ಜಾನಪದ ಲೋಕದ ಬೆಳ್ಳಿ ಹಬ್ಬದ ಲಾಂಛನ ಬಿಡುಗಡೆ

ಬೆಂಗಳೂರು: ಈ ತಿಂಗಳ ೧೬ರಿಂದ ಜಾನಪದ ಲೋಕದ ಬೆಳ್ಳಿ ಹಬ್ಬವನ್ನು ಏರ್ಪಡಿಸಲಾಗಿದೆ. ವಿಧಾನ ಸೌಧದಲ್ಲಿಂದು ಜಾನಪದ‌ ಲೋಕದ ಬೆಳ್ಳಿ ಹಬ್ಬದ ಲಾಂಛನ ಬಿಡುಗಡೆ ಮಾಡಲಾಯಿತು. ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸಿ.ಟಿ.ರವಿ ಈ ಲಾಂಛನ ಬಿಡುಗಡೆ ಮಾಡಿದರು.

ಕರ್ನಾಟಕ ಜಾನಪದ ಪರಿಷತ್ ನ ಈ ಮಹತ್ವಾಕಾಂಕ್ಷಿ ಹಬ್ಬಕ್ಕೆ 16ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ ಎಂದು  ಸಚಿವ ಸಿ.ಟಿ.ರವಿ ಇದೆ ವೇಳೆ ತಿಳಿಸಿದರು. ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ಫೆಬ್ರವರಿ 17 ಮತ್ತು 18ರಂದು ರಾಮನಗರ ಬಳಿಯ ಜನಪದ ಲೋಕದಲ್ಲಿ ಲೋಕೋತ್ಸವ ನಡೆಯಲಿದೆ ಎಂದು ಅವರು ವಿವರ ಒದಗಿಸಿದರು.

ಇದೆ ವೇಳೆ, ಪ್ರವಾಸೋದ್ಯ ಅಭಿವೃದ್ಧಿ ಕುರಿತ ಯೋಜನೆಗಳ ಬಗ್ಗೆ ವಿವರ ಒದಗಿಸಿದ ಸಚಿವ ಸಿ.ಟಿ.ರವಿ, ಅಲ್ಲದೆ ಸುಧಾಮೂರ್ತಿಯವರ ಅಧ್ಯಕ್ಷತೆಯ ಪ್ರವಾಸೋದ್ಯಮ ಟಾಸ್ಕ್ ಪೋರ್ಸ್ ನೀಡಿರುವ ವರದಿಯನ್ವಯ ಅನುದಾನ ಬಿಡುಗಡೆ ಮಾಡಲು ಮುಖ್ಯಮಂತ್ರಿ ಒಪ್ಪಿದ್ದಾರೆ‌ ಎಂದರು. ಕರ್ನಾಟಕ ದರ್ಶನ ಯೋಜನೆಯನ್ನು ಎಂಟನೆಯ ಅಥವಾ ಒಂಬತ್ತನೆಯ ವಿದ್ಯಾರ್ಥಿಗಳಿಗೂ ವಿಸ್ತರಿಸಲು ಮನವಿ ಮಾಡಿದ್ದೇವೆ ಎಂದೂ ಅವರು ತಿಳಿಸಿದರು.

Related posts