ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ವಿಜೇತೆ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಸ್ಪರ್ಧೆಯ ವಿಜೇತೆ ಮೆಬಿನಾ ಮೈಕಲ್ ಇನ್ನಿಲ್ಲ. ಚೆನ್ನರಾಯಪಟ್ಟಣ ಸಮೀಪದ ಬೆಳ್ಳೂರು ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ವರ್ಷಗಳ ಹಿಂದೆ ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ‘ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು’ ಎಂಬ ರಿಯಾಲಿಟಿ ಶೋ ವೀಕ್ಷಕ ಕೋಟಿಯ ಗಮನ ಸೆಳೆದಿತ್ತು. ಮನೆಮಾತಾಗಿದ್ದ ಈ ರಿಯಾಲಿಟಿ ಶೋನಲ್ಲಿ ಕೊಡಗು ಮೂಲದ ತಾರೆ ಮೆಬಿನಾ ಮೈಕಲ್ ಚಾಂಪಿಯನ್ ಆಗಿ ಹೊಹೊಮ್ಮಿದ್ದರು.
ಸೋಮವಾರಪೇಟೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ವೇಳೆ ಅಪಘಾತ ಸಂಭವಿಸಿ ಅವರು ದುರ್ಮರಣಕ್ಕೀಡಾಗಿದ್ದಾರೆ ಎನ್ನಲಾಗಿದೆ.