ದೆಹಲಿ: ಲಾಕ್’ಡೌನ್ ಜಾರಿಯಲ್ಲಿದ್ದರೂ ಕೊರೋನಾ ಅಟ್ಟಹಾಸ ನಿಂತಿಲ್ಲ. ಹಾಗಾಗಿ ಐದನೇ ಅವಧಿಗೆ ಲಾಕ್’ಡೌನ್ ವಿಸ್ತರಣೆಯಾಗುತ್ತಾ ಎಂಬ ಸಂಶಯ ಮೂಡಿದೆ.
ಪ್ರಸ್ತುತ ಜಾರಿಯಲ್ಲಿರುವ ನಾಲ್ಕನೇ ಹಂತದ ಲಾಕ್ಡೌನ್ ಮೇ 31ರಂದು ಮುಕ್ತಾಯವಾಗಲಿದೆ. ಹಾಗಾಗಿ ಅಂದೇ ಪಧಾನಿ ನರೇಂದ್ರ ಮೋದಿ ತಮ್ಮ ಜನಪ್ರಿಯ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿ ಲಾಕ್ಡೌನ್ ವಿಸ್ತರಣೆ ಕುರಿತು ನಿರ್ಧಾರ ಪ್ರಕಟಿಸಲಿದ್ದಾರೆ.
ಒಂದು ಮೂಲದ ಪ್ರಕಾರ ಐದನೇ ಹಂತದಲ್ಲಿ ಜೂನ್ 15 ರವರೆಗೂ ಲಾಕ್ಡೌನ್ ವಿಸ್ತರಣೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆದರೆ ಲಾಕ್ಡೌನ್ ಸಂದರ್ಭದಲ್ಲಿ ಮತ್ತಷ್ಟು ಸಡಿಲಿಕೆ ಇರಲಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ ಲಾಕ್’ಡೌನ್ ಕುರಿತಂತೆ ಈಗಾಗಲೇ ಆದೇಶಿಸಲಾಗಿದೆ ಎಂಬ ಸುದ್ದಿಯೂ ಹರಿದಾಡುತ್ತಿದ್ದು ಜನತೆ ಗೊಂದಲಕ್ಕೀಡಾಗಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಕೇಂದ್ರ ಗೃಹ ಸಚಿವಾಲಯದ ವಕ್ತಾರರು, ಲಾಕ್’ಡೌನ್ ವಿಸ್ತರಣೆ ಬಗ್ಗೆ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಈ ಕುರಿತಂತೆ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದು ಸ್ಪಷ್ಟಪಡಿಸಿದ್ದಾರೆ.
#FactCheck
The quoted story claims to have inside details about #Lockdown5, from MHA Sources.All claims made therein are mere speculations by the reporter. To attribute them to MHA is incorrect and being irresponsible.#FakeNewsAlerthttps://t.co/0L1r7eGuUh via @indiatoday
— Spokesperson, Ministry of Home Affairs (@PIBHomeAffairs) May 27, 2020
ಇದನ್ನೂ ಓದಿ.. ಈ ಸಿನಿಮಾದ ಹೆಸರೇ ‘ಕೊರೊನಾ ವೈರಸ್’