ತೆಂಗಿನಕಾಯಿ ಹಾಲು ಅಥವಾ ತೆಂಗಿನಕಾಯಿ ಪುಡಿ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿವೆ. ಮಾರುಕಟ್ಟೆಗಳಲ್ಲಿ ಪೈಪೋಟಿ ದರದಲ್ಲಿ ಈ ವಸ್ತು ಸಿಗುತ್ತದೆಯಾದರೂ ಹಳ್ಳಿ ಸೊಗಡಿನ ಪರಿಶುದ್ಧ ತೆಂಗಿನಕಾಯಿ ಹಾಲು ಸಿಗಲಾರದು. ಸಮಯ ಹೊಂದಿಸಿಕೊಂಡಲ್ಲಿ ಮನೆಯಲ್ಲೇ ಇದನ್ನು ತಯಾರಿಸಬಹುದು. ಇದರ ತಯಾರಿಯೂ ಬಲು ಸುಲಭ.
ಬೇಕಾದ ಸಾಮಗ್ರಿ
- ತೆಂಗಿನಕಾಯಿ 1
ಮಾಡುವ ವಿಧಾನ
ಮೊದಲಿಗೆ ತೆಂಗಿನಕಾಯಿಯನ್ನು ತುಂಡು ಅಥವಾ ತುರಿದು ಇಟ್ಟುಕೊಳ್ಳಬೇಕು. ನಂತರ ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ಮತ್ತು ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಒಂದು ಬಟ್ಟೆ ಹಾಕಿ ಅದಕ್ಕೆ ರುಬ್ಬಿಕೊಂಡದ್ದನ್ನು ಹಾಕಿ 2-3. ಸಲ ಹಿಂಡಬೇಕು. ಹಾಗೆ ಹಿಂಡಿದಾಗ ತೆಂಗಿನಕಾಯಿ ಹಾಲು ಸಿದ್ಧವಾಗುತ್ತದೆ. ಆ ಬಟ್ಟೆಯಲ್ಲಿ ಉಳಿದ ತೆಂಗಿನಕಾಯಿಯನ್ನು ತೆಗದು ಒಂದು ಬಾಣಲೆಯಲ್ಲಿ 10 ನಿಮಿಷಗಳ ಕಾಲ ಹುರಿಯಬೇಕು. ನಂತರ ಅದನ್ನು ಮಿಕ್ಸಿ ಜಾರಿನಲ್ಲಿ ರುಬ್ಬಿಕೊಂಡಾಗ ಪೌಡರ್ ತರಹ ತೆಂಗಿನಕಾಯಿ ಹುಡಿ ಸಿದ್ಧವಾಗುತ್ತದೆ. ಇದನ್ನು ರೊಟ್ಟಿ, ಚಪಾತಿ, ಬಿಸ್ಕಿಟ್, ಪ್ಯಾನ್ ಕೇಕ್ ಇತರ ತಿಂಡಿಗಳನ್ನು ಮಾಡುವಾಗ ಉಪಯೋಗಿಸಬಹುದು.
ಇದನ್ನೂ ಓದಿ.. ಮಾವು ಸೂಪರ್.. ‘ಮಾವಿನ ಹಲ್ವಾ’ ಸೂಪರೋ ಸೂಪರ್