ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಸರಕು ಸಾಗಣೆಯ ಭಾರೀ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ನಗರದಲ್ಲಿ ಇಂತಹ ವಾಹನಗಳ ಸಂಚಾರಕ್ಕೆ ಸೀಮಿತ ಅವಧಿಯನ್ನು ಪೊಲೀಸರು ಗೊತ್ತುಮಾಡಿದ್ದಾರೆ.
“ಸಂಚಾರ ಸಲಹೆ “/”Traffic advisory ” pic.twitter.com/baYsCbHmxO
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) August 2, 2024
ವಾರದ ಎಲ್ಲ ದಿನಗಳಲ್ಲಿ ಬೆಳಗ್ಗೆ 7 ರಿಂದ 11 ಮತ್ತು ಸಂಜೆ 4 ರಿಂದ 10ರವರೆಗೆ ಭಾರಿ ಸರಕು ವಾಹನಗಳು ಬೆಂಗಳೂರು ನಗರದ ರಸ್ತೆಗಳಲ್ಲಿ ಸಂಚರಿಸುವಂತಿಲ್ಲ. ಎಲ್ಲಾ ಶನಿವಾರ ಬೆಳಗ್ಗೆ 10:30 ರಿಂದ ಮಧ್ಯಾಹ್ನ 2:30ರವರೆಗೆ ಹಾಗೂ ಸಂಜೆ 4:30 ರಿಂದ ರಾತ್ರಿ 9ಗಂಟೆಯವರೆಗೆ ನಿಷೇಧಿಸಿ ಮಾರ್ಪಾಡು ಮಾಡಲಾಗಿದೆ.
ಈ ಬಗ್ಗೆ ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಒದಗಿಸಿದ್ದಾರೆ.