ಪೊಳಲಿ ಸಹಕಾರ ಸಂಘದ ಸಾಲ ವಿವಾದ ಬಗ್ಗೆ ಉನ್ನತ ಮಟ್ಟದ ತನಿಖೆ

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಪೊಳಲಿ ಸೇವಾ ಸಹಕಾರ ಸಂಘದಲ್ಲಿನ ಯಾರದ್ದೋ ಸಾಲಕ್ಕೆ ಇನ್ಯಾರದ್ದೂ ಆಸ್ತಿ ಹರಾಜು ಮಾಡಲು ಸಹಕಾರ ಇಲಾಖೆ ಆದೇಶಿಸಿರುವ ಪ್ರಕರಣ ಇದೀಗ ಭಾರೀ ವಿವಾದವನ್ನು ಹುಟ್ಟುಹಾಕಿದೆ. ಈ ಪ್ರಕರಣ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸರ್ಕಾರ ಪ್ರಕ್ರಿಯೆ ಆರಂಭಿಸಿದೆ.

ಪೊಳಲಿ ಸಹಕಾರ ಸಂಘದಿಂದ ಸುರೇಂದ್ರ ಎಂಬಾತ ಸಾಲಪಡೆದು ಮರುಪಾವತಿಸಿಲ್ಲ. ಈ ಹಿನ್ನೆಲೆಯಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಸುರೇಂದ್ರನ ತಂದೆಯ ಹೆಸರಿನಲ್ಲಿದ್ದ, ಈಗ ಮಕ್ಕಳ ಮಾಲೀಕತ್ವದಲ್ಲಿರುವ ಆಸ್ತಿಯನ್ನು ಹರಾಜು ಮಾಡಲು ಸಹಕಾರ ಇಲಾಖೆ ಆದೇಶಿಸಿದೆ. ಈ ಪ್ರಕ್ರಿಯೆ ಕಾನೂನಿಗೆ ವಿರುದ್ಧವಾಗಿದೆ ಎಂದು ಸಿಟಿಜನ್ ರೈಟ್ಸ್ ಫೌಂಡೇಷನ್ (CRF) ರಾಜ್ಯ ಸರ್ಕಾರಕ್ಕೆ ವರದಿ ಮಾಡಿದೆ.

ಈ ಬಗ್ಗೆ ತನ್ನದೇ ಆದ ರೀತಿಯಲ್ಲಿ ತನಿಖೆ ಕೈಗೊಂಡು ಸರ್ಕಾರಕ್ಕೆ ನೀಡಿರುವ CRF ಈ ಪ್ರಕರಣ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ.

ಈ ನಡುವೆ CRF ಮನವಿಯನ್ನಾಧರಿಸಿ ಮುಖ್ಯಮಂತ್ರಿ ಕಾರ್ಯಾಲಯ ಹಾಗೂ ಮುಖ್ಯ ಕಾರ್ಯದರ್ಶಿಗಳು ಸಹಕಾರ ಇಲಾಖೆಗೆ ನಿರ್ದೇಶನ ನೀಡಿದ್ದಾರೆ.

ಇನ್ನೊಂದೆಡೆ, ಸಹಕಾರ ಸಂಘದ ಸಾಲ ವಿವಾದ ಬಗ್ಗೆ ಹಾಗೂ ಸಾಲ ಪಡೆದ ಹಣ ಯಾರಿಗೆ ಸಂದಾಯವಾಗಿದೆ, ಯಾರೆಲ್ಲಾ ಈ ಸಾರ್ವಜನಿಕ ಹಣವನ್ನು ಹಂಚಿಕೊಂಡಿದ್ದಾರೆ ಎಂಬ ಬಗ್ಗೆ ಸಿಐಡಿ ತನಿಖೆ ಕುರಿತು ಪ್ರಕ್ರಿಯೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

Related posts