ಹಾವೇರಿ ಬಳಿ ಬಸ್‌ಗೆ ಬೆಂಕಿ; ಚಾಲಕನ ಸಮಯಪ್ರಜ್ಞೆಯಿಂದ 17 ಪ್ರಯಾಣಿಕರು ಪಾರು

ಹಾವೇರಿ: ಬೆಂಗಳೂರಿನಿಂದ ಗದಗಕ್ಕೆ ಪ್ರಯಾಣಿಸುತ್ತಿದ್ದ ಸಾರಿಗೆ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮದ ಬಳಿ ನಡೆದಿದೆ. ಅದೃಷ್ಟವಶಾತ್ ಚಾಲಕನ ಸಮಯಪ್ರಜ್ಞೆಯಿಂದ ಬಸ್ಸಿನಲ್ಲಿದ್ದ 17 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಪಲ್ಲಕ್ಕಿ ಬಸ್‌ನಲ್ಲಿ ದೇವರಗುಡ್ಡದ ಸಮೀಪ ಬೆಂಕಿ ಕಾಣಿಸಿಕೊಂಡಿದ್ದು, ಪರಿಸ್ಥಿತಿ ಗಂಭೀರವಾಗುವ ಮುನ್ನವೇ ಚಾಲಕ ಪಕ್ಕೀರಪ್ಪ ಎಚ್ಚೆತ್ತುಕೊಂಡು ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿದ್ದಾರೆ. ಬಳಿಕ ತಕ್ಷಣವೇ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಯುವಂತೆ ಸೂಚಿಸಿದ್ದು, ಇದರಿಂದ ಭಾರಿ ದುರಂತ ತಪ್ಪಿದೆ. ಆದರೆ ಕೆಲವೇ ನಿಮಿಷಗಳಲ್ಲಿ ಬೆಂಕಿ ತೀವ್ರವಾಗಿ ವ್ಯಾಪಿಸಿ ಇಡೀ ಬಸ್ ಧಗಧಗನೆ ಹೊತ್ತಿ ಉರಿದಿದೆ. ಸಾರಿಗೆ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಫಲಕಾರಿಯಾಗಲಿಲ್ಲ. ಘಟನಾ ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಂಕಿಗೆ ನಿಖರ ಕಾರಣ ತಿಳಿದುಬರಬೇಕಿದೆ.

ತಮಿಳುನಾಡಿನಲ್ಲಿ ಟಿವಿಕೆ ಯುಗಾರಂಭ; ‘ದಳಪತಿ’ ವಿಜಯ್ ಅದ್ಭುತ ರಾಜಕೀಯ ಪಯಣ

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ‘ದಳಪತಿ’ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಪಕ್ಷ ಐತಿಹಾಸಿಕ ಸಾಧನೆ ಮಾಡಿದ್ದು, ಅಧಿಕಾರದ ಗದ್ದುಗೆಗೆ ಹತ್ತಿರವಾಗಿರುವುದು ರಾಜ್ಯ ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಿದಂತಾಗಿದೆ. ಕೇವಲ ಎರಡು ವರ್ಷಗಳ ಹಿಂದೆ 2024ರ ಫೆಬ್ರವರಿಯಲ್ಲಿ ಸ್ಥಾಪನೆಯಾದ ಈ ಹೊಸ ಪಕ್ಷಕ್ಕೆ ಜನರಿಂದ ಭಾರೀ ಬೆಂಬಲ ವ್ಯಕ್ತವಾಗಿದ್ದು, ಬಹುಮತದ ಹತ್ತಿರ ತಲುಪಿರುವುದು ಅಚ್ಚರಿ ಮೂಡಿಸಿದೆ. ಹೊಸ ಪಕ್ಷಗಳ ಪ್ರಯತ್ನಗಳು ಸಾಮಾನ್ಯವಾಗಿ ವಿಫಲವಾಗುತ್ತವೆ ಎಂಬ ಅಂದಾಜುಗಳನ್ನು ಮೀರಿಸಿ, ಟಿವಿಕೆ ತನ್ನದೇ ಶಕ್ತಿಯಿಂದ ರಾಜಕೀಯದಲ್ಲಿ ಬಲವಾದ ನೆಲೆ ನಿರ್ಮಿಸಿದೆ. ಇದೇ ವೇಳೆ, ಕಮಲ್ ಹಾಸನ್ ಅವರ ಪ್ರಯತ್ನಗಳು ನಿರೀಕ್ಷಿತ ಮಟ್ಟದ ಯಶಸ್ಸು ತರುವಲ್ಲಿ ವಿಫಲವಾಗಿರುವುದು ಗಮನಾರ್ಹವಾಗಿದೆ. ಈ ಹಿನ್ನೆಲೆಯಲ್ಲಿ ನಾಜೂಕಾಗಿಯೇ ಪಕ್ಷವನ್ನು ಸಂಘಟಿಸಿದ, ವಿಜಯ್ ಅಭಿಮಾನಿಗಳ ಮನಗೆದ್ದರು. ಸಿನಿಲೋಕದ ಅಭಿಮಾನವನ್ನು ಮತಗಳನ್ನಾಗಿ ಪರಿವರ್ತಿಸುವಲ್ಲೂ ವಿಜಯ್ ಯಶಸ್ವಿಯಾದರು. ವಿಜಯ್ ಅವರ ರಾಜಕೀಯ ಪಯಣವು ಅಚಾನಕ್ ಆರಂಭವಾದದ್ದಲ್ಲ.…

ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು; ಹಿಮಂತ ಬಿಸ್ವ ಶರ್ಮಾಗೆ ಮತ್ತೆ ಮುಖ್ಯಮಂತ್ರಿ ಪಟ್ಟ

ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತೊಮ್ಮೆ ಭರ್ಜರಿ ಗೆಲುವು ಸಾಧಿಸಿ ಹ್ಯಾಟ್ರಿಕ್ ದಾಖಲಿಸಿದೆ. 126 ಕ್ಷೇತ್ರಗಳ ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ 82 ಸ್ಥಾನಗಳನ್ನು ಗೆದ್ದು ಸ್ಪಷ್ಟ ಬಹುಮತ ಪಡೆದುಕೊಂಡಿದ್ದು, ಮತ್ತೆ ಸರ್ಕಾರ ರಚಿಸಲು ಸಜ್ಜಾಗಿದೆ. ಈ ಗೆಲುವಿನೊಂದಿಗೆ ಹಿಮಂತ ಬಿಸ್ವ ಶರ್ಮಾ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಆಗುವ ಸಾಧ್ಯತೆಗಳು ಹೆಚ್ಚಿವೆ. ರಾಜ್ಯದ ಜನರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡ ಬಿಜೆಪಿ, ಚುನಾವಣೆಗೆ ಮುನ್ನ 31 ಪ್ರಮುಖ ಭರವಸೆಗಳನ್ನು ನೀಡಿದ್ದು, ಅವುಗಳಿಗೆ ಮತದಾರರಿಂದ ಉತ್ತಮ ಬೆಂಬಲ ದೊರೆತಿದೆ ಎಂದು ವಿಶ್ಲೇಷಿಸಲಾಗಿದೆ. ಇದೇ ವೇಳೆ, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಭಾವವೂ ಈ ಫಲಿತಾಂಶದ ಮೇಲೆ ಸ್ಪಷ್ಟವಾಗಿ ಕಂಡುಬಂದಿದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಅಭಿವೃದ್ಧಿ ಕಾರ್ಯಕ್ರಮಗಳು, ಕಲ್ಯಾಣ ಯೋಜನೆಗಳು ಮತ್ತು ಸಂಘಟಿತ ಪ್ರಚಾರ ತಂತ್ರಗಳು ಬಿಜೆಪಿಯ ಗೆಲುವಿಗೆ ನೆರವಾಗಿವೆ ಎಂಬ ಅಭಿಪ್ರಾಯ…

ಕೇರಳದಲ್ಲಿ ಕೈ ಮೇಲುಗೈ, ಆಡಳಿತಾರೂಢ ಎಲ್​ಡಿಎಫ್’ಗೆ ಸೋಲು; ಅಂತಿಮ ಬಲಾಬಲ ಹೀಗಿದೆ

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆಯಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಭರ್ಜರಿ ಗೆಲುವು ಸಾಧಿಸಿದ್ದು, ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್)ಗೆ ಭಾರೀ ಹಿನ್ನಡೆ ಎದುರಾಗಿದೆ. ಎಲ್‌ಡಿಎಫ್ ಸರ್ಕಾರದ 21 ಸಚಿವರು ಸೋಲುಂಡಿರುವುದು ಈ ಫಲಿತಾಂಶದ ಪ್ರಮುಖ ಅಂಶವಾಗಿದೆ. ಕಳೆದ ಎರಡು ದಶಕಗಳಲ್ಲಿನ ಅತ್ಯುತ್ತಮ ಪ್ರದರ್ಶನ ನೀಡಿರುವ ಯುಡಿಎಫ್, 10 ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಮರಳುವ ದಿಸೆಯಲ್ಲಿ ಮುನ್ನಡೆ ಸಾಧಿಸಿದೆ. ಈ ಫಲಿತಾಂಶದೊಂದಿಗೆ ದೇಶದಲ್ಲಿ ಅಧಿಕಾರದಲ್ಲಿದ್ದ ಏಕೈಕ ಕಮ್ಯುನಿಷ್ಟ್ ಸರ್ಕಾರ ಪತನದ ಅಂಚಿಗೆ ತಲುಪಿದೆ. 2001ರ ಚುನಾವಣೆಯ ನಂತರ ಯುಡಿಎಫ್‌ಗೆ ಇದು ಅತ್ಯುತ್ತಮ ಫಲಿತಾಂಶವಾಗಿದ್ದು, ಆ ಸಂದರ್ಭದಲ್ಲಿ 99 ಸ್ಥಾನಗಳನ್ನು ಗೆದ್ದಿದ್ದ ಮೈತ್ರಿ ಈ ಬಾರಿ ಅದನ್ನು ಮೀರಿ ದಾಖಲೆ ನಿರ್ಮಿಸಿದೆ. ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ನೇತೃತ್ವದಲ್ಲಿ ನಡೆದ ಪ್ರಚಾರ ಫಲ ನೀಡಿದ್ದು, ರಾಜ್ಯದಾದ್ಯಂತ ಯುಡಿಎಫ್ ಅಲೆ ಸ್ಪಷ್ಟವಾಗಿ ಗೋಚರಿಸಿದೆ. ಕಾಂಗ್ರೆಸ್ ನೇತೃತ್ವದ…

ಬಂಗಾಳದಲ್ಲಿ ಮೋದಿ-ಶಾ ಮೋಡಿ; ಮಮತಾ ಬ್ಯಾನರ್ಜಿ ಹೀನಾಯ ಸೋಲು, ಅಂತಿಮ ಫಲಿತಾಂಶ ಹೀಗಿದೆ

ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ–ಅಮಿತ್ ಶಾ ಜೋಡಿಯ ತಂತ್ರಗಾರಿಕೆಗೆ ಭಾರೀ ಫಲ ದೊರಕಿದ್ದು, ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಪಷ್ಟ ಬಹುಮತದೊಂದಿಗೆ ಅಧಿಕಾರದತ್ತ ದಾಪುಗಾಲಿಟ್ಟಿದೆ. ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (ಟಿಎಂಸಿ)ಗೆ ಈ ಬಾರಿ ನಿರಾಶಾದಾಯಕ ಫಲಿತಾಂಶ ಎದುರಾಗಿದೆ. ಒಟ್ಟು 293 ಸ್ಥಾನಗಳಲ್ಲಿ ಬಿಜೆಪಿ 206 ಕ್ಷೇತ್ರಗಳನ್ನು ಗೆದ್ದು ದ್ವಿಶತಕ ಬಾರಿಸಿದ್ದು, ಭಾರೀ ಮೇಲುಗೈ ಸಾಧಿಸಿದೆ. ಇತ್ತ ಟಿಎಂಸಿ ಕೇವಲ 81 ಸ್ಥಾನಗಳಿಗೆ ಸೀಮಿತವಾಗಿ ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್ 2 ಸ್ಥಾನಗಳಲ್ಲಿ ಜಯಗಳಿಸಿದ್ದು, ಇತರೆ ಪಕ್ಷಗಳು 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿವೆ. ನಾಲ್ಕನೇ ಬಾರಿ ಮುಖ್ಯಮಂತ್ರಿ ಪಟ್ಟಕ್ಕೇರಲು ಉತ್ಸಾಹದಲ್ಲಿದ್ದ ಮಮತಾ ಬ್ಯಾನರ್ಜಿ ಅವರಿಗೆ ಈ ಚುನಾವಣೆಯಲ್ಲಿ ಭಾರೀ ಹಿನ್ನಡೆ ಎದುರಾಗಿದೆ. ತಮ್ಮ ತವರು ಕ್ಷೇತ್ರ ಭವಾನಿಪುರದಲ್ಲಿಯೇ ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಎದುರು ಸೋಲು ಕಂಡಿರುವುದು ಟಿಎಂಸಿ ಶಿಬಿರಕ್ಕೆ ಮತ್ತಷ್ಟು ಆಘಾತ ತಂದಿದೆ. ರಾಜಕೀಯ…

ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಅಂತಿಮ ಫಲಿತಾಂಶ ಹೀಗಿದೆ

ನವದೆಹಲಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಅಸ್ಸಾಮ್ ಪುದುಚೆರಿಯಲ್ಲಿ ಬಿಜೆಪಿ ನೇತೃತ್ವದ NDA ಮಿತ್ರಕೂಟ ಅಧಿಕಾರವನ್ನು ಉಳಿಸಿಕೊಂಡಿದೆ. ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ UDF ಜಯಭೇರಿ ಭಾರಿಸಿದ್ದು, ತಮಿಳುನಾಡಿನಲ್ಲಿ ನೇತೃತ್ವದ ಹೊಸ ಪಕ್ಷ TVK ವಿಜಯ ಪತಾಕೆ ಹಾರಿಸಿದೆ. ಆದರೆ, ತಮಿಳುನಾಡಿನಲ್ಲಿ ಸರ್ಕಾರ ರಚಿಸಲು TVK ಯು ಇತರ ಪಕ್ಷಗಳ ಬೆಂಬಲ ಪಡೆಯುವ ಅನಿವಾರ್ಯತೆ ನಿರ್ಮಾಣವಾಗಿದೆ. ಪಶ್ಚಿಮ ಬಂಗಾಳ: ಬಂಗಾಳದ ರಣಕಣದಲ್ಲಿ ಮೋದಿ-ಶಾ ಜೋಡಿಯ ತಂತ್ರಗಾರಿಕೆಗೆ ಮಮತಾ ಬ್ಯಾನರ್ಜಿ ಸೋತು ಸುಣ್ಣವಾಗಿದ್ದಾರೆ. ಒಟ್ಟು 293 ಸ್ಥಾನಗಳಲ್ಲಿ ಬಿಜೆಪಿ 206 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದ್ವಿಶತಕ ಬಾರಿಸಿದೆ. ಆಡಳಿತಾರೂಢ ಟಿಎಂಸಿ ಕೇವಲ 81 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳುವ ಮೂಲಕ ಅಧಿಕಾರ ಕಳೆದುಕೊಂಡಿದೆ. ಒಟ್ಟು ಸ್ಥಾನಗಳು: 293 ಬಿಜೆಪಿ: 206 ಸ್ಥಾನಗಳು (ಸ್ಪಷ್ಟ ಬಹುಮತ) ಟಿಎಂಸಿ: 81 ಸ್ಥಾನಗಳು ಕಾಂಗ್ರೆಸ್:…

ಬಾಗಲಕೋಟೆ, ದಾವಣಗೆರೆಯಲ್ಲಿ ಕಾಂಗ್ರೆಸ್‌ ಗೆಲುವು ಕನ್ನಡ ಸ್ವಾಭಿಮಾನಕ್ಕೆ ಸಂದ ಜಯ: ಸುರ್ಜೇವಾಲ

ಬೆಂಗಳೂರು: ಕರ್ನಾಟಕದ ಹೈವೋಲ್ಟೇಜ್ ಕದನ ಎಂದೇ ಬಿಂಬಿತವಾಗಿದ್ದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಭರ್ಜರಿ ಜಯ ದಾಖಲಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಆಡಳಿತಾರೂಢ ಕಾಂಗ್ರೆಸ್ ತನ್ನ ಪಾರುಪತ್ಯವನ್ನು ಮೆರೆದಿದೆ. ಈ ಗೆಲುವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಅವರು “ಕನ್ನಡ ಸ್ವಾಭಿಮಾನಕ್ಕೆ ಸಂದ ಜಯ” ಎಂದು ಬಣ್ಣಿಸಿದ್ದಾರೆ. ಬಾಗಲಕೋಟೆಯಲ್ಲಿ ಉಮೇಶ್ ಮೇಟಿ ಹಾಗೂ ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್ ಶಾಮನೂರು ಅವರು ಬಿಜೆಪಿಯನ್ನು ಮಣಿಸಿ ವಿಜಯಮಾಲೆ ಧರಿಸಿದ್ದಾರೆ. ಈ ಫಲಿತಾಂಶವು ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಜನತೆ ನೀಡಿದ ಸಮ್ಮತಿಯಾಗಿದೆ. ಹೀಗಾಗಿ ಇದು ಕಾಂಗ್ರೆಸ್ ಗ್ಯಾರಂಟಿಗಳ ಜಯ, ಪ್ರತಿಯೊಬ್ಬ ಕನ್ನಡಿಗನ ಜಯ, ಕನ್ನಡ ಸ್ವಾಭಿಮಾನಕ್ಕೆ ಸಂದ ಜಯ, ಕಾಂಗ್ರೆಸ್ ಕಾರ್ಯಕರ್ತರ ಜಯ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು…