ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) 1033 ರಾಷ್ಟ್ರೀಯ ಹೆದ್ದಾರಿ ಸಹಾಯವಾಣಿಯನ್ನು ಕೃತಕ ಬುದ್ಧಿಮತ್ತೆ (AI), ರಿಯಲ್‌ಟೈಮ್ ಸ್ಥಳ ಪತ್ತೆ ಹಾಗೂ ತ್ವರಿತ ತುರ್ತು ಪ್ರತಿಕ್ರಿಯೆ ತಂತ್ರಜ್ಞಾನಗಳೊಂದಿಗೆ ಮೇಲ್ದರ್ಜೆಗೇರಿಸಲು ಮುಂದಾಗಿದೆ. ಹೊಸ ವ್ಯವಸ್ಥೆಯ ಮೂಲಕ ಕರೆ ಮಾಡುವವರ ಸ್ಥಳವನ್ನು ತಕ್ಷಣ ಪತ್ತೆಹಚ್ಚಿ, ಅಗತ್ಯಕ್ಕೆ ಅನುಗುಣವಾಗಿ ಆಂಬುಲೆನ್ಸ್, ಕ್ರೇನ್ ಅಥವಾ ಗಸ್ತು ವಾಹನವನ್ನು ತ್ವರಿತವಾಗಿ ನಿಯೋಜಿಸಲು ಸಾಧ್ಯವಾಗಲಿದೆ. ಅಲ್ಲದೆ, ಹಲವು ಭಾರತೀಯ ಭಾಷೆಗಳಲ್ಲಿ ಸೇವೆ ಒದಗಿಸುವ ವ್ಯವಸ್ಥೆಯನ್ನೂ ರೂಪಿಸಲಾಗುತ್ತಿದೆ. 2018ರಲ್ಲಿ ಆರಂಭಗೊಂಡ 1033 ಸಹಾಯವಾಣಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತಿದ್ದು, ದೇಶದ 1.46 ಲಕ್ಷ ಕಿ.ಮೀ.ಗೂ ಅಧಿಕ ರಾಷ್ಟ್ರೀಯ ಹೆದ್ದಾರಿಗಳನ್ನು ಒಳಗೊಂಡಿದೆ. ಪ್ರತಿದಿನ ಸರಾಸರಿ 15,000ಕ್ಕೂ ಹೆಚ್ಚು ಕರೆಗಳು ಬರುತ್ತಿದ್ದು, ವೈದ್ಯಕೀಯ ತುರ್ತು ಸೇವೆ, ವಾಹನ ಕೆಟ್ಟು ನಿಲ್ಲುವುದು, ಆಂಬುಲೆನ್ಸ್, ಕ್ರೇನ್, ಗಸ್ತು ವಾಹನ, ಟೋಲ್ ಪ್ಲಾಜಾ ಹಾಗೂ FASTag ಸಂಬಂಧಿತ ಸಮಸ್ಯೆಗಳ ಕುರಿತು ನೆರವು ಕೋರಲಾಗುತ್ತದೆ. ಪ್ರಸ್ತಾವಿತ…
