪ್ರತಿಭಟನೆ ನಡೆಸಿತು. ಈ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್ ‘ಈ ವರ್ಷವನ್ನು ಎಲ್ಲ ಕ್ಷೇತ್ರಗಳ ಸ್ಥಳೀಯ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಹೋರಾಟ ಹಾಗೂ ಸಂಘಟನೆ ವರ್ಷವಾಗಿ ಕಾಂಗ್ರೆಸ್ ಘೋಷಣೆ ಮಾಡಿದೆ. ರಾಜ್ಯದ ಸಮಸ್ಯೆ ಬೇರೆ. ಸ್ಥಳೀಯ ಸಮಸ್ಯೆಗಳೇ ಬೇರೆ ಎಂದರು. ಕೊರೋನಾದಿಂದಾಗಿ ಜನ ತತ್ತರಿಸಿದ್ದಾರೆ. ವ್ಯಾಪಾರ ವಹಿವಾಟು ಇಲ್ಲ. ಆದರೂ ಪಾಲಿಕೆ ಹೆಚ್ಚಿನ ತೆರೆಗೆ…

ಕೇಂದ್ರ ಸಚಿವ ಸದಾನಂದ ಗೌಡ ಚೇತರಿಕೆ; ವೈದ್ಯರ ಹೇಳಿಕೆ

ಬೆಂಗಳೂರು: ಆಸ್ಪತ್ರೆಗೆ ದಾಖಲಾಗಿರುವ ಕೇಂದ್ರ ಸಚಿವ ಸದಾನಂದ ಗೌಡ ಚೇತರಿಸಿಕೊಳ್ಳುತ್ತಿದ್ದಾರೆ. ಸಚಿವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸದಾನಂದಗೌಡರು, ನನ್ನ ಆರೋಗ್ಯ ಸುಸ್ಥಿರವಾಗಿದೆ. ಸಕ್ಕರೆ ಅಂಶ ಕಡಿಮೆಯಾಗಿ ಸ್ವಲ್ಪ ಸುಸ್ತಾಗಿತ್ತು. ಈಗ ಆರಾಮಾಗಿದ್ದೇನೆ ಎಂದಿದ್ದಾರೆ. ಎಕೊ, ಇಸಿಜಿ ಸೇರಿದಂತೆ ಎಲ್ಲಾ ಪ್ಯಾರಾಮಿಟರ್ ಗಳು ಸಹಜವಾಗಿವೆ. ಸದೃಢ ಆರೋಗ್ಯಕ್ಕಾಗಿ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು ಎಂದವರು ಹೇಳಿದ್ದಾರೆ. ನನ್ನ ಆರೋಗ್ಯ ಸುಸ್ಥಿರವಾಗಿದೆ. ಸಕ್ಕರೆ ಅಂಶ ಕಡಿಮೆಯಾಗಿ ಸ್ವಲ್ಪ ಸುಸ್ತಾಗಿತ್ತು. ಈಗ ಆರಾಮಾಗಿದ್ದೇನೆ. ಎಕೊ, ಇಸಿಜಿ ಸೇರಿದಂತೆ ಎಲ್ಲಾ ಪ್ಯಾರಾಮಿಟರ್ ಗಳು ಸಹಜವಾಗಿವೆ. ಸದೃಢ ಆರೋಗ್ಯಕ್ಕಾಗಿ ಶುಭ ಹಾರೈಸಿದ ಎಲ್ಲರಿಗೂ ಧನ್ಯವಾದಗಳು. pic.twitter.com/7nJVdwY7K3 — Sadananda Gowda ( Modi Ka Parivar ) (@DVSadanandGowda) January 3, 2021

‘ಹೊಯ್ಸಳ’ದ ಮೋಷನ್ ಪೋಸ್ಟರ್’ನಲ್ಲೇ ಇದೆ ಕೌತುಕ

ವೇದಿಕ್ ವೀರಾ ನಿರ್ದೇಶನದ ‘ಹೊಯ್ಸಳ’ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಅಭಯ್ ವೀರ್ ಅಭಿನಯದ ಈ ಸಿನಿಮಾದ ಮೋಷನ್ ಪೋಸ್ಟರ್ ಭಯಾನಕತೆಯ ಸನ್ನಿವೇಶದ ಕುತೂಹಲವನ್ನು ಹುಟ್ಟಿಸಿದೆ.  

ಮಗು ಲಾಕಪ್ ಡೆತ್; ಪಿಎಸ್ಐ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಅಹೋರಾತ್ರಿ ಪ್ರತಿಭಟನೆ

ಕಲಬುರ್ಗಿ: ಪೊಲೀಸ್ ವಶದಲ್ಲಿದ್ದಾಗ ಮಗು ಸಾವನ್ನಪಿದೆ ಎನ್ನಲಾದ ಪ್ರಕರಣ ಇದೀಗ ವಿವಾದದ ಬಿರುಗಾಳಿಯನ್ನೇ ಎಬ್ಬಿಸಿದೆ. ಕಲಬುರ್ಗಿ ಕಾರಾಗೃಹದಲ್ಲಿ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಸ್ಐ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪೋಷಕರು ಹಾಗೂ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಜೇವರ್ಗಿ ಸಮೀಪದ ಜೈನಾಪುರದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳ ಬೆಂಬಲಿಗರೆನ್ನಲಾದ ಗುಂಪು ಸೋತ ಅಭ್ಯರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಈ ಪ್ರಕರಣ ಸಂಬಂಧ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ತಾಯಿ ಜೊತೆಗಿದ್ದ ಮಗು ಸಾವನಪ್ಪಿದೆ. ಲೀಸಾರು ಹಲ್ಲೆ ನಡೆಸಿದ್ದರಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ಕಲಬುರ್ಗಿಯಲ್ಲಿ ರಸ್ತೆಯಲ್ಲಿ ಮಗುವಿನ ಶವ ಇಟ್ಟು ಆಹೋರಾತ್ರಿ ಪ್ರತಿಭಟನೆ ನಡೆಸಿದ ಸಾರ್ವಜನಿಕರು ಪಿಎಸ್ಐ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

Uncategorized

ಕೃಷಿ ಕಾಯ್ದೆ; ಪ್ರಧಾನಿ ಮೋದಿಗೆ ಸೋನಿಯಾ ಪಾಠ

ದೆಹಲಿ: ಕೇಂದ್ರ ಸರ್ಕಾರ ರೂಪಿಸಿರುವ ಕೃಷಿ ಕಾಯ್ದೆ ವಿರೋಧಿಸಿ ರೈತರ ಹೋರಾಟ ೪೦ ದಿನಕ್ಕೆ ಕಾಲಿಡುತ್ತಿದ್ದಂತೆಯೇ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧೀ ಮತ್ತೊಮ್ಮೆ ಘರ್ಜಿಸಿದ್ದಾರೆ. ಅಹಂಕಾರ ಬದಿಗಿಟ್ಟು ಕೂಡಲೇ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಅವರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು ರೈತರು ಸುದೀರ್ಘ ಹೋರಾಟ ನಡೆಸುತ್ತಿದ್ದರೂ ಸರ್ಕಾರ ವಿವಾದ ಬಗೆಹರಿಸದಿರುವ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಸ್ವಾತಾಂತ್ರ್ಯೋತ್ತರದ ದಿನಗಳಲ್ಲಿ ಇಂತಹ ಅಹಂಕಾರಿ ಸರ್ಕಾರವನ್ನು ತಾವು ಇದೇ ಮೊದಲು ನೋಡುತ್ತಿರುವುದಾಗಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿರುವ ಸೋನಿಯಾ ಗಾಂಧಿ, ಸಾರ್ವಜನಿಕರ ಭಾವನೆಗಳನ್ನು ನಿರ್ಲಕ್ಷಿಸಿ ಹೆಚ್ಚು ದಿನ ಸರ್ಕಾರ ನಡೆಸಲಾಗದು ಎಂದು ಮೋದಿ ಸರ್ಕಾರವನ್ನು ಕುಟುಕಿದ್ದಾರೆ. ಈಗಲೂ ಕಾಲ ಮಿಂಚಿಲ್ಲ, ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಹಂಕಾರವನ್ನು ಬದಿಗಿರಿಸಿ ತಕ್ಷಣವೇ ಬೇಷರತ್ತಾಗಿ ಕೃಷಿ ಕಾನೂನುಗಳನ್ನು ಹಿಂಪಡೆಯಿರಿ ಎಂದಿರುವ ಸೋನಿಯಾ, ಈ ಮೂಲಕ ಜೀವ ಕಳೆದುಕೊಂಡಿರುವ…

ಕೃಷಿ ಕಾಯ್ದೆ ವಿರುದ್ದದ ಹೋರಾಟ; ಮತ್ತೆ ಮೂವರು ರೈತರು ಬಲಿ

ದೆಹಲಿ: ಕೇಂದ್ರ ಸರ್ಕಾರ ರೂಪಿಸಿರುವ ಕೃಷಿ ಕಾಯ್ದೆ ವಿರೋಧಿಸಿ ರೈತರ ಹೋರಾಟ ೪೦ ದಿನಕ್ಕೆ ಕಾಲಿಡುತ್ತಿದ್ದಂತೆಯೇ ಮತ್ತೆ ಮೂವರು ಅನ್ನದಾತರು ಬಲಿಯಾಗಿದ್ದಾರೆ. ದೆಹಲಿಯಲ್ಲಿ ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಕೃಷಿ ಕಾನೂನು ವಿರೋಧಿಸಿ, ಹೋರಾಟ ಮುಂದುವರಿಸಿದ್ದು ಹೋರಾಟದಲ್ಲಿ ಭಾಗಿಯಾಗಿದ್ದ ಮೂವರು ಭಾನುವಾರ ರೈತರು ಮೃತಪಟ್ಟಿದ್ದಾರೆ. ಓರ್ವ ರೈತ ಜ್ವರನ್ನು ಬಳಲಿ ಮೃತಪಟ್ಟಿದ್ದಾರೆ, ಮತ್ತೊಬ್ಬ ಅನ್ನದಾತ ಹೃದಯಸ್ತಂಭನದಿಂದ ಪ್ರಾಣ ಕಳೆದುಕೊಂಡಿದ್ದಾರೆನ್ನಲಾಗಿದೆ.

ಜೆಡಿಎಸ್ ಯುವ ಸೈನ್ಯ ಆಕ್ಟಿವ್, ನಿಖಿಲ್ ಸಾರಥ್ಯದಲ್ಲಿ ರಣತಂತ್ರ

ಬೆಂಗಳೂರು: ಪಂಚಾಯತ್ ಸಮರದಲ್ಲಿ ಹಿನ್ನಡೆಯಾಗುತ್ತಿದ್ದಂತೆಯೇ ಜೆಡಿಎಸ್ ನಾಯಕರು ಮತ್ತೆ ಅಖಾಡಕ್ಕೆ ಹೂಮುಕಿದ್ದಾರೆ. ಈ ಬಾರಿ ಯುವ ಜನರನ್ನು ಪಕ್ಷಕ್ಕೆ ಸೆಳೆಯುವ ತಂತ್ರಗಾರಿಕೆಯನ್ನು ಜೆಡಿಎಸ್ ಅನುಸರಿಸುತ್ತಿದ್ದು ನಟ ನಿಖಿಲ್ ಕುಮಾರ್ ಅವರೇ ಇದರ ಮುಂದಾಳತ್ವ ವಹಿಸಿಹೊಂದಿದ್ದಾರೆ. ರಾಜ್ಯದಲ್ಲಿ ಜನತಾದ ದಳ( ಜಾತ್ಯತೀತ) ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಸೋಮವಾರ ಯುವ ಜನತಾ ದಳ (ಜಾತ್ಯತೀತ) ಮತ್ತು ವಿದ್ಯಾರ್ಥಿ ಜನತಾ ದಳ (ಜಾತ್ಯತೀತ) ವಿಭಾಗದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಕಾರ್ಯಕಾರಿ‌ ಸಮಿತಿಗಳ ಸದಸ್ಯರ ಸಭೆಯನ್ನು ಬೆಂಗಳೂರಿನಲ್ಲಿ ಕರೆಯುವ ಮೂಲಕ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣರಾಗಿದ್ದಾರೆ. ರಾಜ್ಯದಲ್ಲಿ ಜನತಾದ ದಳ( ಜಾತ್ಯತೀತ) ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಯುವ ಜನತಾ ದಳ( ಜಾತ್ಯತೀತ) ಮತ್ತು ವಿದ್ಯಾರ್ಥಿ ಜನತಾ ದಳ( ಜಾತ್ಯತೀತ) ವಿಭಾಗದ ರಾಜ್ಯ, ಜಿಲ್ಲಾ ಹಾಗೂ ತಾಲೂಕು ಕಾರ್ಯಕಾರಿ‌ ಸಮಿತಿಗಳ ಸದಸ್ಯರ ಸಭೆಯನ್ನು ದಿನಾಂಕ 04-01-2021 ರ ಸೋಮವಾರ ಪಕ್ಷದ ಕೇಂದ್ರ‌ಕಚೇರಿ ಜೆಪಿ…