ಕತ್ತಿ, ಕೋರೆ, ಪ್ರಕಾಶ್ ಶೆಟ್ಟಿಗೆ ಶಾಕ್ ಕೊಟ್ಟ ಬಿಜೆಪಿ ಹೈಕಮಾಂಡ್; ರಾಜ್ಯಸಭೆಗೆ ಅಚ್ಚರಿಯ ಹೆಸರು ಪ್ರಕಟ

ಬೆಂಗಳೂರು: ರಾಜ್ಯಸಭಾ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯಲ್ಲಿನ ನಾಲ್ಕು ಸ್ಥಾನಗಳಿಗೆ ಆಯ್ಕೆ ನಡೆಯಲಿದ್ದು ಆಡಳಿತಾರೂಢ ಬಿಜೆಪಿಯಿಂದ ಇಬ್ವರು ಸುಲಭವಾಗಿ ಆಯ್ಕೆಯಾಗಬಹುದು. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರ ನಡುವೆ ಟಿಕೆಟ್’ಗಾಗಿ ಭಾರೀ ಲಾಬಿ ನಡೆದಿದೆ.

ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಪತ್ನಿಗೆ ಟಿಕೆಟ್ ನೀಡಬೇಕೆಂಬ ಒತ್ತಡ ಒಂದೆಡೆ ಕೇಳಿಬಂದಿದೆಯಾದರೂ ಪ್ರಭಾಕರ ಕೋರೆ ಪುನರಾಯ್ಕೆ ಮಾಡಬೇಕೆಂಬ ಆಗ್ರಹವೂ ಹೆಚ್ಚಿತ್ತು. ಇನ್ನೊಂದೆಡೆ ರಮೇಶ್ ಕತ್ತಿ, ಹಾಗೂ ಉದ್ಯಮಿ ಪ್ರಕಾಶ್ ಶೆಟ್ಟಿ ಕೂಡಾ ಭರ್ಜರಿ ಲಾಬಿಯಲ್ಲಿ ತೊಡಗಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಇವರಲ್ಲಿ ಯಾರೊಬ್ಬರನ್ನೂ ಪರಿಗಣಿಸಿಲ್ಲ.

ಇದೀಗ ಅಚ್ಚರಿಯ ಹೆಸರನ್ನು ರಾಜ್ಯಸಭಾ ಅಭ್ಯರ್ಥಿಯಾಗಿ ಪ್ರಕಟಿಸಲಾಗಿದೆ. ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳಾಗಿ ಈರಣ್ಣ ಕಡಾಡಿ  ಮತ್ತು ಅಶೋಕ್ ಗಸ್ತಿಯವರಿಗೆ ಟಿಕೆಟ್ ಪ್ರಕಟಿಸುವ ಮೂಲಕ ಹೈಕಮಾಂಡ್ ಉತ್ತರಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶಗಳಿಗೆ ಆದ್ಯತೆ ನೀಡಿರುವುದು ಕುತೂಹಲಕಾರಿ ಬೆಳವಣಿಗೆಯಾಗಿದೆ.

ಇದೇ ವೇಳೆ ಕಾಂಗ್ರೆಸ್’ನಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್’ನಿಂದ ಮಾಜಿ ಪ್ರಧಾನಿ ದೇವೇಗೌಡರು ಕಣಕ್ಕಿಳಿಯುವ ಸಾಧ್ಯತೆಗಳಿವೆ.

ಇದನ್ನೂ ಓದಿ.. ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಸಮರ ತಂತ್ರ; ಬಿಎಸ್‌ವೈಗೆ ಕಠಿಣ ಹಾದಿ?

 

Related posts