ಬಾಕ್ಸ್ ಆಫೀಸ್‌ನ 12 ನೇ ದಿನದಲ್ಲಿ ₹400 ಕೋಟಿ ಕ್ಲಬ್‌ ಸೇರಿದ “ಗದರ್ 2”

ಸನ್ನಿ ಡಿಯೋಲ್ ಮತ್ತು ಅಮೀಶಾ ಪಟೇಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ “ಗದರ್ 2” ಬಾಕ್ಸ್ ಆಫೀಸ್‌ನಲ್ಲಿ 12 ನೇ ದಿನದಲ್ಲಿ ₹400 ಕೋಟಿ ಕ್ಲಬ್‌ಗೆ ಸೇರುವ ಮೂಲಕ ಗಮನಾರ್ಹ ಮೈಲಿಗಲ್ಲು ಸಾಧಿಸಿದೆ. ಈ ಚಿತ್ರವು ಈ  ದಿನದಂದು ₹11.50 ಕೋಟಿ ಸಂಗ್ರಹಿಸಿದೆ, ಬಿಡುಗಡೆಯಾದಾಗಿನಿಂದ ತನ್ನ ಪ್ರಭಾವಶಾಲಿ ಪ್ರದರ್ಶನವನ್ನು ಕಾಯ್ದುಕೊಂಡಿದೆ. ಅನಿಲ್ ಶರ್ಮಾ ನಿರ್ದೇಶಿಸಿದ “ಗದರ್: ಏಕ್ ಪ್ರೇಮ್ ಕಥಾ” (2001) ನ ಮುಂದಿನ ಭಾಗವು ತನ್ನ ಎರಡನೇ ಮಂಗಳವಾರ ಗಳಿಕೆಯಲ್ಲಿ ಸ್ವಲ್ಪ ಇಳಿಕೆ ಕಂಡಿದೆ.

ಕುಸಿದ ಥಿಯೇಟರ್; ಹತ್ತಕ್ಕೂ ಹೆಚ್ಚು ವಾಹನಗಳಿಗೆ ಹಾನಿ

ಶಿವಮೊಗ್ಗ: ತೀರ್ಥಹಳ್ಳಿಯಲ್ಲಿ ಸಿನಿಮಾ ಮಂದಿರ ಕುಸಿದ ಪರಿಣಾಮ ಹತ್ತಕ್ಕೂ ಹೆಚ್ಚು ವಾಹನಗಳು ಹಾನಿಗೊಳಗಾಗಿವೆ. ‘ಜೈಲರ್’ ಸಿನಿಮಾ ಪ್ರದರ್ಶನದ ವೇಳೆ ಘಟನೆ ನಡೆದಿದೆ. ತೀರ್ಥಹಳ್ಳಿಯ ವಿನಾಯಕ ಥಿಯೇಟರ್ ಕಟ್ಟಡದ ಮುಂಭಾಗವು ಕುಸಿದಿದೆ. ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಪ್ರದರ್ಶನದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದು ಆ ವೇಳೆ 20ಕ್ಕೂ ಹೆಚ್ಚು ಜನ ಚಿತ್ರಮಂದಿರದಲ್ಲಿ ಇದ್ದರು. ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

NEP ಅಂದ್ರೆ ‘ನಾಗಪುರ್ ಶಿಕ್ಷಣ ನೀತಿ’ ಅಂತೀರಿ.. SEP ಅಂದ್ರೆ ‘ಸೋನಿಯಾ ಎಜು ಪಾಲಿಸಿ’? ಸಿದ್ದು ಸರ್ಕಾರಕ್ಕೆ BJP ಪ್ರಶ್ನೆ

ಬೆಂಗಳೂರು: ರಾಜ್ಯ ಸರ್ಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಲು ಮುಂದಾದರೆ ಜನಾಂದೋಲನ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಚ್ಚರಿಕೆ ನೀಡಿದ್ದಾರೆ. ಪೀಪಲ್ಸ್ ಫೋರಂ ಫಾರ್ ಕರ್ನಾಟಕ ಎಜುಜೇಶನ್ ಸಂಸ್ಥೆ ವತಿಯಿಂದ ಏರ್ಪಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಜಾರಿಗಾಗಿ ಶಿಕ್ಷಣ ತಜ್ಞರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಸರ್ಕಾರ ಎನ್ ಇಪಿ ವಿರೋಧ ಮಾಡುತ್ತಿರುವುದರಲ್ಲಿ ಆಶ್ಚರ್ಯ ಇಲ್ಲ. ಅವರು ವಿರೋಧಕ್ಕಾಗಿ ವಿರೋಧ ಮಾಡಿದ್ದಾರೆ. ಅಷ್ಟೊಂದು ವಿಸಿಗಳನ್ನು ಕೂಡಿಸಿಕೊಂಡು ಯಾವುದೇ ಚರ್ಚೆ ಮಾಡದೇ ನಿರ್ಣಯ ಕೈಗೊಂಡಿದ್ದಾರೆ. ಅದನ್ನು ಕುಲಪತಿಗಳು ಪ್ರಶ್ನೆ ಮಾಡದೇ ಸುಮ್ಮನೇ ಎದ್ದು ಬಂದಿರುವುದು ದುರಂತ. ಶಿಕ್ಷಣ ಅಂದರೆ ಸ್ವಂತ ಚಿಂತನೆ, ಸರಿ ತಪ್ಪು ಅಲ್ಲ, ನಿಮಗೆ ಏನು ಅನಿಸಿದೆ. ಅದನ್ನು ಹೇಳಿದ್ದೀರಿ. ಅದನ್ನು ಕೇಳುವ ಮನಸ್ಥಿತಿ ಈ ಸರ್ಕಾರಕ್ಕೆ ಇಲ್ಲ. ಅಂದರೆ ದೇಶಕ್ಕೆ ಮತ್ತೊಂದು ಸ್ವಾತಂತ್ರ್ಯ ಹೋರಾಟದ ಅವಶ್ಯಕತೆ ಇದೆ. ಶಿಕ್ಷಣ…

ಈಶ್ವರಪ್ಪ ಹಾದಿಯಲ್ಲಿ ಮತ್ತಷ್ಟು ನಾಯಕರು.. ಮತ್ತೊಬ್ಬ ಸಂಸದರಿಂದ ರಾಜಕೀಯ ನಿವೃತ್ತಿ ಘೋಷಣೆ

ಚಿಕ್ಕಬಳ್ಳಾಪುರ: ಈಶ್ವರಪ್ಪ ಸಹಿತ ಹಿರಿಯ ಬಿಜೆಪಿ ನಾಯಕರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವಂತೆಯೇ, ಇದೀಗ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಕೂಡಾ ಅದೇ ಹಾದಿಯನ್ನು ಅನುಸರಿಸಿದ್ದಾರೆ. ಅಚ್ಚರಿಯ ತೀರ್ಮಾನ ಪ್ರಕಟಿಸಿರುವ ಸಂಸದ ಬಿ.ಎನ್.ಬಚ್ಚೇಗೌಡ ಅವರು, ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಮಂಗಳವಾರ ಈ ನಿರ್ಧಾರ ಘೋಷಿಸಿದ ಬಿ.ಎನ್.ಬಚ್ಚೇಗೌಡರು, ಪ್ರಧಾನಿ ನರೇಂದ್ರ ಮೋದಿ ಅವರ ಪ್ರಕಾರ ಪಕ್ಷದಲ್ಲಿ ಎಪ್ಪತ್ತು ವರ್ಷ ವಯಸ್ಸಿಗೆ ನಿವೃತ್ತಿಯಾಗಬೇಕು. ಈಗ ನನಗೆ ಎಂಬತ್ತೊಂದು ವರ್ಷ ವಯಸ್ಸಾಗಿದೆ. ಹಾಗಾಗಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು. ನನಗೆ ಪಕ್ಷದಲ್ಲಿ ಟಿಕೆಟ್ ಕೊಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕೂಡಾ ಹೇಳಿದ್ದಾರೆ. ಹಾಗಾಗಿ ನಿವೃತ್ತಿಯಾಗುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಕಾವೇರಿ ನದಿನೀರು ಹಂಚಿಕೆ; ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ರಚನೆ

ಬೆಂಗಳೂರು: ಕರ್ನಾಟಕ-ತಮಿಳುನಾಡು ನಡುವಿನ ಕಾವೇರಿ ನದಿ ನೀರು ಹಂಚಿಕೆ ವಿವಾದದ ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ರಚನೆ ಮಾಡಿದೆ. ಕರ್ನಾಟಕಕ್ಕೆ ನೀರು ಬಿಡುವಂತೆ ಸೂಚಿಸಬೇಕು ಎಂದು ಆಗ್ರಹಿಸಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ಕಾವೇರಿ ವಿವಾದ ಕುರಿತ ವಿಚಾರಣೆಗಾಗಿ ಪ್ರತ್ಯೇಕ ಪೀಠ ರಚನೆಗೆ ಸೋಮವಾರ ತೀರ್ಮಾನ ಪ್ರಕಟಿಸಿತ್ತು. ಅದರಂತೆ ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಪಿ.ಎಸ್.ನರಸಿಂಹ ಮತ್ತು ಬಿ.ಕೆ.ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ರಚನೆ ಮಾಡಿದ್ದಾರೆ. ಈ ತ್ರಿಸದಸ್ಯ ಪೀಠ ಶುಕ್ರವಾರದಿಂದ ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

Uncategorized

ಲೋಕಾಯುಕ್ತ ತಿದ್ದುಪಡಿ ಬಗ್ಗೆ ನಿರಾಸಕ್ತಿ ಏಕೆ? ಸಿಎಂಗೆ ರಮೇಶ್ ಬಾಬು ಪತ್ರ

ಬೆಂಗಳೂರು: ಲೋಕಾಯುಕ್ತರು ಹಾಗೂ ಉಪಲೋಕಾಯುಕ್ತರೂ ತಮ್ಮ ಆಸ್ತಿ ವಿವರ ದಾಖಲಿಸಬಾರದೇಕೆ? ಇಂಥದ್ದೊಂದು ಚರ್ಚೆ ಸಾಮಾಜಿಕ ವಲಯದಲ್ಲಿ ನಡೆಯುತ್ತಲೇ ಇದೆ. ಭ್ರಷ್ಟಾಚಾರಕ್ಕೆ ಅಂಕುಶ ಹಾಕುವ ಹೊಣೆ ಹೊತ್ತವರೇ ಮೊದಲು ಪಾರದರ್ಶಕ ನಡೆ ಅನುಸರಿಸಬೇಕಿದೆ ಎಂಬುದು ಅನೇಕರ ಅಭಿಪ್ರಾಯ. ಆದರೆ ಈ ರೀತಿಯ ಕ್ರಮಕ್ಕೆ ಅಧಿಕಾರಿಗಳು ಮುನ್ನುಡಿ ಬರೆದರೂ ಸರ್ಕಾರ ಮಾತ್ರ ಇಚ್ಚಾಶಕ್ತಿ ತೋರಿಸುತ್ತಿಲ್ಲ ಎಂಬುದಕ್ಕೆ ಈ ಬೆಳವಣಿಗೆ ಸಾಕ್ಷಿಯಾಗಿದೆ. ಲೋಕಾಯುಕ್ತರು ಹಾಗೂ ಉಪಲೋಕಾಯುಕ್ತರು ಪ್ರತೀ ವರ್ಷ ತಮ್ಮ ಆಸ್ತಿ ಹಾಗೂ ದಾಯಿತ್ವ ಪಟ್ಟಿಯನ್ನು ಪ್ರಕಟಿಸಲು ಕಾಯಿದೆಯಲ್ಲಿ ತಿದ್ದುಪಡಿ ಮೂಲಕ ಅನುವು ಮಾಡಿಕೊಡಬೇಕೆಂದು ಕೋರಿ ಮಾಜಿ ಶಾಸಕ ರಮೇಶ್ ಬಾಬು ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. 2021ರ ಜುಲೈ 12ರಂದು ಮುಖ್ಯಮಂತ್ರಿಗೆ ಬರೆದಿದ್ದ ಪತ್ರವನ್ನು ಪರಿಶೀಲಿಸಿರುವ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಕಾರ್ಯದರ್ಶಿಗಳು ಮುಂದಿನ ಕ್ರಮವಿಡುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಕಡತ ರವಾನಿಸಿ ಕೈತೊಳೆದುಕೊಂಡಿದ್ದಾರೆ.…

ಕಣಿವೆ ರಾಜ್ಯದಲ್ಲಿ ರಾಹುಲ್ ಕಮಾಲ್; ಯೋಧರ ಜೊತೆ ಲೇಹ್ ಮಾರುಕಟ್ಟೆಗೆ ಭೇಟಿ

ಶ್ರೀನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೇನಾ ಯೋಧರೊಂದಿಗೆ ಲೇಹ್ ಮಾರುಕಟ್ಟೆಗೆ ಭೇಟಿ ನೀಡಿ ಗಮನಸೆಳೆದರು. ಸೋಮವಾರ ರಾತ್ರಿ ಲೇಹ್ ಮಾರುಕಟ್ಟೆ ಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭದ ವೀಡಿಯೊವನ್ನು ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ರಾಹುಲ್ ಗಾಂಧೀ ಅವರ ಲೇಹ್ ಮಾರುಕಟ್ಟೆಗೆ ಭೇಟಿ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, “ಕೆಲವು ದಿನಗಳ ಹಿಂದೆ ರಾಹುಲ್ ಗಾಂಧಿ ‘ಭಾರತ ಮಾತೆ’ ಪ್ರತಿಯೊಬ್ಬ ಭಾರತೀಯನ ಧ್ವನಿ ಎಂದು ಹೇಳಿದ್ದರು. ಇದೇ ರೀತಿಯದ್ದು ಲೇಹ್‌ನಲ್ಲಿ ಪ್ರತಿಧ್ವನಿಸುತ್ತಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಹುಲ್ ಗಾಂಧಿ ಅವರು ತಮ್ಮ ಎಂಟು ದಿನಗಳ ಲಡಾಖ್ ಪ್ರವಾಸವನ್ನು ಶುಕ್ರವಾರ ಮುಕ್ತಾಯಗೊಳಿಸಲಿದ್ದಾರೆ. ಅವರು ಭಾನುವಾರ ಪ್ಯಾಂಗೊಂಗ್ ಸರೋವರಕ್ಕೆ ಭೇಟಿ ನೀಡಿದ್ದರು, ಈ ಸಂದರ್ಭದಲ್ಲಿ ಅವರು ತಮ್ಮ ತಂದೆ ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 79 ನೇ ಜನ್ಮದಿನ ಅಂಗವಾಗಿ…

ತೆಲಂಗಾಣ ಫೈಟ್‌ಗೆ ಭರ್ಜರಿ ತಯಾರಿ; ಚುನಾವಣೆ ಘೋಷಣೆಗೆ ಮುನ್ನವೇ BRS ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

ಹೈದರಾಬಾದ್: ಮುಂಬರುವ ತೆಲಂಗಾಣ ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿಯಲ್ಲಿ ತೊಡಗಿರುವ ಬಿಆರ್‌ಎಸ್ ಪಕ್ಷ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ವಿಧಾನಸಭಾ ಚುನಾವಣೆಗೆ ಮುನ್ನವೇ 119 ಸ್ಥಾನಗಳ ಪೈಕಿ 115 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಆರ್‌ಎಸ್ ಪಕ್ಷದ ಅಧ್ಯಕ್ಷರೂ ಆದ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಪ್ರಕಟಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪಟ್ಟಿ ಬಿಡುಗಡೆ ಮಾಡಿರುವ ಅವರು, ಅಕ್ಟೋಬರ್ 16 ರಂದು ವಾರಂಗಲ್‌ನಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ ಎಂದರು. 119 ಸ್ಥಾನಗಳಲ್ಲಿ ತಮ್ಮ ಪಕ್ಷವು 95-105 ಸ್ಥಾನಗಳನ್ನು ಗೆಲ್ಲಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

KSRTCಯಿಂದ ಇನ್ನು ಮುಂದೆ ‘ಪಾಯಿಂಟ್ ಟು ಪಾಯಿಂಟ್’ ಹೈಸ್ಪೀಡ್ ಸೇವೆ.. ನೂತನ ‘ಪ್ರೋಟೋ ಟೈಪ್ ವಾಹನ’ ಹೇಗಿದೆ ಗೊತ್ತಾ..?

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದೀಗ ‘ಪಾಯಿಂಟ್ ಟು ಪಾಯಿಂಟ್’ ಮತ್ತು ವೇಗದೂತ ಕಾರ್ಯಾಚರಣೆಗೆ ಹೊಸ ವ್ಯವಸ್ಥೆ ರೂಪಿಸಿದೆ. ಈ ಸೇವೆಗಾಗಿ ನಿಯೋಜಿಸಲಾಗುವ ನೂತನ ಕರ್ನಾಟಕ ಸಾರಿಗೆ ವಾಹನ ‘ಪ್ರೋಟೋ ಟೈಪ್ ವಾಹನ’ ವಿನ್ಯಾಸ ಗಮನಸೆಳೆದಿದೆ. ಈ ವಿನ್ಯಾಸವನ್ನು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ಪರಿಶೀಲಿಸಿದರು. ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಬಸ್ಸುಗಳನ್ನು ಪರಿಶೀಲಿಸಿದ ಸಚಿವರು ಮಾಹಿತಿ ಪಡೆದರು. ಈ ನೂತನ ವ್ಯವಸ್ಥೆಯ ಹೈಲೈಟ್ಸ್ ಹೀಗಿದೆ:  ನೂತನವಾಗಿ ಕಾರ್ಯಾಚರಣೆಗೆ ನಿಯೋಜಿಸಲಾಗುವ ಕರ್ನಾಟಕ ಸಾರಿಗೆ ವಾಹನವನ್ನು ಮೆ. ಕೆ.ಎಂ.ಎಸ್. ಕೋಚ್ ಬಿಲ್ಡರ್ಸ್‌ರವರು ನಿರ್ಮಾಣ ಮಾಡಿದ್ದಾರೆ. ಈ ಬಸ್ಸುಗಳು ಹಲವಾರು ವಿಶಿಷ್ಟತೆಗಳನ್ನು ಹೊಂದಿವೆ.  ವಾಹನದ ಎತ್ತರ 3420 ಮಿ.ಮಿ. ಆಸನಗಳ ಸಂಖ್ಯೆ 52  ಪ್ರಯಾಣಿಕರ ಆಸನ ಬಕೆಟ್ ಟೈಪ್ ವಾಹನದ ಮುಂದಿನ/ ಹಿಂದಿನ ಗಾಜು ವಿಶಾಲವಾಗಿರುತ್ತದೆ.  ಪ್ರಯಾಣಿಕರ ಕಿಟಕಿ ಪ್ರೇಮ್ ಹಾಗೂ ಮೇಲಿನ ಗಾಜು ವಿಶಾಲವಾಗಿರುತ್ತದೆ…

ಮಲೆ ಮಹದೇಶ್ವರ ಪಾದಯಾತ್ರಿಕರ ಸೇವೆಗಾಗಿ ಸದ್ಭಾವ ಸೇವಾ ಸಮಿತಿ ರಚನೆ

ಚಾಮರಾಜನಗರ: ಹನೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಮಹದೇಶ್ವರ ಬೆಟ್ಟದ ಪಾದಯಾತ್ರಿಕರ ಸೇವೆಗಾಗಿ ಸದ್ಭಾವ ಸೇವಾ ಸಮಿತಿ (ರಿ) ಯನ್ನು ಗೋಪಿಶೆಟ್ಟಿಯೂರು ಬಸವಣ್ಣ ಸ್ವಾಮೀಜಿಯವರು ಉದ್ಘಾಟಿಸಿದರು. ಮಹದೇಶ್ವರರ ಚಿತ್ರಕ್ಕೆ ಬಸವಣ್ಣ ಸ್ವಾಮೀಜಿ, ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಶಾಲಾ ಮಕ್ಕಳು ಪುಷ್ಪಾರ್ಚನೆ ನೇವೇರಿಸಿದರು. ಗೋಪಿಶೆಟ್ಟಿಯೂರು ಮಠದ ಬಸವಣ್ಣ ಸ್ವಾಮೀಜಿ ಮಾತನಾಡಿ, ಕಳೆದ 20 ವರ್ಷಗಳಿಂದ ಸತತವಾಗಿ ಹನೂರು ಹಾಗೂ ಸುತ್ತಮುತ್ತಲ ಗ್ರಾಮಗಳಿಂದ ಮಲೆ ಮಹದೇಶ್ವರನ ಸನ್ನಿಧಿಗೆ ಪಾದಯಾತ್ರೆ ಮಾಡುವ ಮೂಲಕ ಸ್ವಾಮಿಯ ಕೃಪೆಗೆ ಪಾತ್ರರಾಗುತ್ತಿದ್ದರು ಈ ಮಾರ್ಗ ಮಧ್ಯದಲ್ಲಿ ಪಾದಯಾತ್ರಿಕರಿಗೆ ಊಟ, ಮಜ್ಜಿಗೆ ,ಪಾನಕ, ನೀರಿನ ವ್ಯವಸ್ಥೆಗಳನ್ನು ಮಾಡಲಾಗುತ್ತಿತ್ತು. ಇದೀಗ ಮಹದೇಶ್ವರನ ಭಕ್ತರು ಸೇರಿ ಮಲೆ ಮಹದೇಶ್ವರನ ಭಕ್ತರಿಗೆ ಪಾದಯಾತ್ರೆ ಸಂದರ್ಭದಲ್ಲಿ ಅಳಿಲು ಸೇವೆ ಮಾಡಲು ಸದ್ಭಾವ ಸೇವಾ ಸಮಿತಿಯನ್ನು ರಚಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸದ್ಭಾವ ಸೇವಾ ಸಮಿತಿಯ ಕಾರ್ಯದರ್ಶಿ ಶಶಿಕುಮಾರ್ ಮಾತನಾಡಿ, ಕಳೆದು 20…