ಜಯಪುರ : ಕಾರಜೋಳ ಏತನೀರಾವರಿ ವ್ಯಾಪ್ತಿಯ ಡಿಸ್ಟ್ರಿಬ್ಯುಟರಿಸ್ ಜಾಲದ ಕಾಮಗಾರಿಗಳಿಗಾಗಿ 3.80 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕಾಮಗಾರಿ ಆರಂಭಿಸುವಂತೆ ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ನಿರ್ದೇಶನ ನೀಡಿದ್ದಾರೆ.
ಕಾರಜೋಳ ಗ್ರಾಮದಲ್ಲಿ ಬಬಲೇಶ್ವರ, ಕಾಖಂಡಕಿ, ಕಾರಜೋಳ ರಾಷ್ಟ್ರೀಯ ಹೆದ್ದಾರಿ ಜಿಲ್ಲಾ ಮುಖ್ಯ ರಸ್ತೆ 15 ಕಿ.ಮೀ ರಿಂದ 21 ಕಿ.ಮೀ ವರೆಗಿನ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ, 45 ಲಕ್ಷ ರೂ. ವೆಚ್ಚದ ಕೃಷಿ ಪತ್ತಿನ ಸಹಕಾರಿ ಸಂಘದ ಕಟ್ಟಡವನ್ನು ಗೋವಿಂದ ಕಾರಜೋಳಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಕಾರಜೋಳ ಗ್ರಾಮ ಅತ್ಯಂತ ಕಡೆಗಣಿಸಿದ ಗ್ರಾಮವಾಗಿತ್ತು. ಸದ್ಯಕ್ಕೆ ಇತ್ತೀಚೆಗೆ ಕೆಲವು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಈ ಭಾಗದ ರೈತರ ಅನುಕೂಲಕ್ಕಾಗಿ ಹೊಲಗಾಲುವೆಗಳಿಗೆ 7 ಕೋಟಿ ರೂ.ಗಳನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕಾರಜೋಳ ಗ್ರಾಮ ಕಡು ಬಡವರಿಂದ ಕೂಡಿದ ಗ್ರಾಮವಾಗಿದೆ. ಈ ಹಿಂದೆ ಈ ಭಾಗದಿಂದ ಮುಂಬೈ, ಕರಾಡ, ಸಾಂಗ್ಲಿ ಹಾಗೂ ಗೋವಾಗಳಿಗೆ ಜನರು ಗುಳೆ ಹೋಗುವಂತಹ ಪರಿಸ್ಥಿತಿಯಿತ್ತು. ನಂತರ ಈ ಗ್ರಾಮಕ್ಕೆ ತಾವು ವಿಶೇಷ ಕಾಳಜಿ ವಹಿಸಿ ಕಾಖಂಡಕಿ, ಕಾರಜೋಳ ರಸ್ತೆ, ವಿದ್ಯುತ್, ವಿಜಯಪುರದಿಂದ ಈ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ಇತ್ತೀಚೆಗೆ ಕಾರಜೋಳ ಏತ ನೀರಾವರಿ ಸೌಲಭ್ಯ ಕಲ್ಪಿಸಿದೆ. ಇಲ್ಲಿನ ಭೂಮಿ ಕಲ್ಲುಗಳಿಂದ ಕೂಡಿದ್ದು, ಭೂ ಸಮತಲಕ್ಕೆ ಕೇಂದ್ರ ಸರ್ಕಾರದ ಯೋಜನೆಯಡಿ ಸೌಲಭ್ಯ ಕಲ್ಪಿಸಲಾಗುತ್ತಿದ್ದು, ಸಕಾಲಕ್ಕೆ ಈ ಯೋಜನೆಯ ಲಾಭ ಜನರಿಗೆ ತಲುಪಿಸುವಂತೆ ಕೃಷಿ ಅಧಿಕಾರಿಗಳಿಗೆ ಅವರು ಸೂ