ಬೆಂಗಳೂರು: ವಿಧಾನಸಭಾ ಚುನಾವಣೆ ಇದೀಗ ಫಲಿತಾಂಶದ ಘಟ್ಟದಲ್ಲಿದೆ. ಎಲ್ಲಾ 224 ಕ್ಷೇತ್ರಗಳ ಮತಗಳ ಎಣಿಕೆ ನಡೆಯಲಿದ್ದು ಅದಕ್ಕಾಗಿ ಜಿಲ್ಲಾಡಳಿತಗಳು ಸಕಲ ಸಿದ್ದತೆ ಕೈಗೊಂಡಿವೆ. ಇದೇ ವೇಳೆ ಮತಗಳ ಎಣಿಕೆ ದಿನವಾದ ಶನಿವಾರ ಮುನ್ನೆಚ್ಚರಿಕ ಕ್ರಮವಾಗಿ ಬೆಂಗಳೂರಿನಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಮತ ಎಣಿಕೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮೇ 13ರಂದು ಬೆಂಗಳೂರು ನಗರದಾದ್ಯಂತ ಪೊಲೀಸ್ ಆಯುಕ್ತರು ನಿಷೇಧಾಜ್ಞೆ ಹೊರಡಿಸಿದ್ದಾರೆ. ಮದುವೆ, ಅಂತ್ಯ ಸಂಸ್ಕಾರದಂತಹಾ ಕಾರ್ಯಕ್ರಮಗಳ ಹೊರತಾಗಿ ಉಳಿದಂತೆ ನಿಷೇಧಾಜ್ಞೆ ಅನ್ವಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.