ರುಚಿ, ಆರೋಗ್ಯಕರ ‘ಬಾಳೆಹಣ್ಣು ಒರೆಯೋ ಕೇಕ್’

ಬಾಳೆಹಣ್ಣು ಒರೆಯೋ ಕೇಕ್ ಬಗ್ಗೆ ಕೇಳಿರಬಹುದು. ಆದರೆ ಮಾಡುವ ವಿಧಾನ ಗೊತ್ತಾ? ಇಲ್ಲಿದೆ ನೋಡಿ ಈ ವಿಶಿಷ್ಟ ಕೇಕ್ ತಯಾರಿಸುವ ಮಾರ್ಗದರ್ಶಿ ಸೂತ್ರ..

ಬೇಕಾದ ಸಾಮಗ್ರಿ

  • ಬಾಳೆಹಣ್ಣು 8
  • ಗೋಧಿ ಹುಡಿ 2 ಕಪ್
  • ತೆಂಗಿನಕಾಯಿ ಹುಡಿ ಅರ್ಧ ಕಪ್
  • ಒರೆಯೋ ಕೇಕ್ 1 ಕಪ್
  • ಜೇನುತುಪ್ಪ 4 ಚಮಚ
  • ಎಣ್ಣೆ ಅರ್ಧ ಕಪ್
  • ಬೆಲ್ಲ ಅರ್ಧ ಕಪ್
  • ಬೇಕಿಂಗ್ ಸೋಡಾ ಅರ್ಧ ಚಮಚ
  • ಹಾಲು 2.5 ಕಪ್

ಮಾಡುವ ವಿಧಾನ

ಮೊದಲಿಗೆ ಬಾಳೆಹಣ್ಣನ್ನು ಸಿಪ್ಪೆ ತೆಗದು ಒಂದು ಮಿಕ್ಸಿ ಜಾರಿನಲ್ಲಿ ಹಾಕಿ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ಬಾಳೆಹಣ್ಣನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಬೆಲ್ಲ ,ಜೇನುತುಪ್ಪ, ಎಣ್ಣೆ, ಸ್ವಲ್ಪ ಹಾಲು ಹಾಕಿ ಕಲಸಬೇಕು. ಗೋಧಿಹುಡಿ, ತೆಂಗಿನಕಾಯಿಹುಡಿ, ಬೇಕಿಂಗ್ ಸೋಡಾ, ಹಾಲು ಹಾಕಿ ಚೆನ್ನಾಗಿ ಇನ್ನೊಂದ್ ಸಲ ಕಲಸಬೇಕು. ನಂತರ ಒರಿಯೋ ಹಾಕಿ ಚೆನ್ನಾಗಿ ಕಲಸಿ ಒಂದು ಕಾಡಾಯಿ ಗೆ ಹಾಕಿ. ಅದರ ಮೇಲೆ ಸ್ವಲ್ಪ ಒರಿಯೋ ಹಾಕಿ decoration ಮಾಡಿ 45 ನಿಮಿಷಗಳ ಕಾಲ ಮೀಡಿಯಂ ಫ್ಲ್ಯಾಮ್ ಅಲ್ಲಿ ಇಡಬೇಕು.

ರುಚಿಯಾದ ಆರೋಗ್ಯಕರವಾದ ಮೆತ್ತಗಿನ ಬಾಳೆಹಣ್ಣು ಒರಿಯೋ ಕೇಕ್ ಸಿದ್ಧವಾಗುತ್ತದೆ.

ಇದನ್ನೂ ಮಾಡಿ ನೋಡಿ.. ಶೀತ-ಕೆಮ್ಮು ಕಾಯಿಲೆಗೂ ರಾಮಬಾಣ ಈ ‘ಶುಂಠಿ ಜೀರಿಗೆ ಕಶಾಯ’ 

 

Related posts