ಕೊರೋನಾ ನಿಯಂತ್ರಣ ಲಸಿಕೆ; ಬಯೋಟೆಕ್ ಪಾರ್ಕ್’ಗೆ ಪ್ರಧಾನಿ ಭೇಟಿ

ದೆಹಲಿ: ಜಗತ್ತಿನಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಾಣು ಹಾವಳಿಗೆ ಬ್ರೇಕ್ ಹಾಕುವ ಲಸಿಕೆ ಸಿದ್ಧವಾಗಿದೆ. ಈ ಸಂಜೀವಿನಿ ಸಿದ್ಧಪಡಿಸುವಲ್ಲಿ ತೊಡಗಿರುವ ಸಂಶೋಧಕರನ್ನು ಹುರಿದುಂಬಿಸುವ ಪ್ರಯತ್ನಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ.

ಕೊರೋನಾ ವೈರಸ್ ಲಸಿಕೆ ಅಭಿವೃದ್ಧಿಯ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಖುದ್ದು ಅವಲೋಕನ ನಡೆಸಲು ಮುಂದಾಗಿರುವ ಪ್ರಧಾನಿ ಮೋದಿ, ಇಂದು ಬೆಳಿಗ್ಗೆ ಅಹಮದಾಬಾದ್’ಗೆ ತೆರಳಿ, ಝೈಡಸ್ ಬಯೋಟೆಕ್ ಪಾರ್ಕ್’ಗೆ ಭೇಟಿ ನೀಡಿದರು. ಅಲ್ಲಿನ ವಿಜ್ಞಾನಿಗಳೊಂದಿಗೆ ಅವರು ಸಮಾಲೋಚನೆ ನಡೆಸಿ ಕೊರೋನಾಗೆ ಔಷಧಿಯಾಗಿರುವ ಲಸಿಕೆ ಬಗ್ಗೆ ಮಾಹಿತಿ ಪಡೆದರು.

ಲಸಿಕೆ ಅಭಿವೃದ್ಧಿ ಪಡಿಸುವ ಕಾರ್ಯದಲ್ಲಿರುವ ಪುಣೆಯ ಸೀರಂ ಇನ್’ಸ್ಟಿಟ್ಯೂಟ್ ಹಾಗೂ ಹೈದರಾಬಾದ್ ಸಮೀಪದ ಹಕೀಂಪೇಟ್’ನಲ್ಲಿನ ಭಾರತ್ ಬಯೋಟೆಕ್ ಘಟಕದ ಪ್ರಧಾನಿ ಭೇಟಿಯೂ ಕುತೂಹಲ ಕೆರಳಿಸಿದೆ.

Related posts