ಬೆಂಗಳೂರು: ದೇಶದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಲಾಕ್’ಡೌನ್ ಜಾರಿಯಲ್ಲಿದ್ದರೂ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿಲ್ಲ. ಈ ಬೆಳವಣಿಗೆ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.
ಪ್ರಮುಖ ಸುದ್ದಿಗಳು:
- ಕೊರೋನಾ ವಿಚಾರದಲ್ಲೂ ಮೋದಿ ‘ರಣವಿಕ್ರಮ’: ಮತ್ತೊಂದು ಖ್ಯಾತಿಯ ಕಿರೀಟ
- ಪಾದರಾಯನಪುರ ಕೈದಿಗಳಿಗೂ ಸೋಂಕು; ಪೊಲೀಸರಲ್ಲಿ ಆತಂಕ
- ಲಾಕ್’ಡೌನ್ ನಡುವೆ ಬಾಲಕಿ ಮೇಲೆ ಗ್ಯಾಂಗ್ ರೇಪ್; ವೀಡಿಯೋ ವಿಕೃತಿ
- ನೀವು ಕಂಟೈನ್‍ಮೆಂಟ್ ಝೋನ್’ನಲ್ಲಿದ್ದೀರಾ? ಇಲ್ಲಿದೆ ಪಟ್ಟಿ
ರೆಡ್ ಝೋನ್ ಮಾತ್ರವಲ್ಲ ಆರೆಂಜ್ ಝೋನ್’ಗಳಲ್ಲೂ ಸೋಂಕಿತರ ಸಂಖ್ಯೆಗಳು ಹೆಚ್ಚುತ್ತಲೇ ಇರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಹಾಗಾಗಿ ಎಲ್ಲರನ್ನೂ ಪಾರೀಕ್ಷೆಗೊಳಡಿಸಬೇಕೇ ಎಂಬ ಚಿಂತನೆ ನಡೆಸುತ್ತಿದೆ ಸರ್ಕಾರ. ಗ್ರೀನ್ ಝೋನ್ ನಲ್ಲಿರುವ ಜನರನ್ನೂ ಕೂಡ ವೈದ್ಯಕೀಯ ಪರೀಕ್ಷೆಗೊಳಪಡಿಸುವ ಸಾಧ್ಯತೆಗಳಿವೆ ಎಂದೂ ಹೇಳಲಾಗುತ್ತಿದೆ.
ರೆಡ್ ಝೋನ್ ಹಾಗೂ ಆರೆಂಜ್ ಝೋನ್’ಗಳಲ್ಲಿ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆಯಾದರೂ ಹಸಿರು ವಲಯದಲ್ಲಿ ಈ ವರೆಗೆ ಯಾವುದೇ ಪ್ರಕರಣ ಗೊತ್ತಾಗಿಲ್ಲ. ಆದರೆ ಹಲವರಲ್ಲಿ ಯಾವುದೇ ರೋಗ ಲಕ್ಷಣಗಲ್ಲಿದೆ ಕೊರೋನಾ ಪಾಸಿಟಿವ್ ಎಂದು ದೃಢಪಟ್ಟ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಅನಿವಾರ್ಯವಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ.. ನೀವು ಕಂಟೈನ್‍ಮೆಂಟ್ ಝೋನ್’ನಲ್ಲಿದ್ದೀರಾ? ಇಲ್ಲಿದೆ ಪಟ್ಟಿ
ಜಪಾನ್’ನಲ್ಲಿ ಈ ರೀತಿ ಕ್ರಮ ಅನುಸರಿಸಿ ಯಶಸ್ಸು ಕಾಣಲಾಗಿದೆ. ಅದರಂತೆ ರಾಜ್ಯದ ಹಲವೆಡೆ ಈ ರೀತಿಯ ಪ್ರಕ್ರಿಯೆಯನ್ನು ಈಗಾಗಲೇ ಆರಂಭಿಸಲಾಗಿದೆ. ಮುಂದೆ ಆಗಬಹುದಾದ ಅನಾಹುತವನ್ನು ಆರಂಭದಲ್ಲೇ ತಡೆಯುವ ಉದ್ದೇಶದೊಂದಿಗೆ ಗ್ರೀನ್ ಝೋನ್ ಸಹಿತ ಎಲ್ಲಾ ಪ್ರದೇಶಗಳ ಜನರನ್ನು ಪರೀಕ್ಷೆಗೊಳಪಡಿಸುವುದು ಒಳ್ಳೆಯದು ಎಂಬ ಸಲಹೆ ಹಿನ್ನೆಲೆಯಲ್ಲಿ ಸರ್ಕಾರ ಇಂಥದ್ದೊಂದು ಹೆಜ್ಜೆ ಇಡುವ ನಿರೀಕ್ಷೆ ಇದೆ.
ಇದನ್ನೂ ಓದಿ.. ಕೊರೋನಾ ವಿಚಾರದಲ್ಲೂ ಮೋದಿ ‘ರಣವಿಕ್ರಮ’: ಮತ್ತೊಂದು ಖ್ಯಾತಿಯ ಕಿರೀಟ