ಕೆಎಸ್‌ಕ್ಯೂ ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರಿಗೆ ಕತಾರ್ ಐಸಿಸಿ ಗೌರವ

ದೋಹಾ: ಕತಾರ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ನೀಡಿದ ಕೊಡುಗೆ ಹಾಗೂ ನಾಯಕತ್ವವನ್ನು ಗುರುತಿಸಿ, ಕರ್ನಾಟಕ ಸಂಘ ಕತಾರ್‌ (ಕೆಎಸ್‌ಕ್ಯೂ) ಅಧ್ಯಕ್ಷ ಸುಬ್ರಹ್ಮಣ್ಯ ಹೆಬ್ಬಾಗಿಲು ಅವರನ್ನು ಭಾರತೀಯ ಸಾಂಸ್ಕೃತಿಕ ಕೇಂದ್ರ (ಐಸಿಸಿ) ಸನ್ಮಾನಿಸಿದೆ. ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯನಿರ್ವಹಿಸುವ ಐಸಿಸಿಯ ಅಶೋಕ ಹಾಲ್‌ನಲ್ಲಿ ನಡೆದ 101ನೇ ಆವೃತ್ತಿಯ ‘ವೆಡ್ನೆಸ್‌ಡೇ ಫಿಯೆಸ್ಟಾ–ಸಿಲ್ವರ್ ರೈಸ್’ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈ ಗೌರವ ನೀಡಲಾಯಿತು. ಕೆಎಸ್‌ಕ್ಯೂ ಭಾರತೀಯ ರಾಯಭಾರ ಕಚೇರಿಯಿಂದ ಮಾನ್ಯತೆ ಪಡೆದ ಪ್ರಮುಖ ಸಂಘಟನೆಯಾಗಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕತಾರ್‌ನ ಭಾರತೀಯ ರಾಯಭಾರ ಕಚೇರಿಯ ಕೌನ್ಸಿಲರ್ ಹಾಗೂ ಹೆಡ್ ಆಫ್ ಚಾನ್ಸರಿ ಮತ್ತು ಕಾನ್ಸುಲರ್ ಡಾ. ವೈಭವ್ ಎ. ತಾಂಡಲೆ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐಸಿಸಿ ಅಧ್ಯಕ್ಷ ಎ.ಪಿ. ಮಣಿಕಂಠನ್ ಅವರು ಮಾತನಾಡಿ, ಭಾರತೀಯ ಸಮುದಾಯದ ಅಭಿವೃದ್ಧಿಗೆ ಸಂಘಟನೆಗಳ ಮುಖಂಡರು ನೀಡುತ್ತಿರುವ ಸೇವೆಯನ್ನು ಶ್ಲಾಘಿಸಿದರು. ಸುಬ್ರಹ್ಮಣ್ಯ ಹೆಬ್ಬಾಗಿಲು ಅವರ ಸಮಾಜಸೇವೆ…