ಸೆಮಿಕಂಡಕ್ಟರ್, AI ಕ್ಷೇತ್ರಗಳಲ್ಲಿ ಭಾರತ-ಜಪಾನ್ ಸಹಕಾರಕ್ಕೆ ವೇಗ; CEPA ಪರಿಶೀಲನೆ ತ್ವರಿತ

ಟೋಕಿಯೋ: ಸೆಮಿಕಂಡಕ್ಟರ್‌ಗಳು ಮತ್ತು ಕೃತಕ ಬುದ್ಧಿಮತ್ತೆ (AI) ಸೇರಿದಂತೆ ಕಾರ್ಯತಂತ್ರದ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ಭಾರತ ಮತ್ತು ಜಪಾನ್ ಮುಂದಾಗಿವೆ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಮಂಗಳವಾರ ಟೋಕಿಯೋದಲ್ಲಿ ನಡೆದ ಭಾರತ-ಜಪಾನ್ ಉದ್ಯಮ ದುಂಡುಮೇಜಿನ ಸಭೆಯ ಅಧ್ಯಕ್ಷತೆ ವಹಿಸಿದರು. ಭಾರತದ ಸೆಮಿಕಂಡಕ್ಟರ್ ಬೇಡಿಕೆ 2032ರ ವೇಳೆಗೆ 150 ಶತಕೋಟಿ ಡಾಲರ್ ತಲುಪುವ ನಿರೀಕ್ಷೆಯಿದೆ ಎಂದು ಗೋಯಲ್ ತಿಳಿಸಿದರು. ಚಿಪ್ ವಿನ್ಯಾಸ, ತಯಾರಿಕೆ, ಪ್ಯಾಕೇಜಿಂಗ್, ಸಂಶೋಧನೆ ಮತ್ತು ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದರು. ಸಮಗ್ರ ಸೆಮಿಕಂಡಕ್ಟರ್ ಪರಿಸರ ವ್ಯವಸ್ಥೆ ನಿರ್ಮಿಸಲು ಸೆಮಿಕಾನ್ ಇಂಡಿಯಾ 1.0 ಅಡಿಯಲ್ಲಿ 10 ಶತಕೋಟಿ ಡಾಲರ್ ಹಾಗೂ ಸೆಮಿಕಾನ್ ಇಂಡಿಯಾ 2.0 ಅಡಿಯಲ್ಲಿ ಹೆಚ್ಚುವರಿ 15 ಶತಕೋಟಿ ಡಾಲರ್ ಹೂಡಿಕೆಗೆ ಸರ್ಕಾರ ಒತ್ತು ನೀಡಿದೆ ಎಂದು ಅವರು ವಿವರಿಸಿದರು. ಟೋಕಿಯೋ ಎಲೆಕ್ಟ್ರಾನ್, ಫ್ಯೂಜಿಫಿಲ್ಮ್, ಕ್ಯೋಸೆರಾ, NEC ಮತ್ತು…

ಎಬಿವಿಪಿ ಕಾರ್ಯಕರ್ತರ ಮೇಲಿನ ದೌರ್ಜನ್ಯ ಬಗ್ಗೆ ನ್ಯಾಯಾಂಗ ತನಿಖೆಗೆ ಸಿ.ಟಿ.ರವಿ ಆಗ್ರಹ

ಬೆಂಗಳೂರು: ಕೆಪಿಎಸ್‌ಸಿ ಅಕ್ರಮದ ವಿರುದ್ಧ ಪ್ರತಿಭಟನೆ ನಡೆಸಿದ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದ್ದು, ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಬಂಧಿತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡಬೇಕು. ಭ್ರಷ್ಟಾಚಾರ ಹಾಗೂ ಅನ್ಯಾಯದ ವಿರುದ್ಧ ನ್ಯಾಯಯುತ ತನಿಖೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಸರ್ಕಾರ ಅಮಾನುಷವಾಗಿ ವರ್ತಿಸಿದೆ ಎಂದು ಟೀಕಿಸಿದರು. ಐಎಎಸ್ ಅಧಿಕಾರಿ ಜ್ಞಾನೇಂದ್ರ ಇ.ಡಿ. ತನಿಖೆಗೆ ಸಿಗದೆ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದ ಅವರು, ಗೃಹ ಸಚಿವರು ಈ ವಿಚಾರದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ ಎಂದು ಟೀಕಿಸಿದರು. ಉದ್ಯಾನವನಗಳ ಮೂಲ ಉದ್ದೇಶವನ್ನೇ ಬುಡಮೇಲು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಸಿ.ಟಿ.ರವಿ ಆರೋಪಿಸಿದರು. ಗೋಮಾಳ ಮತ್ತು ಕೆರೆಗಳ ನಂತರ ಇದೀಗ ಸರ್ಕಾರದ ಕಣ್ಣು ಉದ್ಯಾನಗಳ ಮೇಲೆ ಬಿದ್ದಿದೆ…

ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿಯಿಂದ ಸೆ.1ರಿಂದ ರಾಯಚೂರು-ಬಳ್ಳಾರಿಗೆ ಪಾದಯಾತ್ರೆ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಸೆಪ್ಟೆಂಬರ್ 1ರಿಂದ ರಾಯಚೂರು-ಬಳ್ಳಾರಿ ಪಾದಯಾತ್ರೆ ನಡೆಸುವುದಾಗಿ ಪ್ರತಿಪಕ್ಷ ನಾಯಕ ಆರ್.ಅಶೋಕ ಘೋಷಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಹಗಲು-ರಾತ್ರಿ ಧರಣಿ ನಡೆಸುವುದಾಗಿ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರ ಅಧಿವೇಶನವನ್ನು ರದ್ದು ಮಾಡಿದೆ ಎಂದು ಆರೋಪಿಸಿದರು. ಎಲ್ಲ ವಿಷಯಗಳ ಕುರಿತು ಚರ್ಚೆಗೆ ಬಿಜೆಪಿ ಸಿದ್ಧವಿದ್ದರೂ ಸರ್ಕಾರ ಅವಕಾಶ ನೀಡಲಿಲ್ಲ ಎಂದು ದೂರಿದರು. ಸಚಿವ ನಾಗೇಂದ್ರ ಅವರನ್ನು ರಕ್ಷಿಸುವ ಉದ್ದೇಶದಿಂದಲೇ ಅಧಿವೇಶನವನ್ನು ಮುಂಚಿತವಾಗಿ ರದ್ದುಪಡಿಸಲಾಗಿದೆ ಎಂದು ಆರೋಪಿಸಿದ ಅಶೋಕ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಆರೋಪ ಎದುರಾದಾಗ ಸಚಿವರಿಂದ ರಾಜೀನಾಮೆ ಪಡೆದು ಸದನ ನಡೆಸಲಾಗಿತ್ತು. ಆದರೆ ಇದೀಗ ದಲಿತರ ಹಣಕ್ಕೆ ಸಂಬಂಧಿಸಿದ ಹಗರಣದ ಆರೋಪ ಎದುರಿಸುತ್ತಿರುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಸದನವನ್ನು ಮೊಟಕುಗೊಳಿಸಲಾಗಿದೆ ಎಂದರು. ಬರ ಪರಿಸ್ಥಿತಿ,…

‘ಚರ್ಚೆ ಇಲ್ಲದೆ ಮಂಡಿಸಿರುವ ಮಸೂದೆಗಳನ್ನು ಸರ್ಕಾರ ವಾಪಸ್ ಪಡೆಯಬೇಕು’

ಬೆಂಗಳೂರು: ಪ್ರತಿಪಕ್ಷದ ಪ್ರಶ್ನೆಗಳಿಗೆ ಉತ್ತರಿಸಲು ಹೆದರಿ ಕಾಂಗ್ರೆಸ್ ಸರ್ಕಾರ ವಿಧಾನಮಂಡಲ ಅಧಿವೇಶನವನ್ನು ಮುಂಚಿತವಾಗಿ ರದ್ದುಪಡಿಸಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ. ಚರ್ಚೆ ಇಲ್ಲದೆ ಮಂಡಿಸಿರುವ ಮಸೂದೆಗಳನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂನ್‌ನಲ್ಲೇ ನಡೆಯಬೇಕಿದ್ದ ಅಧಿವೇಶನ ಸಚಿವ ಸಂಪುಟದ ಆಂತರಿಕ ಭಿನ್ನಾಭಿಪ್ರಾಯದಿಂದ ತಡವಾಗಿ ಆರಂಭವಾಗಿತ್ತು. ಆದರೆ ಮೂರು ದಿನ ಮುಂಚಿತವಾಗಿಯೇ ಅಧಿವೇಶನವನ್ನು ರದ್ದುಪಡಿಸಿರುವುದು ಸರ್ಕಾರದ ಆಡಳಿತ ವೈಫಲ್ಯ ಎಂದು ಟೀಕಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮ ಪ್ರಕರಣದಲ್ಲಿ ಸಚಿವ ಬಿ.ನಾಗೇಂದ್ರ ಅವರನ್ನು ರಕ್ಷಿಸಲು ಇಡೀ ಸದನದ ಕಲಾಪವನ್ನೇ ಮೊಟಕುಗೊಳಿಸಲಾಗಿದೆ ಎಂದು ಆರೋಪಿಸಿದ ಅವರು, ಬಿಜೆಪಿ ಅವಧಿಯಲ್ಲಿ ಆರೋಪ ಎದುರಾದಾಗ ಸಚಿವರಿಂದ ರಾಜೀನಾಮೆ ಪಡೆದು ಸದನದ ಕಲಾಪ ಮುಂದುವರಿಸಲಾಗಿತ್ತು ಎಂದರು. ಬರ ಪರಿಸ್ಥಿತಿ, ನೈಸ್ ಟೋಲ್ ಅಕ್ರಮ, ಕೆಪಿಎಸ್‌ಸಿ ಅಕ್ರಮ, ಬೆಂಗಳೂರಿನ ಕಸ ಟೆಂಡರ್, ಸುರಂಗ ರಸ್ತೆ ಯೋಜನೆ ಹಾಗೂ…

ಸರ್ಕಾರದ ಆದ್ಯತೆ ಅಭಿವೃದ್ಧಿಯೇ, ರಿಯಲ್ ಎಸ್ಟೇಟೇ?; ವಿಜಯೇಂದ್ರ ಪ್ರಶ್ನೆ

ಬೆಂಗಳೂರು: ರಾಜ್ಯ ಸರ್ಕಾರದ ಇತ್ತೀಚಿನ ನಿರ್ಧಾರಗಳನ್ನು ಗಮನಿಸಿದರೆ ಅದರ ಆದ್ಯತೆಗಳ ಬಗ್ಗೆ ಗಂಭೀರ ಪ್ರಶ್ನೆಗಳು ಮೂಡುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ. ಒಂದು ಕಡೆ ಒಂದು ಕೋಟಿ ಸಸಿ ನೆಡುವ ಕಾರ್ಯಕ್ರಮ ನಡೆಸಲಾಗುತ್ತಿದೆ. ಮತ್ತೊಂದೆಡೆ ಉದ್ಯಾನವನದ ಜಮೀನನ್ನು ರಿಯಲ್ ಎಸ್ಟೇಟ್ ಉದ್ದೇಶಕ್ಕೆ ಬಳಸುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ ಎಂದರು. ಮುಖ್ಯಮಂತ್ರಿಗಳ ಆದ್ಯತೆ ಬಿಡದಿ ಟೌನ್‌ಶಿಪ್, ಕನಕಪುರ ವಿಮಾನ ನಿಲ್ದಾಣ ಅಥವಾ ನೈಸ್ ಯೋಜನೆ ಸ್ವಾಧೀನವೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ರೈತರ ಸಂಕಷ್ಟ, ಬಡವರ ಸಮಸ್ಯೆ, ಯುವಕರ ಉದ್ಯೋಗ ಹಾಗೂ ರಾಜ್ಯದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಸುಮಾರು ಎರಡೂವರೆ ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿಗೆ ಸರ್ಕಾರ ವೇಗ ನೀಡುತ್ತಿಲ್ಲ. ಮೀಸಲಾತಿ ವಿಚಾರದಲ್ಲಿ ಸ್ಪಷ್ಟ ನಿಲುವು ತೆಗೆದುಕೊಂಡು ಯುವಕರಿಗೆ ಉದ್ಯೋಗ ಕಲ್ಪಿಸಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು. ಒಬಿಸಿ…

H1N1 ಬಗ್ಗೆ ಭಯ ಬೇಡ; ಭಾರತದಲ್ಲಿ ಹರಡುತ್ತಿರುವ ವೈರಸ್ ಸಾಮಾನ್ಯ ಕಾಲೋಚಿತ ಮಾದರಿಗೆ ಅನುಗುಣ

ನವದೆಹಲಿ: ದೇಶದಲ್ಲಿ ಕಾಲೋಚಿತ ಉಸಿರಾಟದ ಕಾಯಿಲೆಗಳ ಪರಿಸ್ಥಿತಿಯನ್ನು ಕೇಂದ್ರ ಆರೋಗ್ಯ ಸಚಿವಾಲಯವು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಆರೋಗ್ಯ ಸಂಶೋಧನಾ ಇಲಾಖೆ, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮತ್ತು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (NCDC) ಸಹಯೋಗದಲ್ಲಿ ರಾಷ್ಟ್ರವ್ಯಾಪಿ ಕಣ್ಗಾವಲು ಜಾಲದ ಮೂಲಕ ನಿಗಾ ವಹಿಸಲಾಗುತ್ತಿದೆ. ಭಾರತದಲ್ಲಿ ಪ್ರಸ್ತುತ ಹರಡುತ್ತಿರುವ ಇನ್ಫ್ಲುಯೆನ್ಸ ವೈರಸ್‌ಗಳು ಇತ್ತೀಚಿನ ವರ್ಷಗಳ ಕಾಲೋಚಿತ ಮಾದರಿಗೆ ಅನುಗುಣವಾಗಿವೆ. ಹೀಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ICMR ಮಹಾನಿರ್ದೇಶಕ ಡಾ. ರಾಜೀವ್ ಬಹ್ಲ್ ತಿಳಿಸಿದ್ದಾರೆ. 73 ICMR-DHR ವೈರಸ್ ಸಂಶೋಧನೆ ಮತ್ತು ರೋಗನಿರ್ಣಯ ಪ್ರಯೋಗಾಲಯಗಳ ಜೀನೋಮಿಕ್ ಕಣ್ಗಾವಲಿನಲ್ಲಿ 2025ರಿಂದ ಭಾರತದಲ್ಲಿ ಹರಡುತ್ತಿರುವ ವಂಶಾವಳಿಗೆ ಸೇರಿದ ಇನ್ಫ್ಲುಯೆನ್ಸ A (H1N1) ವೈರಸ್‌ಗಳು ಪತ್ತೆಯಾಗಿವೆ. ವೈರಸ್‌ನಲ್ಲಿ ಕಂಡುಬಂದ ಆನುವಂಶಿಕ ಬದಲಾವಣೆಗಳು ಸಾಮಾನ್ಯ ಕಾಲೋಚಿತ ‘ಆ್ಯಂಟಿಜೆನಿಕ್ ಡ್ರಿಫ್ಟ್’ಗೆ ಅನುಗುಣವಾಗಿದ್ದು, ಹೊಸ ಅಥವಾ ಹೆಚ್ಚು ಅಪಾಯಕಾರಿ ತಳಿಯ ಉದ್ಭವವನ್ನು ಸೂಚಿಸುವುದಿಲ್ಲ ಎಂದು…