ಭೋಪಾಲ್: ಭೋಜ್‌ತಾಲ್ ಎಂದೇ ಪ್ರಸಿದ್ಧವಾಗಿರುವ ಅಪ್ಪರ್ ಲೇಕ್‌ನಲ್ಲಿ ಭಾರತೀಯ ನೌಕಾಪಡೆಯು ತನ್ನ ಪ್ರಧಾನ ನೌಕಾಯಾನ ನೋಡ್ ಅನ್ನು ಶನಿವಾರ ಉದ್ಘಾಟಿಸಿತು. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ (Dinesh K. Tripathi) ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ರಕ್ಷಣಾ ಅಧಿಕಾರಿಗಳು, ನಾಗರಿಕ ಆಡಳಿತ ಪ್ರತಿನಿಧಿಗಳು, ಎನ್‌ಸಿಸಿ ಕೆಡೆಟ್‌ಗಳು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವಿಶಾಖಪಟ್ಟಣಂನ ಭಾರತೀಯ ನೌಕಾ ಜಲಮಾನವ ತರಬೇತಿ ಕೇಂದ್ರದ (INWTC) 30ಕ್ಕೂ ಹೆಚ್ಚು ನೌಕಾ ಸಿಬ್ಬಂದಿ ಸೈಲ್ ಪೆರೇಡ್ ಹಾಗೂ ಜಲ ಕ್ರೀಡಾ ಪ್ರದರ್ಶನಗಳನ್ನು ನೀಡಿದರು. ನೌಕಾಪಡೆಯ ರೋಯಿಂಗ್, ಕಯಾಕಿಂಗ್ ಮತ್ತು ಕ್ಯಾನೋಯಿಂಗ್ ತಂಡಗಳೂ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು. ಜಲಮಾನವ ತರಬೇತಿ ನೌಕಾಪಡೆಯ ಪ್ರಮುಖ ತರಬೇತಿ ಭಾಗವಾಗಿದ್ದು, ತಂಡದ ಕೆಲಸ, ಶಿಸ್ತು ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಸಹಕಾರಿಯಾಗಿದೆ ಎಂದು ಭಾರತೀಯ ನೌಕಾಪಡೆ ತಿಳಿಸಿದೆ. ಹೊಸದಾಗಿ ನಿರ್ಮಿಸಲಾದ ಈ ಸೈಲಿಂಗ್ ನೋಡ್…
Month: May 2026
ಕರ್ನಾಟಕ ಯುವ ಕಾಂಗ್ರೆಸ್‌ನ 15 ಪದಾಧಿಕಾರಿಗಳ ವಜಾ
ನವದೆಹಲಿ: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ (KPYCC) 15 ಪದಾಧಿಕಾರಿಗಳನ್ನು ಏಕಾಏಕಿ ವಜಾಗೊಳಿಸಲಾಗಿದೆ. ಕರ್ತವ್ಯ ಲೋಪ ಹಾಗೂ ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ನಿಷ್ಕ್ರಿಯರಾಗಿದ್ದ ಆರೋಪದ ಹಿನ್ನೆಲೆ ಭಾರತೀಯ ಯುವ ಕಾಂಗ್ರೆಸ್ ಈ ಕ್ರಮ ಕೈಗೊಂಡಿದೆ. ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ (Deepika Reddy) ಸೇರಿದಂತೆ ಹಲವು ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜವಾಬ್ದಾರಿಗಳಿಂದ ತಾತ್ಕಾಲಿಕವಾಗಿ ಮುಕ್ತಗೊಳಿಸಲಾಗಿದೆ. ಈ ಕುರಿತು ಯುವ ಕಾಂಗ್ರೆಸ್ ತನ್ನ ಸಾಮಾಜಿಕ ಜಾಲತಾಣ X ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯ ಭಾಗವಹಿಸದ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ. ವಜಾಗೊಂಡವರ ಪಟ್ಟಿಯಲ್ಲಿ ರಾಜ್ಯ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ (Deepika Reddy), ಪ್ರಧಾನ ಕಾರ್ಯದರ್ಶಿಗಳಾದ ಸಿ.ಎಸ್. ಫ್ರಾನ್ಸಿಸ್ ಬೆನಿಟೊ (C.S. Francis Benito), ಬಿಂದು ಗೌಡ (Bindu Gowda), ಸುಮನ್ ಸೋಮಶೇಖರ್ (Suman Somashekhar), ಅಫ್ನಾನ್…
ಇಸ್ರೇಲ್-ಲೆಬನಾನ್ ಕದನ ವಿರಾಮ ವಿಸ್ತರಣೆ; ವಿಶ್ವಸಂಸ್ಥೆ ಸ್ವಾಗತ
ನ್ಯೂಯಾರ್ಕ್: ಇಸ್ರೇಲ್ ಮತ್ತು ಲೆಬನಾನ್ ನಡುವಿನ ಕದನ ವಿರಾಮವನ್ನು 45 ದಿನಗಳವರೆಗೆ ವಿಸ್ತರಿಸಿರುವ ನಿರ್ಧಾರವನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ (Antonio Guterres) ಸ್ವಾಗತಿಸಿದ್ದಾರೆ. ಅಮೆರಿಕ ಮಧ್ಯಸ್ಥಿಕೆಯಲ್ಲಿ ನಡೆದ ಮಾತುಕತೆಗಳ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ. ವಿಶ್ವಸಂಸ್ಥೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಯುದ್ಧ ಅಂತ್ಯಗೊಳಿಸಿ ಗಡಿಭಾಗದ ಜನರ ಸಂಕಷ್ಟ ನಿವಾರಣೆಗೆ ಕೈಗೊಳ್ಳುವ ಎಲ್ಲ ಪ್ರಯತ್ನಗಳಿಗೆ ಬೆಂಬಲ ನೀಡುವುದಾಗಿ ಗುಟೆರೆಸ್ ತಿಳಿಸಿದ್ದಾರೆ. ಜೊತೆಗೆ, ಎಲ್ಲಾ ಪಕ್ಷಗಳು ಕದನ ವಿರಾಮವನ್ನು ಸಂಪೂರ್ಣವಾಗಿ ಪಾಲಿಸಿ, ದಾಳಿಗಳನ್ನು ನಿಲ್ಲಿಸಿ ಹಾಗೂ ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ಗೌರವಿಸಬೇಕು ಎಂದು ಕರೆ ನೀಡಿದ್ದಾರೆ. ವಾಷಿಂಗ್ಟನ್‌ನಲ್ಲಿ ನಡೆದ ಮಾತುಕತೆಗಳ ಬಳಿಕ ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ಟಾಮಿ ಪಿಗೋಟ್ (Tommy Pigott) ಈ ಘೋಷಣೆ ಮಾಡಿದರು. ಇಸ್ರೇಲ್ ಮತ್ತು ಲೆಬನಾನ್ ನಡುವಿನ ಮಾತುಕತೆಗಳು ಫಲಪ್ರದವಾಗಿದ್ದು, ಏಪ್ರಿಲ್ 16ರವರೆಗೆ ಕದನ ವಿರಾಮ ಮುಂದುವರಿಯಲಿದೆ ಎಂದು ತಿಳಿಸಿದರು. ಇದರೊಂದಿಗೆ,…
ಬೆಂಗಳೂರು-ಮುಂಬೈ ಹೊಸ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಚಾಲನೆ
ಬೆಂಗಳೂರು: ಬೆಂಗಳೂರು-ಮುಂಬೈ ನಡುವೆ ಸಂಚಾರ ನಡೆಸಲಿರುವ ಹೊಸ ಎಕ್ಸ್‌ಪ್ರೆಸ್ ರೈಲಿಗೆ ಬೈಯ್ಯಪ್ಪನಹಳ್ಳಿ ಬಳಿಯ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ರೈಲು ನಿಲ್ದಾಣದಲ್ಲಿ ಚಾಲನೆ ನೀಡಲಾಗಿದೆ. ಬೆಂಗಳೂರು ಮತ್ತು ಮುಂಬೈ ನಡುವೆ ಪ್ರಯಾಣಿಕರ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ಈ ಹೊಸ ರೈಲು ಸೇವೆಯನ್ನು ಆರಂಭಿಸಲಾಗಿದೆ. ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ನಿಂದ ಮುಂಬೈನ ಲೋಕಮಾನ್ಯ ತಿಲಕ್ ಟರ್ಮಿನಲ್ (LTT) ನಡುವೆ ವಾರಕ್ಕೆ ಎರಡು ದಿನ ಈ ರೈಲು ಸಂಚರಿಸಲಿದೆ. ಶನಿವಾರ ಹಾಗೂ ಮಂಗಳವಾರ ಬೆಂಗಳೂರಿನಿಂದ ಮುಂಬೈಗೆ, ಭಾನುವಾರ ಮತ್ತು ಬುಧವಾರ ಮುಂಬೈನಿಂದ ಬೆಂಗಳೂರಿಗೆ ಓಡಾಟ ನಡೆಸಲಿದೆ. ಬೆಂಗಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಪುಣೆ ಹಾಗೂ ಮುಂಬೈ ನಗರಗಳಿಗೆ ಈ ರೈಲು ಸಂಪರ್ಕ ಕಲ್ಪಿಸಲಿದೆ. ರೈಲಿನಲ್ಲಿ ಒಟ್ಟು 17 ಕೋಚ್‌ಗಳಿದ್ದು, ಒಂದು ಎಸಿ 2-ಟೈರ್, ನಾಲ್ಕು ಎಸಿ 3-ಟೈರ್, ಆರು ಸ್ಲೀಪರ್ ಹಾಗೂ ನಾಲ್ಕು ಸಾಮಾನ್ಯ ದರ್ಜೆಯ ಬೋಗಿಗಳಿವೆ.…
ಕರ್ನಾಟಕದಲ್ಲಿ ಎಸ್‌ಐಆರ್‌ಗೆ ಏಕೆ ವಿರೋಧ ಏಕೆ? ಕಾಂಗ್ರೆಸ್ ನಾಯಕರಿಗೆ ಅಶೋಕ ಪ್ರಶ್ನೆ
ಬೆಂಗಳೂರು, ಕರ್ನಾಟಕದಲ್ಲಿ ಎಸ್‌ಐಆರ್‌ಗೆ ಏಕೆ ವಿರೋಧ ಏಕೆ ಎಂದು ಕಾಂಗ್ರೆಸ್ ನಾಯಕರನ್ನು ಬಿಜೆಪಿ ನಾಯಕ ಆರ್.ಅಶೋಕ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ, ಕರ್ನಾಟಕದಲ್ಲಿ 10 ಲಕ್ಷಕ್ಕೂ ಅಧಿಕ ಬಾಂಗ್ಲಾ ಪ್ರಜೆಗಳಿದ್ದಾರೆ. ಇಲ್ಲ ಎಂದು ಯಾರಾದರೂ ಸವಾಲು ಹಾಕಿದರೆ ನಾನೇ ಅವರನ್ನು ಕರೆದುಕೊಂಡು ಹೋಗಿ ತೋರಿಸುತ್ತೇನೆ. ಇತ್ತೀಚೆಗೆ ಪೊಲೀಸ್ ಆಯುಕ್ತರು 65 ಲಕ್ಷ ರೂ. ಖರ್ಚು ಮಾಡಿ 250 ಬಾಂಗ್ಲಾ ದೇಶದವರನ್ನು ವಿಮಾನದಲ್ಲಿ ಕಳುಹಿಸಿ ಗಡಿವರೆಗೆ ಬಿಟ್ಟು ಬಂದಿದ್ದಾರೆ. ಮಹದೇವಪುರ, ಚಿಕ್ಕಮಗಳೂರು, ಕೊಡಗು ಕಾಫಿ ಎಸ್ಟೇಟ್‌ಗಳಲ್ಲಿ ಸಾವಿರಾರು ಬಾಂಗ್ಲಾ ದೇಶೀಯರಿದ್ದಾರೆ. ಇದಕ್ಕೆ ಎಸ್‌ಐಆರ್ ಅಂತ್ಯ ಹಾಡಲಿದೆ. ಗುರುತಿನ ಚೀಟಿ ಇರುವವರು ಭಯ ಪಡಬೇಕಿಲ್ಲ. ಪ್ರತಿ ಬೂತ್‌ನಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಏಜೆಂಟ್ ಇರುವಾಗ ಅರ್ಹ, ನಿಜವಾದ ಮತದಾರರ ಹೆಸರು ರದ್ದಾಗಲು ಸಾಧ್ಯವೇ ಇಲ್ಲ ಎಂದು ಗಮನಸೆಳೆದರು. ಬಾಂಗ್ಲಾ ದೇಶದ ಮುಸ್ಲಿಮರ ಮತಗಳಿಂದ ಗೆಲ್ಲುತ್ತೇವೆಂದು…
ಸಹಾಯಧನ, ಪಿಂಚಣಿ ಸ್ಥಗಿತವಾದರೂ ಸಾಧನಾ ಸಮಾವೇಶ ಮಾಡುತ್ತಿರುವ ಕಾಂಗ್ರೆಸ್, ಸಮಾವೇಶ ಮಾಡಲು ಯಾವ ಯೋಗ್ಯತೆ ಇದೆ?
ಬೆಂಗಳೂರು: ರಾಜ್ಯದಲ್ಲಿ ಅನಾಥರು, ವೃದ್ಧರು, ಲಿಂಗತ್ವ ಅಲ್ಪಸಂಖ್ಯಾತರು ಸೇರಿದಂತೆ ವಿವಿಧ ಶೋಷಿತ, ಅಸಹಾಯಕ ಜನವರ್ಗಗಳಿಗೆ ರಾಜ್ಯ ಸರ್ಕಾರ ನೀಡುವ ಸಹಾಯಧನ ಹಾಗೂ ಪಿಂಚಣಿ ಸ್ಥಗಿತಗೊಂಡಿದೆ. ಈ ರೀತಿ ಖಜಾನೆ ಖಾಲಿಯಾಗಿದ್ದರೂ ಸಾಧನಾ ಸಮಾವೇಶ ಮಾಡಲು ಕಾಂಗ್ರೆಸ್ ನಾಯಕರಿಗೆ ಯಾವ ಯೋಗ್ಯತೆ ಇದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಪ್ರಶ್ನಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ತಾನು ಮಾಡಿದ ಪಾಪಗಳಿಗಾಗಿ ಸಮಾವೇಶ ನಡೆಸಿ ಸಂಭ್ರಮಾಚರಣೆ ಮಾಡುತ್ತಿದೆ. ಭಿಕ್ಷುಕರಿಗೆ, ಸಹಾಯಧನ ಪಡೆಯುವವರಿಗೆ ಆರ್ಥಿಕ ಸಹಾಯ ಸ್ಥಗಿತಗೊಂಡಿದ್ದು, ಕಳೆದ ಮೂರು ವರ್ಷದಿಂದ ಸರ್ಕಾರ ಇವರನ್ನು ಶೋಷಣೆ ಮಾಡುತ್ತಿದೆ. ಗೃಹಲಕ್ಷ್ಮಿಯ 5,000 ಕೋಟಿ ರೂ., ಅನ್ನಭಾಗ್ಯದ 700 ಕೋಟಿ ರೂ. ಇನ್ನೂ ಫಲಾನುಭವಿಗಳಿಗೆ ಸಿಕ್ಕಿಲ್ಲ. ಅನಾಥ ಮಕ್ಕಳ 73 ಕೋಟಿ ರೂ. ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಪರಿಶಿಷ್ಟ ಜಾತಿಗಳ 45,000 ಕೋಟಿ ರೂ. ಲೂಟಿಯಾಗಿದೆ. ಸಮೀಕ್ಷೆಯ ಹೆಸರಲ್ಲಿ ಇನ್ನೂ…
ಪ್ರಧಾನಿ ಮನವಿ ಹಿನ್ನೆಲೆ ‘ವಾಹನ ರಹಿತ ದಿನ’ ಆಚರಣೆಗೆ ಬಿಹಾರ ಸಿಎಂ ಕರೆ
ಪಾಟ್ನಾ: ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಕರೆ ಹಿನ್ನೆಲೆ ಬಿಹಾರದಲ್ಲಿ ‘ವಾಹನ ರಹಿತ ದಿನ’ ಆಚರಿಸಲಾಯಿತು. ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸಚಿವಾಲಯಕ್ಕೆ ಶುಕ್ರವಾರ ನಡೆದುಕೊಂಡು ತೆರಳಿ ಇಂಧನ ಸಂರಕ್ಷಣೆಯ ಸಂದೇಶ ನೀಡಿದ್ದಾರೆ. ಮುಖ್ಯಮಂತ್ರಿಗಳ ನಿವಾಸದಿಂದ ಸಚಿವಾಲಯದವರೆಗೆ ಸುಮಾರು 150 ಮೀಟರ್ ನಡೆದುಕೊಂಡು ಹೋದ ಅವರು, ಈಗಾಗಲೇ ಅಧಿಕೃತ ಸಂಚಾರದ ವೇಳೆ ತಮ್ಮ ಬೆಂಗಾವಲಿನ ಗಾತ್ರವನ್ನೂ ಕಡಿಮೆ ಮಾಡಿದ್ದಾರೆ. ಅವರೊಂದಿಗೆ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿಯೂ ಭಾಗಿಯಾಗಿದ್ದರು. ಪಂಚಾಯತ್ ರಾಜ್ ಸಚಿವ ದೀಪಕ್ ಪ್ರಕಾಶ್ ಕೂಡ ಸುಮಾರು ಒಂದು ಕಿಲೋಮೀಟರ್ ನಡೆದುಕೊಂಡು ಕಚೇರಿಗೆ ತೆರಳಿದರು. ಅಮೆರಿಕ-ಇರಾನ್ ಸಂಘರ್ಷದಿಂದ ಉಂಟಾದ ಜಾಗತಿಕ ಬಿಕ್ಕಟ್ಟಿನ ನಡುವೆ ಇಂಧನ ಉಳಿಸುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು. ಶಿಕ್ಷಣ ಸಚಿವ ಮಿಥಿಲೇಶ್ ತಿವಾರಿ ಇ-ರಿಕ್ಷಾದಲ್ಲಿ ಕಚೇರಿಗೆ ತೆರಳಿ ಪರಿಸರ ಸ್ನೇಹಿ ಸಾರಿಗೆಗೆ ಉತ್ತೇಜನ ನೀಡಿದರು. “ಇಂಧನ…
ಇಂಧನ ದರ ಏರಿಕೆ ಮೂಲಕ ₹43 ಲಕ್ಷ ಕೋಟಿ ಸುಲಿಗೆ: ಮೋದಿ ಸರ್ಕಾರ ವಿರುದ್ಧ ಕಾಂಗ್ರೆಸ್ ವಾಗ್ದಾಳಿ
ನವದೆಹಲಿ: ಕಳೆದ 11 ವರ್ಷಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಗಳ ಮೂಲಕ ಮೋದಿ ಸರ್ಕಾರ ₹43 ಲಕ್ಷ ಕೋಟಿ ಸಂಗ್ರಹಿಸಿದ್ದು, ಇದು ಜನರ ಮೇಲಿನ “ತೆರಿಗೆ ಸುಲಿಗೆ” ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಅವರು, 2014ರಲ್ಲಿ ಪೆಟ್ರೋಲ್ ಲೀಟರ್‌ಗೆ ₹71.41 ಮತ್ತು ಡೀಸೆಲ್ ₹56.71 ಇತ್ತು. ಆದರೆ ಇಂದು ದೆಹಲಿಯಲ್ಲಿ ಪೆಟ್ರೋಲ್ ₹102.92 ಹಾಗೂ ಡೀಸೆಲ್ ₹90.99ಕ್ಕೆ ತಲುಪಿದೆ ಎಂದು ಹೇಳಿದರು. 2014ರ ಕಚ್ಚಾ ತೈಲ ದರಗಳಿಗಿಂತ ಈಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಕಡಿಮೆ ಇದ್ದರೂ ಭಾರತದಲ್ಲಿ ಮಾತ್ರ ಬೆಲೆ ಏರಿಕೆಯಾಗಿರುವುದು “ಬಿಜೆಪಿಯ ಲೂಟಿ” ಎಂದು ಟೀಕಿಸಿದರು. 2014ರಿಂದ 2025ರವರೆಗೆ ಪೆಟ್ರೋಲ್ ಮೇಲೆ ಸರಾಸರಿ ₹21.60 ಹಾಗೂ ಡೀಸೆಲ್ ಮೇಲೆ ₹12.80 ಅಬಕಾರಿ ಸುಂಕ ವಿಧಿಸಲಾಗಿದೆ. ಇದರಿಂದ ಸಾಮಾನ್ಯ ಜನರು ಇಂಧನ ಬೆಲೆಯ…
ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಎಐ ಬಳಕೆಗೆ ಸೂಕ್ತ ಮಾರ್ಗಸೂಚಿ ಬಿಡುಗಡೆ
ಬೆಂಗಳೂರು: ಜಾಗತಿಕ ಮಟ್ಟದಲ್ಲಿ ಸಾಕಷ್ಟು ವಿಸ್ತಾರಗೊಂಡಿರುವ ಕೃತಕಬುದ್ಧಿಮತ್ತೆ (ಎಐ) ಅನ್ನು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲೂ ಬಳಸಿಕೊಳ್ಳುವ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ (ವೈದ್ಯಕೀಯ ಶಿಕ್ಷಣ) ಮೊಹಮ್ಮದ್ ಮೊಹ್ಸಿನ್ ತಿಳಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯು ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಕ್ಯಾಂಪಸ್ ಟು ಕೆರಿಯರ್ – ಫ್ಯೂಚರ್ ರೆಡಿ ಯೂನಿವರ್ಸಿಟಿ ಆಫ್ ಕಾಲೇಜಸ್ ಶೃಂಗ ಸಭೆಯಲ್ಲಿ ಶುಕ್ರವಾರ ನಡೆದ ಚರ್ಚಾ ಕಾರ್ಯಾಗಾರದಲ್ಲಿ ಮಾತನಾಡಿದ ಮೊಹಮ್ಮದ್ ಮೊಹ್ಸಿನ್, ಇದು ಯುವ ಸಮೂಹಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದರು. ಎಐ ಬಳಕೆ ಸಂಬಂಧ ಪ್ರೊಟೊಕಾಲ್ ಮತ್ತು ಕಾರ್ಯವಿಧಾನದ ಮಾನದಂಡ (ಎಸ್‌ಒಪಿ) ಕೂಡ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು. ಈ ನಿಟ್ಟಿನಲಿ ಎಥಿಕಲ್ ಯೂಸ್ ಆಫ್ ಎಐ ಬಗ್ಗೆಯೂ ನಮ್ಮ ಗಮನವಿದೆ ಎಂದು ಮೊಹ್ಸಿನ್ ವಿವರಿಸಿದರು. ಮೈಸೂರು ರಸ್ತೆಯ ಭೀಮನಕುಪ್ಪೆಯಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ…
ಇಂಧನ ಉಳಿಸುವ ಪ್ರಧಾನಿ ಕರೆಗೆ ಕೇಂದ್ರ ಸಚಿವರ ಬೆಂಬಲ; ಸೈಕಲ್’ನಲ್ಲಿ ಕಚೇರಿಗೆ ತೆರಳಿದ ಮಂತ್ರಿ ತೋಖನ್ ಸಾಹು
ನವ ದೆಹಲಿ: ಕೇಂದ್ರ ವಸತಿ ಮತ್ತು ನಗರಾಭಿವೃದ್ಧಿ ರಾಜ್ಯ ಸಚಿವರಾದ ತೋಖನ್ ಸಾಹು ಶುಕ್ರವಾರ ತಮ್ಮ ನಿವಾಸದಿಂದ ಸುಮಾರು 3 ಕಿ.ಮೀ ದೂರದ ಸಂಕಲ್ಪ ಭವನಕ್ಕೆ ಸೈಕಲ್‌ನಲ್ಲಿ ತೆರಳಿ, ಪ್ರಧಾನಮಂತ್ರಿ Narendra Modi ಅವರ ಇಂಧನ ಸಂರಕ್ಷಣೆ ಕೋರಿಕೆಗೆ ಬೆಂಬಲ ಸೂಚಿಸಿದರು. ನಗರಗಳಲ್ಲಿ ಶಾಶ್ವತ ಸಂಚಾರ, ಪರಿಸರ ಜವಾಬ್ದಾರಿ ಹಾಗೂ ರಾಷ್ಟ್ರಸೇವೆಯ ಸಂದೇಶವನ್ನು ಅವರು ಈ ಮೂಲಕ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಾಹು, ಕೋವಿಡ್ ಕಾಲದಲ್ಲಿ ಅನುಸರಿಸಿದ್ದ ವರ್ಕ್ ಫ್ರಂ ಹೋಮ್, ಆನ್‌ಲೈನ್ ತರಗತಿಗಳು, ವರ್ಚುವಲ್ ಸಭೆಗಳು, ಪೆಟ್ರೋಲ್–ಡೀಸಲ್ ಬಳಕೆಯ ಕಡಿತ ಮುಂತಾದ ಕ್ರಮಗಳನ್ನು ಪುನಃ ಜಾರಿಗೆ ತರಬೇಕೆಂಬ ಪ್ರಧಾನಮಂತ್ರಿಯವರ ಕೋರಿಕೆ ಇಂದಿನ ಜಾಗತಿಕ ಅನಿಶ್ಚಿತ ಪರಿಸ್ಥಿತಿಯಲ್ಲಿ ಅತಿ ಸುಸಂಗತ ಎಂದು ಹೇಳಿದರು. ದೇಶದ ಹಿತಕ್ಕಾಗಿ ನಾಗರಿಕರು ತಮ್ಮಿಂದಾಗುವ ಸೇವೆಯನ್ನು ನೀಡಬೇಕೆಂದು ಅವರು ತಿಳಿಸಿದ್ದಾರೆ. ಇಂಧನ ಸಂರಕ್ಷಣೆ ಕೇವಲ ಆರ್ಥಿಕ ಕಾರಣವಲ್ಲ, ಅದು ಪರಿಸರ ಜವಾಬ್ದಾರಿ ಮತ್ತು…
