ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಆವರಣದಲ್ಲಿ ₹116 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಅತ್ಯಾಧುನಿಕ ‘ಕಾಸ್ಮೋಸ್–ಮೈಸೂರು ತಾರಾಲಯ’ವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉದ್ಘಾಟಿಸಿದರು. ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (IIA) ನಿರ್ಮಿಸಿರುವ ಈ ತಾರಾಲಯ ದೇಶದ ಮೊದಲ ಎಲ್‌ಇಡಿ ಡೋಮ್ ತಾರಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೂರು ಅಂತಸ್ತಿನ ಕಟ್ಟಡದಲ್ಲಿ ಅತ್ಯಾಧುನಿಕ ‘ಸ್ಕೈ ಥಿಯೇಟರ್’, ಖಗೋಳ ವಿಜ್ಞಾನ ವಸ್ತುಸಂಗ್ರಹಾಲಯ, ಪ್ರದರ್ಶನ ಸಭಾಂಗಣಗಳು, ಉಪನ್ಯಾಸ ಕೊಠಡಿಗಳು ಹಾಗೂ ತರಬೇತಿ ಪ್ರಯೋಗಾಲಯಗಳನ್ನು ನಿರ್ಮಿಸಲಾಗಿದೆ. ಈ ತಾರಾಲಯವು ಬಾಹ್ಯಾಕಾಶದ ವಿಸ್ಮಯಗಳನ್ನು ಜನರಿಗೆ ಪರಿಚಯಿಸುವುದರ ಜೊತೆಗೆ ಖಗೋಳ ವಿಜ್ಞಾನ ಅಧ್ಯಯನ ಮತ್ತು ಸಂಶೋಧನೆಗೆ ಪೂರಕವಾಗಲಿದೆ. ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಡಾ. ಸುಧಾ ಯಾದವ್, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಉಪಸ್ಥಿತರಿದ್ದರು.
Day: November 13, 2026
ಅಸ್ಸಾಂನಲ್ಲಿ ಭೀಕರ ಅಪಘಾತ; 23 ಮಂದಿ ದುರ್ಮರಣ
ಗುವಾಹಟಿ: ಅಸ್ಸಾಂನ ಕಾಜಿರಂಗ ಸಮೀಪದ ರೊಂಗಾಜನ್ ಪ್ರದೇಶದಲ್ಲಿ ಮಿನಿ ಬಸ್ ಮತ್ತು ಕಂಟೇನರ್ ಟ್ರಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 23 ಮಂದಿ ಮೃತಪಟ್ಟಿದ್ದಾರೆ. ಬೊಕಾಖಾಟ್‌ನಿಂದ ನಗಾಂವ್‌ಗೆ ತೆರಳುತ್ತಿದ್ದ ಮಿನಿ ಬಸ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ. ಹಲವು ಪ್ರಯಾಣಿಕರು ಅವಶೇಷಗಳ ನಡುವೆ ಸಿಲುಕಿಕೊಂಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಗಾಯಾಳುಗಳನ್ನು ಕೊಹೊರಾ ಮಾದರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಿನಿ ಬಸ್ ಅತಿವೇಗದಲ್ಲಿ ಚಲಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಚಿವ ಅತುಲ್ ಬೋರಾ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ…
ಯುಎಇ ರಸ್ತೆ ಅಪಘಾತ: ಭಾರತೀಯ ಮಗು ಸೇರಿ 14 ಮಂದಿ ಸಾವು; 30 ಜನರಿಗೆ ಗಾಯ
ಫುಜೈರಾ: ಯುನೈಟೆಡ್ ಅರಬ್ ಎಮಿರೇಟ್ಸ್‌ನ (ಯುಎಇ) ಫುಜೈರಾ ಎಮಿರೇಟ್‌ನಲ್ಲಿ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಭಾರತೀಯ ಪ್ರಜೆಗಳೂ ಸೇರಿದಂತೆ 14 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 30 ಮಂದಿ ಗಾಯಗೊಂಡಿದ್ದು, ಈ ಪೈಕಿ 15 ಜನರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಯುಎಇ ಆಂತರಿಕ ಸಚಿವಾಲಯ ತಿಳಿಸಿದೆ. ಏನಿದು ಘಟನೆ? ಫುಜೈರಾ ಎಮಿರೇಟ್‌ನ ಪ್ರವೇಶದ್ವಾರದ ಸಮೀಪವಿರುವ ಶೇಖ್ ಖಲೀಫಾ ಬಿನ್ ಜಾಯೆದ್ ರಸ್ತೆಯಲ್ಲಿ ಬುಧವಾರ ತಡರಾತ್ರಿ ಈ ಅಪಘಾತ ಸಂಭವಿಸಿದೆ. ವೇಗವಾಗಿ ಬರುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಬಳಿಕ ಸಂಚಾರ ದಟ್ಟಣೆಯಿಂದಾಗಿ ರಸ್ತೆಯಲ್ಲಿ ನಿಂತಿದ್ದ ಹಲವು ವಾಹನಗಳಿಗೆ ಟ್ರಕ್ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ಅಕ್ಕಪಕ್ಕದ ವಾಹನಗಳಿಗೂ ವ್ಯಾಪಿಸಿದೆ. ಪರಿಣಾಮ ಭಾರೀ ಅನಾಹುತ ಸಂಭವಿಸಿದೆ. ಈ ಸರಣಿ ಅಪಘಾತದಲ್ಲಿ ಐದು ಟ್ರಕ್‌ಗಳು ಮತ್ತು…
ಒಂದು ರಾಷ್ಟ್ರ, ಒಂದು ರೇಷನ್ ಕಾರ್ಡ್: ಪಡಿತರ ಪ್ರಯೋಜನಗಳು ಈಗ ಭಾರತದಾದ್ಯಂತ ಪೋರ್ಟಬಲ್
ನವದೆಹಲಿ: ಕೇಂದ್ರ ಸರ್ಕಾರದ ‘ಒಂದು ರಾಷ್ಟ್ರ, ಒಂದು ಪಡಿತರ ಚೀಟಿ’ (ONORC) ಯೋಜನೆಯಡಿ 2019ರಿಂದ ಈವರೆಗೆ ದೇಶಾದ್ಯಂತ 233 ಕೋಟಿಗೂ ಹೆಚ್ಚು ಪಡಿತರ ವಹಿವಾಟುಗಳು ನಡೆದಿದ್ದು, 614 ಲಕ್ಷ ಮೆಟ್ರಿಕ್ ಟನ್‌ಗೂ ಅಧಿಕ ಆಹಾರ ಧಾನ್ಯ ವಿತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ನೋಂದಾಯಿತ ಫಲಾನುಭವಿಗಳು ದೇಶದ ಯಾವುದೇ ನ್ಯಾಯಬೆಲೆ ಅಂಗಡಿಯಿಂದ ಸಬ್ಸಿಡಿ ದರದಲ್ಲಿ ಪಡಿತರ ಪಡೆಯಲು ಈ ಯೋಜನೆ ಅವಕಾಶ ಕಲ್ಪಿಸಿದೆ. ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳಿಗೆ ಇದರಿಂದ ಅನುಕೂಲವಾಗಿದೆ. ದೇಶದ ಎಲ್ಲ 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಯೋಜನೆ ಜಾರಿಯಲ್ಲಿದ್ದು, ಪ್ರತಿ ತಿಂಗಳು ಸರಾಸರಿ 3.27 ಕೋಟಿ ವಹಿವಾಟುಗಳು ನಡೆಯುತ್ತಿವೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯ ಎಲ್ಲ ಫಲಾನುಭವಿಗಳಿಗೂ ಇದರ ಸೌಲಭ್ಯ ಲಭ್ಯವಿದೆ. ಅಕ್ಟೋಬರ್ 2026ರ ವೇಳೆಗೆ ಸುಮಾರು 78.65 ಕೋಟಿ ಫಲಾನುಭವಿಗಳ…
ಕೇಂದ್ರವು Rent-a-Cab ಸುಧಾರಣೆಗಳನ್ನು ಪ್ರಸ್ತಾಪಿಸಿದೆ, ಕನಿಷ್ಠ ಫ್ಲೀಟ್ ಅವಶ್ಯಕತೆಯನ್ನು ಐದಕ್ಕೆ ಕಡಿತಗೊಳಿಸಲಾಗಿದೆ
ನವದೆಹಲಿ: ಕೇಂದ್ರವು ಬಾಡಿಗೆ-ಒಂದು-ಕ್ಯಾಬ್ ಚೌಕಟ್ಟಿನಲ್ಲಿ ವ್ಯಾಪಕ ಬದಲಾವಣೆಗಳನ್ನು ಪ್ರಸ್ತಾಪಿಸಿದೆ, ಕನಿಷ್ಠ ಫ್ಲೀಟ್ ಅಗತ್ಯವನ್ನು 50 ವಾಹನಗಳಿಂದ ಐದಕ್ಕೆ ಇಳಿಸುತ್ತದೆ ಮತ್ತು ವ್ಯವಹಾರಗಳು ಈ ವಲಯಕ್ಕೆ ಪ್ರವೇಶಿಸಲು ಮತ್ತು ಕಾರ್ಯನಿರ್ವಹಿಸಲು ಸುಲಭವಾಗುವಂತೆ ಒಂದೇ ಎಲೆಕ್ಟ್ರಾನಿಕ್ ಪರವಾನಗಿಯನ್ನು ಪರಿಚಯಿಸುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಪ್ರಸ್ತಾವಿತ ಸುಧಾರಣೆಗಳು ಪರವಾನಗಿ ಕಾರ್ಯವಿಧಾನಗಳನ್ನು ಸರಳೀಕರಿಸುವುದು, ಬಾಡಿಗೆ ಆಯ್ಕೆಗಳನ್ನು ವಿಸ್ತರಿಸುವುದು ಮತ್ತು ಪ್ರಯಾಣಿಕರ ಸುರಕ್ಷತೆಯನ್ನು ಬಲಪಡಿಸುವ ಗುರಿಯನ್ನು ಹೊಂದಿವೆ. ಹೊಸ ಚೌಕಟ್ಟಿನ ಅಡಿಯಲ್ಲಿ, ನಿರ್ವಾಹಕರು ಚಾಲಕರೊಂದಿಗೆ ಅಥವಾ ಇಲ್ಲದೆ ಕ್ಯಾಬ್‌ಗಳನ್ನು ನೀಡಲು ಅನುಮತಿಸಲಾಗುವುದು, ಪ್ರತಿ ಕಾರ್ಯಾಚರಣಾ ಸ್ಥಳದಲ್ಲಿ ಕನಿಷ್ಠ ಎರಡು ವಾಹನಗಳು ಬೇಕಾಗುತ್ತವೆ. ಐದು ಪ್ರವಾಸಿ ನಗರಗಳಲ್ಲಿ ಶಾಖೆಗಳನ್ನು ನಿರ್ವಹಿಸಲು ಅಸ್ತಿತ್ವದಲ್ಲಿರುವ ಅವಶ್ಯಕತೆಯನ್ನು ಸಹ ರದ್ದುಗೊಳಿಸಲಾಗುತ್ತದೆ. ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಾದ್ಯಂತ ಮಾನ್ಯವಾಗಿರುವ ಒಂದೇ ಪರವಾನಗಿಯು ಮುಖ್ಯ ಕಚೇರಿಗಳು ಮತ್ತು ಶಾಖೆಗಳಿಗೆ ಪ್ರತ್ಯೇಕ ಪರವಾನಗಿಗಳನ್ನು ಬದಲಾಯಿಸುತ್ತದೆ. ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು ಮತ್ತು…
ಅಗಸ್ತ್ಯ ನಿರ್ದೇಶನದ ಕನ್ನಡ ಸಿನಿಮಾ ‘ಮಾರಿಗೇ ದಾರಿ’
ಬೆಂಗಳೂರು: ಅಗಸ್ತ್ಯ ನಿರ್ದೇಶನದ ಕನ್ನಡ ಸಿನಿಮಾ ‘ಮಾರಿಗೇ ದಾರಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ರಾಧಾ ಫಿಲ್ಮ್ಸ್ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಚಿತ್ರದ ಬಗ್ಗೆ ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಅಗಸ್ತ್ಯ, ಮಹಾಲಕ್ಷ್ಮಿ, ಕಾಕ್ರೋಚ್ ಸುಧಿ, ವರ್ಧನ್, ಪ್ರದೀಪ್ ಪೂಜಾರಿ, ಟ್ಯಾಟೂ ಘೋಸ್ಟ್, ನವಾಜ್, ಬಾಲರಾಜವಾಡಿ, ಅಂಕಿತಾ, ಗಗನ, ಸಂತೋಷ್, ಅನಂತ್ ಕುಮಾರ್ ಹಾಗೂ ತಾರಕ್ ರಾಮ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಮತ್ತು ನಿರ್ದೇಶನದ ಜವಾಬ್ದಾರಿಯನ್ನು ಅಗಸ್ತ್ಯ ನಿರ್ವಹಿಸಿದ್ದಾರೆ. ರಾಧಾ ನಿರ್ಮಾಪಕರಾಗಿದ್ದು, ಜಗದೀಶ್ ಗೌಡ ಛಾಯಾಗ್ರಹಣ ಹಾಗೂ ಸಂಕಲನದ ಹೊಣೆ ಹೊತ್ತಿದ್ದಾರೆ. ರಿಯೋ ಆಂಟೋನಿ ಸಂಗೀತ ಸಂಯೋಜಿಸಿದ್ದಾರೆ. ಸೈಕ್ ಸೂರಿ ಮತ್ತು ಅಗಸ್ತ್ಯ ಸಾಹಸ ನಿರ್ದೇಶನ ಮಾಡಿದ್ದಾರೆ. ಕಿನ್ನಾಳ್ ರಾಜ್, ಪ್ರಮೋದ್ ಮರಾವಂತೆ ಹಾಗೂ ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯ ರಚಿಸಿದ್ದಾರೆ. ವಿಜಯಲಕ್ಷ್ಮಿ ಮೆಟ್ಟಿನಹೊಳೆ, ರಿಯೋ ಆಂಟೋನಿ ಮತ್ತು…
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ: ಆಯ್ಕೆ ಪ್ರಕ್ರಿಯೆ ತಡೆಹಿಡಿದ ಕಾಂಗ್ರೆಸ್ ಹೈಕಮಾಂಡ್!
ತಿರುವನಂತಪುರ: ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಳ್ಳದೆ ಪ್ರಕ್ರಿಯೆಯನ್ನು ತಡೆಹಿಡಿದಿದೆ. ಅಧ್ಯಕ್ಷ ಸ್ಥಾನಕ್ಕಾಗಿ ಪಕ್ಷದ ಪ್ರಮುಖ ನಾಯಕರ ನಡುವೆ ತೀವ್ರ ಪೈಪೋಟಿ ಹಾಗೂ ಲಾಬಿ ನಡೆಯುತ್ತಿರುವುದು ಈ ವಿಳಂಬಕ್ಕೆ ಕಾರಣ ಎನ್ನಲಾಗಿದೆ. ಹಾಲಿ ಅಧ್ಯಕ್ಷ ಸನ್ನಿ ಜೋಸೆಫ್ ಅವರನ್ನು ಸಾಂಸ್ಥಿಕ ಚಟುವಟಿಕೆಗಳಲ್ಲಿ ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಹೈಕಮಾಂಡ್ ಸೂಚಿಸಿದೆ ಎಂದು ತಿಳಿದುಬಂದಿದೆ. ಬುಧವಾರ ಸಂಜೆ ಅವರು ಪಕ್ಷದ ಕಚೇರಿ ‘ಇಂದಿರಾ ಭವನ’ದಲ್ಲಿ ಕಾಣಿಸಿಕೊಂಡಿರುವುದು, ಸದ್ಯಕ್ಕೆ ಅವರೇ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ. ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಎರಡೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರಿದಿದ್ದರು. ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಕೂಡ ಮುಖ್ಯಮಂತ್ರಿಯಾದ ಬಳಿಕ ಕೆಲವು ತಿಂಗಳುಗಳ ಕಾಲ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು ಎಂದು…
ಡಿಸೆಂಬರ್ 18ಕ್ಕೆ ಅಲ್ಲರಿ ನರೇಶ್ ಅಭಿನಯದ ‘ಆಲ್ಕೋಹಾಲ್’ ತೆರೆಗೆ
ಹೈದರಾಬಾದ್: ಟಾಲಿವುಡ್ ನಟ ಅಲ್ಲರಿ ನರೇಶ್ ಅಭಿನಯದ ‘ಆಲ್ಕೋಹಾಲ್’ ಸಿನಿಮಾ ಡಿಸೆಂಬರ್ 18, 2026ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಚಿತ್ರ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಆಕ್ಷನ್ ಕಾಮಿಡಿ ಕಥಾಹಂದರ ಹೊಂದಿರುವ ಚಿತ್ರದಲ್ಲಿ ನರೇಶ್ ಮದ್ಯಪಾನ ಮಾಡದ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮದ್ಯಪಾನದಿಂದ ವ್ಯಕ್ತಿ ತನ್ನ ನಿಯಂತ್ರಣ ಕಳೆದುಕೊಳ್ಳುವ ವಿಚಾರವನ್ನು ವಿಭಿನ್ನವಾಗಿ ನಿರೂಪಿಸಲಾಗಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಟೀಸರ್‌ನಲ್ಲಿ ನರೇಶ್ ಮತ್ತು ನಟ ಸತ್ಯಾ ನಡುವಿನ ಹಾಸ್ಯಭರಿತ ಸಂಭಾಷಣೆ ಗಮನ ಸೆಳೆದಿತ್ತು. ಮೆಹರ್ ತೇಜ್ ನಿರ್ದೇಶನದ ಚಿತ್ರದಲ್ಲಿ ರುಹಾನಿ ಶರ್ಮಾ, ನಿಹಾರಿಕಾ ಎನ್‌ಎಂ, ಸತ್ಯಾ, ಗಿರೀಶ್ ಕುಲಕರ್ಣಿ, ಹರ್ಷವರ್ಧನ್, ಚೈತನ್ಯ ಕೃಷ್ಣ ಹಾಗೂ ರವೀಂದ್ರ ವಿಜಯ್ ನಟಿಸಿದ್ದಾರೆ. ತಮಿಳಿನ ಸಂಗೀತ ನಿರ್ದೇಶಕ ಘಿಬ್ರಾನ್ ಸಂಗೀತ ಸಂಯೋಜಿಸಿದ್ದು, ಚೈತನ್ ಭಾರದ್ವಾಜ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ಜಿಜು ಸನ್ನಿ ಛಾಯಾಗ್ರಹಣ ಮತ್ತು ನಿರಂಜನ್ ದೇವರಾಮನೆ ಸಂಕಲನ ನಿರ್ವಹಿಸಿದ್ದಾರೆ. ಸೂರ್ಯದೇವರ…
‘ಕಾಲಿ ಖೇತಿ’; ಗ್ರಾಮೀಣ ಹಾರರ್ ಕಥೆಯಲ್ಲಿ ಜಾಕಿ ಶ್ರಾಫ್, ಶರದ್ ಕೆಲ್ಕರ್
ಮುಂಬೈ: ಬಹುನಿರೀಕ್ಷಿತ ಸೈಕಲಾಜಿಕಲ್ ಹಾರರ್ ಸಿನಿಮಾ ‘ಕಾಲಿ ಖೇತಿ’ಯ ಟ್ರೇಲರ್ ಬಿಡುಗಡೆಯಾಗಿದೆ. ಜಾಕಿ ಶ್ರಾಫ್ ಮತ್ತು ಶರದ್ ಕೆಲ್ಕರ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಗ್ರಾಮೀಣ ಹಿನ್ನೆಲೆಯ ವಿಭಿನ್ನ ಭಯಾನಕ ಕಥೆಯೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಚಿತ್ರದ ಟ್ರೇಲರ್‌ನಲ್ಲಿ ಕೃಷಿಭೂಮಿ, ಗ್ರಾಮೀಣ ಜನಪದ ನಂಬಿಕೆಗಳು ಹಾಗೂ ಅಲೌಕಿಕ ಶಕ್ತಿಗಳ ಸುತ್ತ ಹೆಣೆದ ನಿಗೂಢ ಕಥೆಯನ್ನು ಪರಿಚಯಿಸಲಾಗಿದೆ. ಜನರ ಬದುಕಿಗೆ ಆಧಾರವಾಗಿರುವ ಭೂಮಿಯೇ ಭಯಾನಕ ರಹಸ್ಯಗಳ ಕೇಂದ್ರವಾಗಿರುವುದು ಚಿತ್ರದ ಕುತೂಹಲ ಹೆಚ್ಚಿಸಿದೆ. ಹ್ಯಾರಿಸ್ ಇಮ್ತಿಯಾಜ್ ಖಾನ್ ಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರವನ್ನು ಸನಾ ಖಾನ್ ನಿರ್ಮಿಸಿದ್ದಾರೆ. ನೇಹಾ ಸರ್ಗಮ್, ವೀರೇಂದ್ರ ಸಕ್ಸೇನಾ ಮತ್ತು ಶಾಜಿ ಚೌಧರಿ ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಬ್ಲ್ಯಾಕ್ ಕ್ಯಾನ್ವಾಸ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣಗೊಂಡಿದೆ. ನವೆಂಬರ್ 20ರಂದು ಚಿತ್ರಮಂದಿರಗಳಲ್ಲಿ ‘ಕಾಲಿ ಖೇತಿ’ ಬಿಡುಗಡೆಯಾಗಲಿದೆ.
ಕಾರು ಅಪಘಾತದ ನಂತರ ಶೇಖರ್ ಮಾಸ್ಟರ್ ಆರೋಗ್ಯ ಸ್ಥಿರ; ‘ಕಾಕಾ’ ಚಿತ್ರೀಕರಣದಲ್ಲಿ ಮತ್ತೆ ಭಾಗಿ
ಹೈದರಾಬಾದ್: ಹೈದರಾಬಾದ್‌ನ ಶಂಶಾಬಾದ್ ಬಳಿ ಸಂಭವಿಸಿದ ಕಾರು ಅಪಘಾತದ ನಂತರ ನೃತ್ಯ ನಿರ್ದೇಶಕ (ಕೊರಿಯೋಗ್ರಾಫರ್) ಶೇಖರ್ ಮಾಸ್ಟರ್ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಚಿರಂಜೀವಿ ನಟನೆಯ ‘ಕಾಕಾ’ ಚಿತ್ರೀಕರಣ ಪ್ರಕ್ರಿಯೆಯಲ್ಲಿ ಮತ್ತೆ ತೊಡಗಿದ್ದಾರೆ ಎಂದು ನೃತ್ಯ ನಿರ್ದೇಶಕ ಜಾನಿ ಮಾಸ್ಟರ್ ತಿಳಿಸಿದ್ದಾರೆ. ಶೇಖರ್ ಮಾಸ್ಟರ್ ಚಿತ್ರೀಕರಣ ಮುಗಿಸಿ ಹಿಂದಿರುಗುತ್ತಿದ್ದಾಗ, ಹಣ್ಣುಗಳನ್ನು ಸಾಗಿಸುತ್ತಿದ್ದ ಟ್ರಕ್ ಒಂದರ ಹಿಂಬದಿಯಿಂದ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ವರದಿಯಾಗಿದೆ. ಶೇಖರ್ ಅವರೊಂದಿಗೆ ಮಾತನಾಡಿದ ಜಾನಿ ಮಾಸ್ಟರ್, ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಬಾಬಿ ಕೊಲ್ಲಿ ನಿರ್ದೇಶನದ ‘ಕಾಕಾ’ ಚಿತ್ರದಲ್ಲಿ ಚಿರಂಜೀವಿ ಅವರು ‘ಕದಿರಿ ಕಾಳಿದಾಸ್’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಕ್ಷನ್ ಮನರಂಜನಾತ್ಮಕವಾಗಿರುವ ಈ ಚಿತ್ರದಲ್ಲಿ ಅನುರಾಗ್ ಕಶ್ಯಪ್, ಅನಸ್ವರ ರಾಜನ್ ಮತ್ತು ನಿವೇತಾ ಪೆತುರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ತೀವ್ರವಾದ ಆಕ್ಷನ್…
