ಪಾದರಾಯನಪುರ ಕೈದಿಗಳಿಗೂ ಸೋಂಕು; ಪೊಲೀಸರಲ್ಲಿ ಆತಂಕ

ಬೆಂಗಳೂರು: ಕೊರೋನಾ ವಾರಿಯರ್ಸ್ ಮೇಲೆ ಪಾದರಾಯನಪುರದಲ್ಲಿ ಇತ್ತೀಚಿಗೆ ನಡೆದ ದಾಳಿ ಪ್ರಕರಣ ಹಾಗೂ ಗಲಭೆ ಕೃತ್ಯ ಬೆಂಗಳೂರು ಮಂದಿಯಲ್ಲಿ ಭೀತಿಗೆ ಕಾರಣವಾಗಿತ್ತು. ಜನರಿಗಷ್ಟೇ ಅಲ್ಲ ಇದೀಗ ಪೊಲೀಸರಿಗೂ ಆತಂಕ ಎದುರಾಗಿದೆ.

ಪಾದರಾಯನಪುರ ಗಲಭೆಯಲ್ಲಿ ಭಾಗಿಯಾದವರ ಪೈಕಿ ಇಬ್ಬರಿಗೆ ಕೊರೋನಾ ಸೋಂಕು ಇರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಈ ಸುದ್ದಿ ತಿಳಿಯ್ತುತ್ತಿದ್ದಂತೆಯೇ ಪೊಲೀಸರಲ್ಲೂ ಆತಂಕ ಸೃಷ್ಟಿಯಾಗಿದೆ. ಗಲಭೆ ಸಂದರ್ಭ ಕರ್ತವ್ಯನಿರತರಾಗಿದ್ದ ಹಾಗೂ ಆರೋಪಿಗಳ ಬಂಧನ ಮಾಡಿರುವ 130 ಕ್ಕೂ ಹೆಚ್ಚು ಪೊಲೀಸರು ಹಾಗೂ ಅವರ ಕುಟುಂಬ ಸದಸ್ಯರು, 30ಕ್ಕೂ ಹೆಚ್ಚು ಮಂದಿ ಬಂಧೀಖಾನೆ ಇಲಾಖಾ ಸಿಬ್ಬಂದಿಯಲ್ಲಿ ಭೀತಿ ಸೃಷ್ಟಿಯಾಗಿದೆ. ಇವರೆಲ್ಲರೂ ಇದೀಗ ಕ್ವಾರಂಟೈನ್’ಗೊಳಗಾಗುವುದು ಅನಿವಾರ್ಯವಾಗಿದೆ.

  ಪ್ರಮುಖ ಸುದ್ದಿಗಳು:

ಈ ನಡುವೆ ಪಾದರಾಯನಪುರ ಗಲಭೆಯ ಆರೋಪಿಗಳನ್ನು ರಾಮನಗರ ಜಿಲ್ಲಾ ಕಾರಾಗ್ರಹಕ್ಕೆ ಕರೆದೊಯ್ಯುವುದಕ್ಕೆ ಆ ಜಿಲ್ಲೆಯ ಜನರ ಆಕ್ಷೇಪಇತ್ತು. ಆದಾಗಿಯೂ ಆರೋಪಿಗಳನ್ನು ರಾಮನಗರ ಜಿಲ್ಲಾ ಜೈಲಿನಲ್ಲಿಯೇ ಇರಿಯಸಲಾಗಿತ್ತು. ಈ ಕೈದಿಗಳ ಪೈಕಿ ಇಬ್ಬರಲ್ಲಿ ಸೋಂಕು ಕಂಡುಬಂದಿದ್ದು ಸರ್ಕಾರದ ಕ್ರಮಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ಆರೋಪಿಗಳನ್ನು ರಾಮನಗರ ಜಿಲ್ಲೆಯಿಂದ ಸ್ಥಳಾಂತರಿಸಲೇಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಸಂಸದ ಡಿ.ಕೆ.ಸುರೇಶ್ ಪಟ್ಟುಹಿಡಿದಿದ್ದಾರೆ.

ಕೊರೋನಾ ವಿಚಾರದಲ್ಲೂ ಮೋದಿ ‘ರಣವಿಕ್ರಮ’: ಮತ್ತೊಂದು ಖ್ಯಾತಿಯ ಕಿರೀಟ

 

Related posts