ಮೀರತ್‌ನಲ್ಲಿ ಸೂರ್ಯಕಿರಣ್ ತಂಡದ ಚೊಚ್ಚಲ ವೈಮಾನಿಕ ಪ್ರದರ್ಶನ; ಕಣ್ತುಂಬಿಕೊಂಡ ಲಕ್ಷಕ್ಕೂ ಹೆಚ್ಚು ಜನ

ಮೀರತ್: ಭಾರತೀಯ ವಾಯುಪಡೆಯ ಪ್ರತಿಷ್ಠಿತ ಸೂರ್ಯಕಿರಣ್ ಏರೋಬ್ಯಾಟಿಕ್ ತಂಡ (SKAT) ಸೆಪ್ಟೆಂಬರ್ 19 ಮತ್ತು 20ರಂದು ಮೀರತ್‌ನಲ್ಲಿ ಚೊಚ್ಚಲ ವೈಮಾನಿಕ ಪ್ರದರ್ಶನ ನೀಡಿದ್ದು, ಎರಡು ದಿನಗಳ ಕಸರತ್ತಿಗೆ ಒಂದು ಲಕ್ಷಕ್ಕೂ ಅಧಿಕ ಮಂದಿ ಸಾಕ್ಷಿಯಾದರು. ಒಂಬತ್ತು ವಿಮಾನಗಳ ತಂಡ ಆಕಾಶದಲ್ಲಿ ನಡೆಸಿದ ನಿಖರ ಹಾಗೂ ಸಾಹಸಮಯ ವೈಮಾನಿಕ ಕಸರತ್ತುಗಳು ಪ್ರೇಕ್ಷಕರ ಗಮನ ಸೆಳೆದವು. ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್‌ಗಳು ಹಾಗೂ ಎನ್‌ಎಸ್‌ಎಸ್ ಸ್ವಯಂಸೇವಕರು ಸೇರಿದಂತೆ ಸಾವಿರಾರು ಮಂದಿ ಪ್ರದರ್ಶನ ವೀಕ್ಷಿಸಲು ಆಗಮಿಸಿದ್ದರು. ಸೆಪ್ಟೆಂಬರ್ 20ರಂದು ರಕ್ಷಣಾ ಖಾತೆ ರಾಜ್ಯ ಸಚಿವ ಸಂಜಯ್ ಸೇಠ್ ಪ್ರದರ್ಶನ ವೀಕ್ಷಿಸಿದರು. ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಅವರು, ಸೂರ್ಯಕಿರಣ್ ತಂಡದ ಪ್ರದರ್ಶನವು ಶಿಸ್ತು, ನಿಖರತೆ, ತಂಡದ ಸಹಕಾರ ಮತ್ತು ವೃತ್ತಿಪರತೆಯ ಪ್ರತೀಕ ಎಂದು ಬಣ್ಣಿಸಿದ್ದಾರೆ. ತಂಡದ ಮೂರು ದಶಕಗಳ ಪಯಣ ಹಾಗೂ ಭಾರತ ಮತ್ತು ವಿದೇಶಗಳಲ್ಲಿ 800ಕ್ಕೂ ಅಧಿಕ ವೈಮಾನಿಕ ಪ್ರದರ್ಶನಗಳನ್ನು ನೀಡಿರುವ ದಾಖಲೆಯನ್ನೂ ಅವರು…

ನವೆಂಬರ್ ಅಂತ್ಯಕ್ಕೆ ಬಯಲುಸೀಮೆಯ ಕೆರೆಗಳಿಗೆ ಭದ್ರಾ ನೀರು: ಸಚಿವ ಚಲುವರಾಯಸ್ವಾಮಿ

ಚಿತ್ರದುರ್ಗ/ಹಿರಿಯೂರು, ಸೆ.20: ಬರಪೀಡಿತ ಬಯಲುಸೀಮೆಯ ಜನರ ಬಹುದಿನಗಳ ನಿರೀಕ್ಷೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆಯಡಿ ನವೆಂಬರ್ ಅಂತ್ಯದ ವೇಳೆಗೆ ಕೆರೆಗಳಿಗೆ ನೀರು ಹರಿಸಲು ಸರ್ಕಾರ ಬದ್ಧವಾಗಿದೆ ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು. ಹಿರಿಯೂರು ತಾಲೂಕಿನ ಐಮಂಗಲ ಸಮೀಪ ಚಿತ್ರದುರ್ಗ ಶಾಖಾ ಕಾಲುವೆಯಡಿ ಪ್ರಾಯೋಗಿಕವಾಗಿ ನೀರು ಹರಿದ ಕೆರೆಗಳನ್ನು ವೀಕ್ಷಿಸಿದ ಸಚಿವರು, ಆದ್ರಾಳು ಬಳಿ ಭದ್ರಾ ನದಿಗೆ ಬಾಗಿನ ಅರ್ಪಿಸಿ ಮಾತನಾಡಿದರು. ತುಂಗಾದಿಂದ ಭದ್ರಾಗೆ 17.5 ಟಿಎಂಸಿ ನೀರು ಲಿಫ್ಟ್ ಮಾಡುವ ಕಾಮಗಾರಿಯನ್ನು ನವೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು. ಪ್ರಸ್ತುತ ಗುರುತ್ವಾಕರ್ಷಣೆಯಿಂದ ನೀರು ಸರಾಗವಾಗಿ ಹರಿಯುವ ಪ್ರದೇಶಗಳ ಕೆರೆಗಳನ್ನು ಭರ್ತಿ ಮಾಡಲಾಗುತ್ತಿದೆ. ಉಳಿದ ಕೆರೆಗಳಿಗೆ ಕಾಲುವೆಗಳ ಮೂಲಕ ನೀರು ತಲುಪಿಸಲು ಇನ್ನೂ ಸುಮಾರು ಎರಡು ತಿಂಗಳು ಬೇಕಾಗಬಹುದು ಎಂದು ಸಚಿವರು ತಿಳಿಸಿದರು. ಕಾಲುವೆ ಒಡೆಯುವುದು ಅಥವಾ ಆತುರದ ಕ್ರಮಕ್ಕೆ ಮುಂದಾಗದೆ ರೈತರು ಸಹಕರಿಸಬೇಕು ಎಂದು…

ಮುಂಬೈ ಗಣೇಶೋತ್ಸವದಲ್ಲಿ ವಿದ್ಯುತ್ ಅವಘಡ: ಬಾಲಕಿ ಸೇರಿ ಇಬ್ಬರು ಸಾವು, ಹಲವರಿಗೆ ಗಾಯ

ಮುಂಬೈ: ಗಣೇಶೋತ್ಸವದ ಸಂಭ್ರಮದ ನಡುವೆ ಮುಂಬೈನ ಲಾಲ್‌ಬಾಗ್–ಕಲಾಚೌಕಿ ಪ್ರದೇಶದಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ 8 ವರ್ಷದ ಬಾಲಕಿ ಸೇರಿದಂತೆ ಇಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಭಾನುವಾರ ಮುಂಜಾನೆ ಸುಮಾರು 2.20ಕ್ಕೆ ದತ್ತಾರಾಮ್ ಲಾಡ್ ಮಾರ್ಗದಲ್ಲಿರುವ ಕಲಾಚೌಕಿ ವಿಭಾಗ ಸಾರ್ವಜನಿಕ ಉತ್ಸವ ಮಂಡಳಿಯ ಗಣೇಶ ಮಂಟಪದ ಪ್ರವೇಶದ್ವಾರದ ಬಳಿ ಘಟನೆ ನಡೆದಿದೆ. ಗಣೇಶ ದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ಸೇರಿದ್ದ ವೇಳೆ ತಾತ್ಕಾಲಿಕ ಕುಡಿಯುವ ನೀರು ಹಾಗೂ ತಂಪು ಪಾನೀಯದ ಮಳಿಗೆಯ ಬಳಿ ವಿದ್ಯುತ್ ಪ್ರವಾಹ ಹರಿದಿರುವುದು ಪ್ರಾಥಮಿಕವಾಗಿ ತಿಳಿದುಬಂದಿದೆ. ಘಟನೆಯ ಬಳಿಕ ಗಾಯಾಳುಗಳನ್ನು ಬೈಕುಲ್ಲಾದ ಮಸೀನಾ ಆಸ್ಪತ್ರೆ ಹಾಗೂ ಪರೇಲ್‌ನ ಗ್ಲೋಬಲ್ ಆಸ್ಪತ್ರೆಗೆ ದಾಖಲಿಸಲಾಯಿತು. ಮಸೀನಾ ಆಸ್ಪತ್ರೆಯಲ್ಲಿ 8 ವರ್ಷದ ರಘಿನಿ ಘನಶ್ಯಾಮ್ ಯಾದವ್ ಮೃತಪಟ್ಟಿದ್ದರೆ, ಗ್ಲೋಬಲ್ ಆಸ್ಪತ್ರೆಯಲ್ಲಿ 33 ವರ್ಷದ ಸುಜಾತಾ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಗಾಯಗೊಂಡವರಲ್ಲಿ 12 ವರ್ಷದ ಬಾಲಕಿ ರೂಹಿ ಸಿಂಗ್ ಸ್ಥಿತಿ…

₹37.50 ಕೋಟಿ ನೀರಾವರಿ ಯೋಜನೆ ನಿರ್ವಹಣೆಯಲ್ಲಿ ಲೋಪ: ತಕ್ಷಣ ನೀರು ಹರಿಸಲು ಡಾ.ಸಿ.ಟಿ.ರವಿ ಸೂಚನೆ

ಚಿಕ್ಕಮಗಳೂರು: ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ನೀರಾವರಿ ಯೋಜನೆಗಳ ನಿರ್ವಹಣೆಯಲ್ಲಿ ಲೋಪ ಕಂಡುಬಂದಿರುವ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಸಿ.ಟಿ.ರವಿ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು, ತಕ್ಷಣ ದುರಸ್ತಿ ಕಾರ್ಯ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸುವಂತೆ ಸೂಚಿಸಿದರು. ಬೈರಾಪುರ ಪಿಕಪ್‌ನಿಂದ ಲಕ್ಯಾ ಮಾದರಸನ ಕೆರೆಗೆ ನೀರು ತುಂಬಿಸುವ ಯೋಜನೆಯ ಪಂಪ್‌ಹೌಸ್ ಹಾಗೂ ಕರಗಡ ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಭೇಟಿ ನೀಡಿದ ಅವರು ಕಾಮಗಾರಿಗಳ ಸ್ಥಿತಿಗತಿಯನ್ನು ಪರಿಶೀಲಿಸಿದರು. ಟ್ರಾನ್ಸ್‌ಫಾರ್ಮರ್, ಮೋಟಾರ್ ದುರಸ್ತಿಗೆ ಸೂಚನೆ ಸ್ಥಳ ಪರಿಶೀಲನೆ ವೇಳೆ ಟ್ರಾನ್ಸ್‌ಫಾರ್ಮರ್‌ಗಳ ನಿರ್ವಹಣೆ ಸಮರ್ಪಕವಾಗಿಲ್ಲದಿರುವುದು, ಮೋಟಾರ್‌ಗಳು ಕಾರ್ಯನಿರ್ವಹಿಸದಿರುವುದು ಹಾಗೂ ಕಾಲುವೆಗಳಲ್ಲಿ ಗಿಡಗಂಟೆ ಮತ್ತು ಹೂಳು ತುಂಬಿರುವುದು ಗಮನಕ್ಕೆ ಬಂದಿತು. ಇದರಿಂದ ಕೆರೆಗಳಿಗೆ ನೀರು ಸಮರ್ಪಕವಾಗಿ ಹರಿಸಲು ಅಡಚಣೆಯಾಗುತ್ತಿದೆ ಎಂದು ರವಿ ಅಸಮಾಧಾನ ವ್ಯಕ್ತಪಡಿಸಿದರು. ಸಂಬಂಧಪಟ್ಟ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಾಗೂ ಅಧಿಕಾರಿಗಳನ್ನು ದೂರವಾಣಿ ಮೂಲಕ ಸಂಪರ್ಕಿಸಿ, ವಿದ್ಯುತ್ ಸರಬರಾಜು ವ್ಯವಸ್ಥೆ ಸರಿಪಡಿಸಿ,…

ಕರ್ನಾಟಕದ 2ನೇ ಅಧಿಕೃತ ಆಡಳಿತ ಭಾಷೆಯಾಗಿ ತುಳು; ಸರ್ಕಾರಕ್ಕೆ ದೆಹಲಿ ತುಳುಸಿರಿ ಅಭಿನಂದನೆ

ನವದೆಹಲಿ:  ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಆಡಳಿತ ಭಾಷೆಯನ್ನಾಗಿ ಮಾಡುವ ಕುರಿತು ರಾಜ್ಯ ಸರ್ಕಾರ ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿರುವುದಕ್ಕೆ ದೆಹಲಿ ತುಳುಸಿರಿ ಅಭಿನಂದನೆ ಸಲ್ಲಿಸಿದೆ. ಕರ್ನಾಟಕದ ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡಬೇಕೆಂಬ ಬೇಡಿಕೆಯನ್ನು ಹಲವು ವರ್ಷಗಳಿಂದ ತುಳುವರು ಮುಂದಿಡುತ್ತಿದ್ದು, ಸರ್ಕಾರದ ನಿರ್ಧಾರ ಸಂತಸ ತಂದಿದೆ ಎಂದು ದೆಹಲಿ ತುಳುಸಿರಿ ಅಧ್ಯಕ್ಷ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ವಸಂತ ಶೆಟ್ಟಿ ಬೆಳ್ಳಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತುಳುವನ್ನು ರಾಜ್ಯದ ಎರಡನೇ ಅಧಿಕೃತ ಆಡಳಿತ ಭಾಷೆಯನ್ನಾಗಿ ಘೋಷಿಸುವಂತೆ ದೆಹಲಿ ತುಳುಸಿರಿ ವತಿಯಿಂದ ಎಲ್ಲ ರಾಜಕೀಯ ಪಕ್ಷಗಳಿಗೆ ಮನವಿ ಮಾಡಲಾಗಿತ್ತು. ಕಾಂಗ್ರೆಸ್ ಪಕ್ಷವೂ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಈ ಅಂಶವನ್ನು ಸೇರಿಸಿತ್ತು. ಇದೀಗ ಸರ್ಕಾರ ತನ್ನ ಪ್ರಣಾಳಿಕೆ ಭರವಸೆಯಂತೆ…

ಅಕ್ಟೋಬರ್‌ನಲ್ಲಿ 34,920 ಗ್ರಾಮೀಣ ಯುವಕರಿಗೆ DDU-GKY 2.0 ಕೌಶಲ ತರಬೇತಿ

ನವದೆಹಲಿ: ಪರಿಷ್ಕೃತ ದೀನ್ ದಯಾಳ್ ಉಪಾಧ್ಯಾಯ–ಗ್ರಾಮೀಣ ಕೌಶಲ್ಯ ಯೋಜನೆ (DDU-GKY) 2.0 ಅಡಿಯಲ್ಲಿ ಅಕ್ಟೋಬರ್ 2026ರಿಂದ 14 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 34,920 ಗ್ರಾಮೀಣ ಯುವಕರು ಕೌಶಲ ತರಬೇತಿ ಆರಂಭಿಸಲಿದ್ದಾರೆ. ಗ್ರಾಮೀಣಾಭಿವೃದ್ಧಿ ಸಚಿವಾಲಯದ ಪ್ರಕಾರ, ಅಕ್ಟೋಬರ್‌ನಲ್ಲಿ ಒಡಿಶಾ, ಮಿಜೋರಾಂ, ಸಿಕ್ಕಿಂ, ಮಧ್ಯಪ್ರದೇಶ, ರಾಜಸ್ಥಾನ, ಪಶ್ಚಿಮ ಬಂಗಾಳ, ಹಿಮಾಚಲ ಪ್ರದೇಶ, ತಮಿಳುನಾಡು, ಉತ್ತರಾಖಂಡ, ಉತ್ತರ ಪ್ರದೇಶ, ಪುದುಚೇರಿ, ಕರ್ನಾಟಕ, ತೆಲಂಗಾಣ ಹಾಗೂ ಬಿಹಾರದಲ್ಲಿ ಒಟ್ಟು 1,164 ತರಬೇತಿ ಬ್ಯಾಚ್‌ಗಳು ಆರಂಭವಾಗಲಿವೆ. ಈ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಡಿಸೆಂಬರ್ 31, 2027ರೊಳಗೆ 3,57,112 ಗ್ರಾಮೀಣ ಯುವಕರಿಗೆ ತರಬೇತಿ ನೀಡುವ ಗುರಿ ನಿಗದಿಪಡಿಸಲಾಗಿದೆ. ಕೇಂದ್ರ ಪ್ರಾಯೋಜಿತ DDU-GKY ಯೋಜನೆಯು ಗ್ರಾಮೀಣ ಪ್ರದೇಶದ ಬಡ ಯುವಕರಿಗೆ ಉದ್ಯೋಗಾವಕಾಶಕ್ಕೆ ಸಂಪರ್ಕ ಹೊಂದಿದ ಕೌಶಲ ತರಬೇತಿ ನೀಡುವ ಉದ್ದೇಶ ಹೊಂದಿದೆ. ಕೋರ್ಸ್‌ಗೆ ಅನುಗುಣವಾಗಿ ತರಬೇತಿಯ ಅವಧಿ ಮೂರು ತಿಂಗಳಿಂದ 12 ತಿಂಗಳವರೆಗೆ…

ಅ.1ರಿಂದ ಸಬ್ಸಿಡಿ LPG ಪ್ರಯೋಜನಕ್ಕೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ; ದೃಢೀಕರಣವನ್ನು ಹೀಗೆ ಮಾಡಿಕೊಳ್ಳಿ

ನವದೆಹಲಿ: ಸಬ್ಸಿಡಿ ಸಹಿತ ದರದಲ್ಲಿ ಗೃಹಬಳಕೆಯ ಎಲ್‌ಪಿಜಿ ರೀಫಿಲ್ ಪಡೆಯಲು ಅಕ್ಟೋಬರ್ 1, 2026ರಿಂದ ಆಧಾರ್ ಆಧಾರಿತ ಬಯೋಮೆಟ್ರಿಕ್ ದೃಢೀಕರಣ (BAA) ಪೂರ್ಣಗೊಳಿಸುವುದು ಕಡ್ಡಾಯವಾಗಲಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ತಿಳಿಸಿದೆ. ಈಗಾಗಲೇ ಬಯೋಮೆಟ್ರಿಕ್ ದೃಢೀಕರಣ ಪೂರ್ಣಗೊಳಿಸಿರುವ ಗ್ರಾಹಕರು ಯಾವುದೇ ಹೆಚ್ಚುವರಿ ಕ್ರಮ ಕೈಗೊಳ್ಳಬೇಕಿಲ್ಲ. ಸೆ.19ರ ವೇಳೆಗೆ ಸಕ್ರಿಯ ಗೃಹಬಳಕೆಯ ಎಲ್‌ಪಿಜಿ ಗ್ರಾಹಕರಲ್ಲಿ 89.9% ಅಥವಾ 27.43 ಕೋಟಿ ಮಂದಿ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಸಬ್ಸಿಡಿ ಅರ್ಹ ಕುಟುಂಬಗಳಿಗೆ ಮಾತ್ರ ತಲುಪುವಂತೆ ಮಾಡುವುದು, ನಕಲಿ ಹಾಗೂ ಅನರ್ಹ ಸಂಪರ್ಕಗಳನ್ನು ಗುರುತಿಸುವುದು ಮತ್ತು ಗೃಹಬಳಕೆಯ ಸಿಲಿಂಡರ್‌ಗಳ ವಾಣಿಜ್ಯ ಬಳಕೆಯನ್ನು ತಡೆಯುವುದು ದೃಢೀಕರಣದ ಪ್ರಮುಖ ಉದ್ದೇಶವಾಗಿದೆ. ಆಧಾರ್ ಆಧಾರಿತ ದೃಢೀಕರಣವು ಫಲಾನುಭವಿಗಳ ಗುರುತಿಸುವಿಕೆ ಮತ್ತು ಸಬ್ಸಿಡಿ ವಿತರಣೆಯನ್ನು ಹೆಚ್ಚು ಪರಿಣಾಮಕಾರಿಯಾಗಿಸಲು ನೆರವಾಗುತ್ತದೆ. ಇನ್ನೂ BAA ಪೂರ್ಣಗೊಳಿಸದವರು ಎಲ್‌ಪಿಜಿ ಸಿಲಿಂಡರ್ ವಿತರಣೆ ವೇಳೆ ಡೆಲಿವರಿ ಸಿಬ್ಬಂದಿಯ…

ಭಾರತ–ಈಜಿಪ್ಟ್ ಕಡಲ ಸಹಕಾರಕ್ಕೆ ಮತ್ತಷ್ಟು ಬಲ: ಅಲೆಕ್ಸಾಂಡ್ರಿಯಾದಲ್ಲಿ INS ತ್ರಿಶೂಲ್ ನೌಕಾ ತಾಲೀಮು

ಅಲೆಕ್ಸಾಂಡ್ರಿಯಾ: ಭಾರತೀಯ ನೌಕಾಪಡೆಯ ಮಾರ್ಗದರ್ಶಿ ಕ್ಷಿಪಣಿ ಯುದ್ಧನೌಕೆ ಐಎನ್ಎಸ್ ತ್ರಿಶೂಲ್ ಸೆ.14ರಿಂದ 17ರವರೆಗೆ ಈಜಿಪ್ಟ್‌ನ ಅಲೆಕ್ಸಾಂಡ್ರಿಯಾ ಬಂದರಿಗೆ ಭೇಟಿ ನೀಡಿದ್ದು, ಭಾರತ–ಈಜಿಪ್ಟ್ ನಡುವಿನ ಕಡಲ ಸಹಕಾರಕ್ಕೆ ಮತ್ತಷ್ಟು ಬಲ ನೀಡಿದೆ. ಅಲೆಕ್ಸಾಂಡ್ರಿಯಾ ಬಂದರಿಗೆ ಆಗಮಿಸಿದ ಐಎನ್ಎಸ್ ತ್ರಿಶೂಲ್‌ಗೆ ಈಜಿಪ್ಟ್ ನೌಕಾಪಡೆಯ ಅಲ್ ಖದೀರ್ ಹಡಗು ಆತ್ಮೀಯ ಸ್ವಾಗತ ನೀಡಿತು. ಭೇಟಿ ವೇಳೆ ಯುದ್ಧನೌಕೆಯ ಕಮಾಂಡಿಂಗ್ ಅಧಿಕಾರಿ ಹಾಗೂ ಸಿಬ್ಬಂದಿ ಚಾಟ್ಬಿ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ಸಲ್ಲಿಸಿದರು. ಎರಡು ವಿಶ್ವಯುದ್ಧಗಳಲ್ಲಿ ಪ್ರಾಣ ಕಳೆದುಕೊಂಡ ಯೋಧರ ಸ್ಮರಣಾರ್ಥ ಇರುವ ಈ ಸ್ಮಾರಕದಲ್ಲಿ 12 ಸಮಾಧಿಗಳಿದ್ದು, ಪೂರ್ವ ಮೆಡಿಟರೇನಿಯನ್ ಸಮುದ್ರದಲ್ಲಿ ಮುಳುಗಿದ ಹಡಗುಗಳಲ್ಲಿ ಮೃತಪಟ್ಟ 19 ಭಾರತೀಯ ಯೋಧರ ಹೆಸರುಗಳೂ ದಾಖಲಾಗಿವೆ. ಈಜಿಪ್ಟ್‌ನಲ್ಲಿರುವ ಭಾರತದ ರಾಯಭಾರಿ ಸುರೇಶ್ ಕೆ. ರೆಡ್ಡಿ ಅವರು ಐಎನ್ಎಸ್ ತ್ರಿಶೂಲ್‌ಗೆ ಭೇಟಿ ನೀಡಿ ನೌಕಾಪಡೆಯ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದರು. ಈ ಪ್ರದೇಶದಲ್ಲಿ ಭಾರತೀಯ ನೌಕಾಪಡೆಯ…

ಮಹಾರಾಣಿ ಕ್ಲಸ್ಟರ್ ವಿವಿಯ ಪ್ರಭಾರ ಕುಲಪತಿಯಾಗಿ ಡಾ. ಮಮತಾ ಬಿ. ಅಧಿಕಾರ ಸ್ವೀಕಾರ

ಬೆಂಗಳೂರು: ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯದ ನೂತನ ಪ್ರಭಾರ ಕುಲಪತಿಯಾಗಿ ವಿ.ಎಚ್.ಡಿ. ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಹೋಮ್ ಸೈನ್ಸ್ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಹಾಗೂ ನಿರ್ದೇಶಕಿ ಡಾ. ಮಮತಾ ಬಿ. ಅವರು ಶನಿವಾರ ಅಧಿಕಾರ ಸ್ವೀಕರಿಸಿದರು. ಈವರೆಗೆ ಪ್ರಭಾರ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಅಶೋಕ ಎಸ್.ಬಿ. ಅವರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ತೆರವಾದ ಸ್ಥಾನಕ್ಕೆ ಡಾ. ಮಮತಾ ಬಿ. ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ. ಹೋಮ್ ಸೈನ್ಸ್‌ನ ಫ್ಯಾಮಿಲಿ ರಿಸೋರ್ಸ್ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಪರಿಣತಿ ಹೊಂದಿರುವ ಡಾ. ಮಮತಾ ಬಿ. ಅವರಿಗೆ 29 ವರ್ಷಗಳ ಬೋಧನಾ ಅನುಭವವಿದೆ. 25ಕ್ಕೂ ಅಧಿಕ ಸಂಶೋಧನಾ ಪ್ರಕಟಣೆಗಳನ್ನು ಹೊರತಂದಿರುವ ಅವರು, 20ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದ್ದಾರೆ. ಸಂಪಾದಿತ ಪುಸ್ತಕಗಳಲ್ಲಿ ಐದು ಅಧ್ಯಾಯಗಳನ್ನು ರಚಿಸಿದ್ದು, ನಾಲ್ವರು ಸಂಶೋಧನಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ವಿಶ್ವವಿದ್ಯಾಲಯದ ಹೋಮ್ ಸೈನ್ಸ್ ಪದವಿ ವಿಭಾಗದ…

ಹುಬ್ಬಳ್ಳಿಯಲ್ಲಿ ₹700 ಕೋಟಿ ವೆಚ್ಚದ ಕೆಎಲ್ಇ ವೈದ್ಯಕೀಯ ಕ್ಯಾಂಪಸ್; 1,200 ಹಾಸಿಗೆಗಳ ಸೌಲಭ್ಯ

ಹುಬ್ಬಳ್ಳಿ: ಕೇಂದ್ರ ಗೃಹ ಹಾಗೂ ಸಹಕಾರ ಸಚಿವ ಅಮಿತ್ ಶಾ ಅವರು ಶನಿವಾರ ಹುಬ್ಬಳ್ಳಿಯ ಜೆಜಿಎಂಎಂ ವೈದ್ಯಕೀಯ ಕಾಲೇಜು ಹಾಗೂ ಕೆಎಲ್ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ನೂತನ ಕ್ಯಾಂಪಸ್‌ಗೆ ಭೇಟಿ ನೀಡಿದರು. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕೆಎಲ್ಇ ಸಂಸ್ಥೆಯ ದೀರ್ಘಕಾಲದ ಸೇವೆಯನ್ನು ಅವರು ಶ್ಲಾಘಿಸಿದರು. ಶಾ ಅವರು ಎಕ್ಸ್‌ನಲ್ಲಿ ಹಂಚಿಕೊಂಡ ಮಾಹಿತಿಯಂತೆ, 110 ವರ್ಷಕ್ಕೂ ಹೆಚ್ಚು ಕಾಲ ಕೆಎಲ್ಇ ಶಿಕ್ಷಣ ಮತ್ತು ಆರೋಗ್ಯ ಸೇವೆ ಮೂಲಕ ಸಮಾಜಕ್ಕೆ ಕೊಡುಗೆ ನೀಡುತ್ತಿದೆ. ನೂತನ ವೈದ್ಯಕೀಯ ಕ್ಯಾಂಪಸ್‌ನಲ್ಲಿ 250 ಎಂಬಿಬಿಎಸ್ ಸೀಟುಗಳು ಹಾಗೂ 1,200 ಆಸ್ಪತ್ರೆ ಹಾಸಿಗೆಗಳ ವ್ಯವಸ್ಥೆಯಿದ್ದು, ಈ ಪೈಕಿ 300 ಹಾಸಿಗೆಗಳನ್ನು ಆರ್ಥಿಕವಾಗಿ ದುರ್ಬಲ ವರ್ಗದ ರೋಗಿಗಳಿಗೆ ಮೀಸಲಿಡಲಾಗಿದೆ ಎಂದು ಶಲಾಘಿಸಿದ್ದರೆ. 50 ಎಕರೆ ಪ್ರದೇಶದಲ್ಲಿ ಕ್ಯಾಂಪಸ್ ಸುಮಾರು 50 ಎಕರೆ ಪ್ರದೇಶದಲ್ಲಿ ₹700 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ವೈದ್ಯಕೀಯ ಸಂಕೀರ್ಣವು…