ಹಿಮಾಚಲ ಭಾರೀ ಮಳೆ, ಪ್ರವಾಹ, ಹತ್ತಾರು ಮಂದಿ ನಾಪತ್ತೆ

ಕುಲ್ಲು: ಹಿಮಾಚಲ ಪ್ರದೇಶದಲ್ಲಿ ಮೇಘಸ್ಫೋಟ ಉಂಟಾಗಿದ್ದು, ಭಾರೀ ಸಾವು ನೋವು ಸಂಭವಿಸಿದೆ. ಭಾರೀ ಮಳೆ, ದಿಢೀರ್ ಪ್ರವಾಹದಿಂದಾಗಿ ಇಬ್ಬರು ಸಾವನ್ನಪ್ಪಿದ್ದು, 23 ಜನರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಎಂದು ಶಂಕಿಸಲಾಗಿದೆ.

ಸೈನ್ಜ್‌ನ ಜೀವಾ ನಲ್ಲಾ ಮತ್ತು ರೆಹ್ಲಾ ಬಿಹಾಲ್ ಹಾಗೂ ಗಡ್ಸಾ ಪ್ರದೇಶದ ಶಿಲಾಗಢದಲ್ಲಿ ಮೇಘಸ್ಫೋಟವಾಗಿದೆ. ಸ್ಥಳೀಯ ಅಧಿಕಾರಿಗಳು ಹತ್ತಿರದ ಪ್ರದೇಶಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಇಂದಿರಾ ಪ್ರಿಯದರ್ಶಿನಿ ಜಲವಿದ್ಯುತ್ ಯೋಜನಾ ಸ್ಥಳದ ಬಳಿಯ ಕಾರ್ಮಿಕ ಕಾಲೋನಿಯಲ್ಲಿ ನೆಲೆಸಿದ್ದ ಸುಮಾರು 15ಕ್ಕೂ ಹೆಚ್ಚು ಕಾರ್ಮಿಕರು ಪ್ರವಾಹಕ್ಕೆ ಕೊಚ್ಚಿ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಮಧ್ಯೆ, ಕುಲ್ಲು ಜಿಲ್ಲೆಯಲ್ಲಿ ದಿಢೀರ್ ಪ್ರವಾಹಕ್ಕೆ ಮನೆಗಳು, ಕಟ್ಟಡಗಳು, ರಸ್ತೆಗಳು ಮತ್ತು ಸೇತುವೆಗಳಿಗೆ ವ್ಯಾಪಕ ಹಾನಿಯುಂಟಾಗಿದೆ. ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯಲ್ಲಿ ಭೂಕುಸಿತ ಘಟನೆಗಳೂ ಸಂಭವಿಸಿವೆ.

Related posts