ಬೆಂಗಳೂರಿನಲ್ಲಿ ಒಂದೇ ದಿನ 18 ಮಂದಿಯಲ್ಲಿ ಕೊರೋನಾ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಾಣು ಮರಣ ಮೃದಂಗ ಭಾರಿಸುತ್ತಲೇ ಇದ್ದು ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇವೆ. ನಿನ್ನೆ ಒಂದೇ ದಿನ ಸಿಲಿಕಾನ್ ಸಿಟಿಯಲ್ಲಿ ಮತ್ತೆ 18 ಮಂದಿಯಲ್ಲಿ ಕೋವಿಡ್-19 ಸೋಂಕು ಪಾಸಿಟಿವ್ ಎಂದು ದೃಢಪಟ್ಟಿದೆ. ಈ ಬೆಳವಣಿಗೆಯಿಂದಾಗಿ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಆತಂಕ ಮತ್ತಷ್ಟು ಹೆಚ್ಚಿದೆ.

ಪಾದರಾಯನಪುರದ 3 ಜನರಿಗೆ ಸೋಂಕು ತಗುಲಿದೆ. ಇವರಲ್ಲಿ ಇಬ್ಬರು ರಾಮನಗರ ಜೈಲಿನಲ್ಲಿದ್ದವರಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನೊಂದೆಡೆ ಹೊಂಗಸಂದ್ರ ವಾರ್ಡ್ ನಿವಾಸಿಗಳಲ್ಲೂ ಸೋಂಕು ದೃಢಪಟ್ಟಿದೆ. ಬಿಹಾರ ಪ್ರಯಾಣ ಹಿನ್ನೆಲೆ ಹೊಂದಿದ್ದ ವ್ಯಕ್ತಿ 9 ಮಂದಿಗೆ ಸೋಂಕು ಹರಡಿಸಿದ್ದು ಈ ಹಿನ್ನೆಲೆಯಲ್ಲಿ ಹೊಂಗಸಂದ್ರ ವಾರ್ಡ್ ಸೀಲ್ ಮಾಡಲು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಬಿಹಾರ ಮೂಲದ ವ್ಯಕ್ತಿ ಹೊಂಗಸಂದ್ರದಲ್ಲಿ ವಾಸವಿದ್ದರು. ಅವರ ಜೊತೆ ನಾಲ್ವರು ವಾಸವಿದ್ದರು ಎಂದು ಹೇಳಲಾಗುತ್ತಿದೆ. ಇದೀಗ ಇವರಲ್ಲೂ ಸೋಂಕು ಹರಡಿಸಿದ್ದು, ಸಂಪರ್ಕದಲ್ಲಿದ್ದ ಇನ್ನೂ ಐವರಿಗೆ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ.. ಕೊರೋನಾ ವಿಚಾರದಲ್ಲೂ ಮೋದಿ ‘ರಣವಿಕ್ರಮ’: ಮತ್ತೊಂದು ಖ್ಯಾತಿಯ ಕಿರೀಟ

 

Related posts