ಉತ್ತರಕಾಶಿ ದುರಂತ: ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರು ವೀಡಿಯೋ ಲಬ್ಯ

ದೆಹಲಿ: ಉತ್ತರಕಾಶಿಯಲ್ಲಿ ಸುರಂಗ ಕುಸಿದು ಕಾರ್ಮಿಕರು ಸುರಂಗದೊಳಗೆ ಸಿಲುಕಿರುವ ಘಟನೆ ಇಡೀ ದೇಶವನ್ನು ಆತಂಕಕ್ಕೀಡುಮಾಡಿದೆ. ಉತ್ತರಖಂಡ್ ರಾಜ್ಯದ ಉತ್ತರಕಾಶಿಯಲ್ಲಿರುವ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯ ಸಮರ ಸಜ್ಜಿನಿಂದ ಸಾಗಿದೆ. ಸುಮಾರು ಎಂಟು ದಿನಗಳ ಕಾಲ ಒಳಗೆ ಸಿಕ್ಕಿಬಿದ್ದ 41 ಕಾರ್ಮಿಕರಿಗೆ ಆಹಾರ ಒದಗಿಸುವ ಕಾರ್ಯವನ್ನು ಮಾಡಲಾಗಿದೆ. ಸಂದಿಗ್ಧ ಸ್ಥಿತಿಯಲ್ಲಿರುವ ಕಾರ್ಮಿಕರಿಗೆ ಪೈಪ್ ಮೂಲಕ ಆಹಾರ ರವಾನಿಸಲಾಗುತ್ತಿದೆ.

ಈ ನಡುವೆ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರು ದೃಶ್ಯಗಳು ಕಾರ್ಯಾಚರಣೆ ತಂಡಕ್ಕೆ ಲಭಿಸಿದೆ. ಈ ವೀಡಿಯೋ ಮಂಗಳವಾರ ಬೆಳಿಗ್ಗೆ ಬಿಡುಗಡೆಯಾಗಿದೆ.ರಕ್ಷಣಾ ಕಾರ್ಯಾಚರಣೆಯ ನಡುವೆ, ಸೋಮವಾರ 6 ಇಂಚು ಅಗಲದ ಪೈಪ್‌ವೊಂದನ್ನು ಸುರಂಗದೊಳಗೆ ಕಳುಹಿಸುವ ಪ್ರಯತ್ನ ಸಫಲವಾಗಿದೆ. ಈ ಪೈಪ್ ಕಾರ್ಮಿಕರಿದ್ದ ಸ್ಥಳವನ್ನು ತಲುಪಿದೆ. ಈ ಮೂಲಕ ಕ್ಯಾಮೆರಾದಿಂದ ಕಾರ್ಮಿಕರ ಚಲನವಲನದ ದೃಶ್ಯವನ್ನು ಸೆರೆಹಿಡಿಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

Related posts