ಮಾಸ್ಕೋ: ಲೆನಿನ್ಗ್ರಾಡ್ ಪ್ರದೇಶದ ಮೇಲೆ ಉಕ್ರೇನ್ ನಡೆಸಿದ ಡ್ರೋನ್ ದಾಳಿಯಲ್ಲಿ 144 ಡ್ರೋನ್ಗಳನ್ನು ರಷ್ಯಾದ ವಾಯು ರಕ್ಷಣಾ ಪಡೆಗಳು ಹೊಡೆದುರುಳಿಸಿವೆ ಎಂದು ಗವರ್ನರ್ ಅಲೆಕ್ಸಾಂಡರ್ ಡ್ರೋಜ್ಡೆಂಕೊ ತಿಳಿಸಿದ್ದಾರೆ.
ದಾಳಿಯಿಂದ ದೊಡ್ಡ ಮಟ್ಟದ ಹಾನಿ ಸಂಭವಿಸಿಲ್ಲ. ಆದರೆ ಹಲವು ಪ್ರದೇಶಗಳಲ್ಲಿ ಡ್ರೋನ್ ಅವಶೇಷಗಳು ಬಿದ್ದ ಪರಿಣಾಮ ಕೆಲವು ಕಟ್ಟಡಗಳಿಗೆ ಸಣ್ಣ ಹಾನಿಯಾಗಿದೆ. ಲೊಮೊನೊಸೊವ್ಸ್ಕಿ ಜಿಲ್ಲೆಯ ರಕ್ಷಣಾ ಸಚಿವಾಲಯದ ಸೌಲಭ್ಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಾಲ್ವರಿಗೆ ಗಾಯಗಳಾಗಿವೆ. ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇತರರಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ.
ಭದ್ರತಾ ಕಾರಣಕ್ಕಾಗಿ 600ಕ್ಕೂ ಹೆಚ್ಚು ನಿವಾಸಿಗಳನ್ನು ಸ್ಥಳಾಂತರಿಸಲಾಗಿತ್ತು. ಬಳಿಕ ಬೆಂಕಿಯನ್ನು ನಂದಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದೆ.
ಇದಕ್ಕೂ ಮುನ್ನ ಸೇಂಟ್ ಪೀಟರ್ಸ್ಬರ್ಗ್ ಮೇಲಿನ ಡ್ರೋನ್ ದಾಳಿಯಲ್ಲಿ ಮೂವರು ಗಾಯಗೊಂಡಿದ್ದರು. ಅವರಿಗೆ ಸಣ್ಣ ಗಾಯಗಳಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ರಷ್ಯಾದ ರಕ್ಷಣಾ ಸಚಿವಾಲಯದ ಪ್ರಕಾರ, ರಾತ್ರೋರಾತ್ರಿ ವಿವಿಧ ಪ್ರದೇಶಗಳಲ್ಲಿ ಒಟ್ಟು 376 ಉಕ್ರೇನಿಯನ್ ಡ್ರೋನ್ಗಳನ್ನು ವಾಯು ರಕ್ಷಣಾ ವ್ಯವಸ್ಥೆಗಳು ತಡೆದು ನಾಶಪಡಿಸಿವೆ.
ಇದೇ ವೇಳೆ, ಕ್ರಾಸ್ನೋಡರ್ ಪ್ರದೇಶದ ಉಸ್ಟ್-ಲ್ಯಾಬಿನ್ಸ್ಕ್ ತೈಲ ಡಿಪೋ ಮೇಲಿನ ಡ್ರೋನ್ ದಾಳಿಯಿಂದ ಬೆಂಕಿ ಕಾಣಿಸಿಕೊಂಡಿದ್ದು, 60 ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಯಾವುದೇ ಸಾವುನೋವು ವರದಿಯಾಗಿಲ್ಲ.
President @ZelenskyyUa: It is time to end this war. But Russia’s ruler wants to keep fighting. That is why Ukrainian sanctions against this aggression are working. Last night, our drones covered a distance of about 1,000 kilometers to the St. Petersburg region – to the enemy… pic.twitter.com/28dnjuIl6Q
— Defense of Ukraine (@DefenceU) June 6, 2026

