ಜೂನ್ 1ರಿಂದ ಕೋರ್ಟ್ ಕಲಾಪ; ವಕೀಲರಿಗೂ ಷರತ್ತು

ಕೊರೋನಾ ಕಾರಣಕ್ಕಾಗಿ ಲಾಕ್‌ಡೌನ್ ಜಾರಿಯಾದ ನಂತರ ಕೋರ್ಟ್ ಕಲಾಪಗಳೂ ಏರುಪೇರಾಗಿದೆ. ಇದೀಗ ಪರಿಸ್ಥಿತಿ ಚೇತರಿಕೆಯಾಗಲೆಂಬ ಕಾರಣಕ್ಕಾಗಿ ವ್ಯಾಪಾರ ವಹಿವಟು ಆರಂಭಕ್ಕೆ ಭಾಗಶಃ ಅನುಮತಿ ಸಿಕ್ಕಿದೆ. ಆದರೆ ಕೋರ್ಟ್ ಕಲಾಪಗಳು ಆರಂಭವಾಗಿಲ್ಲ.

ಈ ವರೆಗೂ ಸ್ಥಗಿತಗೊಂಡಿದ್ದ ನ್ಯಾಯಾಲಯ ಕಲಾಪಗಳು ಜೂನ್ 1ರಿಂದ ಆರಂಭವಾಗಲಿದೆ. ಸೋಂಕು ಹರಡದಂತೆ ತಡೆಗಟ್ಟುವ ಹಿನ್ನೆಲೆಯಲ್ಲಿ ಕೋರ್ಟ್ ಕಲಾಪ ಸಂಬಂಧ ಹೊಸ ಮಾರ್ಗಸೂಚಿ ಪ್ರಕಟಿಸಲಾಗಿದೆ. ಈ ಮಾರ್ಗಸೂಚಿಯ ಪ್ರಮುಖ ಅಂಶ ಹೀಗಿದೆ.

  • ಪ್ರತಿ ದಿನ ಬೆಳಿಗ್ಗೆ 10, ಮಧ್ಯಾಹ್ನ ನಂತರ 10 ಪ್ರಕರಣಗಳ ವಿಚಾರಣೆ ನಡೆಯಲಿದೆ.
  • ಪ್ರತಿ ಕೋರ್ಟ್ ಹಾಲ್‌ನಲ್ಲಿ 20ಕ್ಕಿಂತ ಹೆಚ್ಚು ವಕೀಲರು, ಸಿಬ್ಬಂದಿ ಇರುವಂತಿಲ್ಲ. ಅದಕ್ಕಿಂತ ಹೆಚ್ಚು ಮಂದಿ ಇದ್ದರೆ ಕಲಾಪ ಸ್ಥಗಿತಗೊಳಿಸಬೇಕಾಗುತ್ತದೆ.
  • ಮೊದಲೆರಡು ವಾರ ಸಾಕ್ಷ್ಯ ವಿಚಾರಣೆಗೆ ಅವಕಾಶವಿಲ್ಲ. ವಕೀಲರ ವಾದ ಮಂಡನೆಗಷ್ಟೇ ಅವಕಾಶ.
  • ಕೋರ್ಟ್‌ಗಳಿಗೆ ಕಕ್ಷಿಗಳ ಪ್ರವೇಶಕ್ಕೂ ನಿರ್ಬಂಧವಿರಲಿದೆ. ಕೋರ್ಟ್‌ಗೆ ಆಗಮಿಸುವ ವಕೀಲರು ಹೊರದೇಶ, ಹೊರ ರಾಜ್ಯ ಅಥವಾ ನಿರ್ಬಂಧಿತ ವಲಯಕ್ಕೆ ಭೇಟಿ ನೀಡಿಲ್ಲ ಎಂಬುದನ್ನು ಖಾತ್ರಿಪಡಿಸಬೇಕು.
  • ಕೆಮ್ಮು, ನೆಗಡಿ, ಜ್ವರ ಇದ್ದವರಿಗೆ ಪ್ರವೇಶಾವಕಾಶ ಇಲ್ಲ.
  • ವಕೀಲರು, ಸಿಬ್ಬಂದಿ ಸಹಿತ ಮಾಸ್ಕ್ ಧರಿಸಿರಬೇಕು. ಒಂದು ಮೀಟರ್ ಅಂತರ ಕಾಯ್ದುಕೊಳ್ಳಬೇಕು

ಇದನ್ನೂ ಓದಿ.. ಬೆಳ್ಳೂರು ಕ್ರಾಸ್ ಬಳಿ ಅಪಘಾತ; ರಿಯಾಲಿಟಿ ಷೋ ವಿನ್ನರ್ ಸಾವು

Related posts