ಮುಂಬೈ: ಭಾರತೀಯ ಚಿತ್ರರಂಗದಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ನಿತೀಶ್ ತಿವಾರಿ ನಿರ್ದೇಶನದ ಮಹತ್ವಾಕಾಂಕ್ಷೆಯ ಸಿನಿಮಾ ‘ರಾಮಾಯಣ’ದ ಎರಡು ಟ್ರೈಲರ್ಗಳು ಬಿಡುಗಡೆಯಾಗಿವೆ. ಭಾರತೀಯ ಹಾಗೂ ಅಂತರರಾಷ್ಟ್ರೀಯ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಪ್ರತ್ಯೇಕ ಟ್ರೈಲರ್ಗಳನ್ನು ಬಿಡುಗಡೆ ಮಾಡಲಾಗಿದೆ. ಚಿತ್ರದ ಟ್ರೈಲರ್ನಲ್ಲಿ ಅದ್ಧೂರಿ ದೃಶ್ಯ ವೈಭವ, ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸಾಹಸ ದೃಶ್ಯಗಳು ಗಮನ ಸೆಳೆಯುತ್ತವೆ. ಆಕ್ಷನ್ ಜತೆಗೆ ಭಕ್ತಿ, ಭಾವನೆ ಹಾಗೂ ಪೌರಾಣಿಕ ಕಥನದ ಸಮ್ಮಿಲನ ಚಿತ್ರದಲ್ಲಿರಲಿದೆ ಎಂಬ ನಿರೀಕ್ಷೆ ಮೂಡಿಸಿದೆ. ರಾಮನ ಪಾತ್ರದಲ್ಲಿ ರಣ್ಬೀರ್ ಕಪೂರ್ ಗಮನ ಸೆಳೆದರೆ, ಯಶ್ ಅವರ ಪಾತ್ರದ ಝಲಕ್ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಸಾಯಿ ಪಲ್ಲವಿ ಸೇರಿದಂತೆ ಪ್ರಮುಖ ಕಲಾವಿದರ ಪಾತ್ರಗಳ ಪರಿಚಯವೂ ಟ್ರೈಲರ್ನಲ್ಲಿದೆ. ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಹೊಸ ದೃಶ್ಯ ವೈಭವ ಸೃಷ್ಟಿಸುವ ನಿರೀಕ್ಷೆ ಹೊಂದಿದೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ರಣ್ಬೀರ್ ಕಪೂರ್, ಯಶ್, ಸಾಯಿ ಪಲ್ಲವಿ,…
Day: October 16, 2026
ಶ್ರೀರಂಗಪಟ್ಟಣ ದಸರಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ರವಿಚಂದ್ರನ್ ಚಾಲನೆ; ಅಂಬಿ, ವಿಷ್ಣು ನೆನೆದು ಭಾವುಕರಾದ ಸಚಿವ
ಶ್ರೀರಂಗಪಟ್ಟಣ: 1610ರಲ್ಲಿ ಆರಂಭವಾದ ಶ್ರೀರಂಗಪಟ್ಟಣದ ದಸರಾ ಬಳಿಕ ಮೈಸೂರಿಗೂ ವಿಸ್ತರಿಸಿತು. ಈ ಬಾರಿ ಹಿರಿಯ ನಟ ಹಾಗೂ ನಿರ್ದೇಶಕ ವಿ. ರವಿಚಂದ್ರನ್ ಅವರು ದಸರಾ ಉದ್ಘಾಟಿಸಿರುವುದು ವಿಶೇಷ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೇರುನಟ ಡಾ. ರಾಜ್ಕುಮಾರ್ ಅವರನ್ನು ದೂರದಿಂದಲೇ ಕೈಮುಗಿದು ನೋಡುತ್ತಿದ್ದೆವು. ನಟರಾದ ಅಂಬರೀಶ್, ವಿಷ್ಣುವರ್ಧನ್ ಮತ್ತು ರವಿಚಂದ್ರನ್ ಅವರು ನನಗೆ ಕುಟುಂಬದ ಸ್ನೇಹಿತರಿದ್ದಂತೆ. ಆದರೆ, ಅಂಬರೀಶ್ ಮತ್ತು ವಿಷ್ಣುವರ್ಧನ್ ಅವರು ನಮ್ಮನ್ನು ಅಗಲಿರುವುದು ತೀವ್ರ ನೋವು ತಂದಿದೆ ಎಂದು ಭಾವುಕರಾಗಿ ಸ್ಮರಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸಚಿವರು ಅಭಿನಂದಿಸಿದರು. ಬಳಿಕ ವೇದಿಕೆಯ ಮುಂಭಾಗದಲ್ಲಿ ಕುಳಿತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ದೊರೆಯುತ್ತಿದ್ದಂತೆ ಮಳೆ ಸುರಿಯಲಾರಂಭಿಸಿತು. ಒಂದೆಡೆ ಸಂಗೀತ ಕಾರ್ಯಕ್ರಮಗಳ ರಸದೌತಣ, ಮತ್ತೊಂದೆಡೆ ಮಳೆಯ ಸದ್ದು ವಾತಾವರಣಕ್ಕೆ…
ಬರಗಾಲದಲ್ಲೂ ಸಂಪ್ರದಾಯ ಬಿಡಲು ಸಾಧ್ಯವಿಲ್ಲ: ‘ಕಾವೇರಿ ಆರತಿ ಆಡಂಬರವಲ್ಲ, ನಮ್ಮ ಪರಂಪರೆಯ ಪ್ರತೀಕ’ ಎಂದ ಸಚಿವ ಚಲುವರಾಯಸ್ವಾಮಿ
ಶ್ರೀರಂಗಪಟ್ಟಣ: ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದ್ದರೂ ನಾಡಿನ ಸಂಪ್ರದಾಯ ಮತ್ತು ಆಚರಣೆಗಳನ್ನು ಕೈಬಿಡಲು ಸಾಧ್ಯವಿಲ್ಲ. ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ದಸರಾ ಮಹೋತ್ಸವವನ್ನು ನಿರಂತರವಾಗಿ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು. ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿರುವ ಶ್ರೀರಂಗವೇದಿಕೆಯಲ್ಲಿ ಬುಧವಾರ ನಡೆದ 416ನೇ ಶ್ರೀರಂಗಪಟ್ಟಣ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯದ ಪ್ರತಿಯೊಬ್ಬ ರೈತನ ಮನೆಯಲ್ಲೂ ಧಾನ್ಯಲಕ್ಷ್ಮಿ ತುಂಬಿರಲಿ ಎಂಬ ಆಶಯದೊಂದಿಗೆ ರಾಗಿ ತೂರುವ ಮೂಲಕ ಸಚಿವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾವೇರಿ ಪೂಜೆಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ, ನಾವು ಕಾವೇರಿ ತಾಯಿಯ ಮಕ್ಕಳು. ಆಕೆಯ ಕೃಪೆಯಿಂದಲೇ ನಮ್ಮ ಬದುಕು ಹಸನಾಗಲಿದೆ. ಹೀಗಾಗಿ ಕಾವೇರಿಗೆ ಆರತಿ ಬೆಳಗಿ ಪೂಜೆ ಸಲ್ಲಿಸುವುದು ನಮ್ಮ ಜವಾಬ್ದಾರಿ. ಕಾವೇರಿ ಆರತಿ ಮತ್ತು ಶ್ರೀರಂಗಪಟ್ಟಣ…
ಎಸ್ಸಿ ವಿದ್ಯಾರ್ಥಿವೇತನ ಪಾವತಿಗೆ 89 ತಿಂಗಳ ವಿಳಂಬ: ಕೆ.ಸಿ. ವೇಣುಗೋಪಾಲ್
ನವದೆಹಲಿ: ಪರಿಶಿಷ್ಟ ಜಾತಿ (ಎಸ್ಸಿ) ವಿದ್ಯಾರ್ಥಿಗಳಿಗೆ ನೀಡುವ ಪೂರ್ವ-ಮೆಟ್ರಿಕ್ ಮತ್ತು ನಂತರದ ವಿದ್ಯಾರ್ಥಿವೇತನಗಳ ಪಾವತಿಯಲ್ಲಿ ಭಾರೀ ವಿಳಂಬವಾಗಿರುವುದನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಪರಿಶೀಲನೆ ಬಹಿರಂಗಪಡಿಸಿದೆ. ಪೂರ್ವ-ಮೆಟ್ರಿಕ್ ವಿದ್ಯಾರ್ಥಿವೇತನದ ಬಾಕಿ ಪಾವತಿಗೆ 48 ತಿಂಗಳವರೆಗೆ ಹಾಗೂ ನಂತರದ ವಿದ್ಯಾರ್ಥಿವೇತನಕ್ಕೆ 89 ತಿಂಗಳವರೆಗೆ ವಿಳಂಬವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು, ದೀರ್ಘಕಾಲದಿಂದ ಕಾಯುತ್ತಿದ್ದರೂ ಕೆಲವು ಅರ್ಹ ವಿದ್ಯಾರ್ಥಿಗಳಿಗೆ ಯಾವುದೇ ವಿದ್ಯಾರ್ಥಿವೇತನ ದೊರೆತಿಲ್ಲ ಎಂದು ಆರೋಪಿಸಿದ್ದಾರೆ. ವಿದ್ಯಾರ್ಥಿಗಳ ಜಾತಿ ಮತ್ತು ಆದಾಯದ ಅರ್ಹತೆಯನ್ನು ಪರಿಶೀಲಿಸುವಲ್ಲಿಯೂ ಲೋಪಗಳಿರುವುದನ್ನು ಲೆಕ್ಕಪರಿಶೋಧನೆ ಗುರುತಿಸಿದೆ. ಅನರ್ಹ ಎಸ್ಸಿ ಅಲ್ಲದ ಫಲಾನುಭವಿಗಳಿಗೆ ವಿದ್ಯಾರ್ಥಿವೇತನ ಪಾವತಿಯಾಗಿದ್ದರೆ, ಅರ್ಹ ವಿದ್ಯಾರ್ಥಿಗಳು ನೆರವಿಗಾಗಿ ಕಾಯುವಂತಾಗಿದೆ ಎಂದು ವೇಣುಗೋಪಾಲ್ ಹೇಳಿದ್ದಾರೆ. ವಿದ್ಯಾರ್ಥಿವೇತನ ಯೋಜನೆಗಳ ಅನುಷ್ಠಾನದಲ್ಲಿ ಕಳಪೆ ಕಾರ್ಯಕ್ಷಮತೆ ತೋರಿದ ಆರು ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಮೌಖಿಕ ಸಾಕ್ಷ್ಯ ನೀಡುವಂತೆ…
