BlastFromMay28; ಕೌಟುಂಬಿಕ ಮನರಂಜನಾ ಚಿತ್ರ ‘ಬ್ಲಾಸ್ಟ್’ ಬಗ್ಗೆ ಚಿತ್ತ

ನಿರ್ದೇಶಕ ಸುಭಾಷ್ ಕೆ. ರಾಜ್ ಅವರ ಕೌಟುಂಬಿಕ ಮನರಂಜನಾ ಚಿತ್ರ Blast ಇದೇ ಮೇ 28 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಘೋಷಿಸಿದ್ದಾರೆ.

AGS Entertainment ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಿಡುಗಡೆ ದಿನಾಂಕ ಪ್ರಕಟಿಸಿದ್ದು, ಈಗಾಗಲೇ ಚಿತ್ರಕ್ಕೆ ಯು/ಎ ಪ್ರಮಾಣಪತ್ರ ಲಭಿಸಿದೆ. ಫೆಬ್ರವರಿಯಲ್ಲೇ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿತ್ತು.

‘ಲವ್ ಟುಡೇ’ ಮತ್ತು ‘ಡ್ರ್ಯಾಗನ್’ ಸಿನಿಮಾಗಳ ಯಶಸ್ಸಿನ ಬಳಿಕ ಎಜಿಎಸ್ ನಿರ್ಮಿಸುತ್ತಿರುವ ಈ ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದೆ. ‘ಕೆಜಿಎಫ್’ ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರ್ ಈ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಸಂಗೀತ ನಿರ್ದೇಶಕರಾಗಿ ಪಾದಾರ್ಪಣೆ ಮಾಡುತ್ತಿರುವುದು ವಿಶೇಷ.

ಸುಭಾಷ್ ಕೆ. ರಾಜ್ ಈ ಹಿಂದೆ ನಿರ್ದೇಶಕ-ನಟ ಪ್ರದೀಪ್ ರಂಗನಾಥನ್ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅರ್ಚನಾ ಕಲ್ಪತಿ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ, ಐಶ್ವರ್ಯಾ ಕಲ್ಪತಿ ಅಸೋಸಿಯೇಟ್ ಕ್ರಿಯೇಟಿವ್ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

ಕಲ್ಪತಿ ಎಸ್. ಅಘೋರಂ, ಕಲ್ಪತಿ ಎಸ್. ಗಣೇಶ್ ಮತ್ತು ಕಲ್ಪತಿ ಎಸ್. ಸುರೇಶ್ ನಿರ್ಮಾಣದ ಈ ಚಿತ್ರದಲ್ಲಿ ವಿವೇಕ್ ಪ್ರಸನ್ನ, ಜಾನ್ ಕೊಕ್ಕೆನ್, ಅರ್ಜುನ್ ಚಿದಂಬರಂ, ಪವನ್, ದಿಲೀಪನ್, ವಿನೋದ್ ಸಾಗರ್ ಮತ್ತು ಬಾಲ ಹಸನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Related posts