ಕೊರೋನಾ ರಣಕೇಕೆ ಹಿನ್ನೆಲೆ; ರಾಜ್ಯದಲ್ಲಿ ಸ್ವಯಂ ಸೀಲ್‍ಡೌನ್

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಹೆಚ್ಚುತ್ತಲೇ ಇವೆ. ನಿತ್ಯವೂ ಆತಂಕಕಾರಿ ವರದಿ ಬಹಿರಂಗವಾಗುತ್ತಿದ್ದು ರಾಜ್ಯದ ಹಲವೆಡೆ ಸೀಲ್’ಡೌನ್ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವೆಡೆ ಜನರು ಸ್ವಯಂ ಸೀಲ್’ಡೌನ್ ಮಾಡಲಾರಂಭಿಸಿದ್ದಾರೆ.

ಬೆಂಗಳೂರಿನ ಬಹುತೇಕ ಪ್ರದೇಶಗಳು ಸೀಲ್‍ಡೌನ್ ಆಗಲಿವೆ ಎಂಬ ಸುಳಿವನ್ನು ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ನೀಡಿದ್ದಾರೆ. ಚಾಮರಾಜಪೇಟೆ, ಚಿಕ್ಕಪೇಟೆ, ಕಲಾಸಿಪಾಳ್ಯ, ಪಾದರಾಯಣಪುರ, ಸಿದ್ದಾಪುರ, ಆನಂದಪುರ, ಸಹಿತ ಹಲವು ಪ್ರದೇಶಗಳನ್ನು ಸೀಲ್’ಡೌನ್ ಮಾಡಲು ನಿರ್ಧರಿಸಲಾಗಿದೆ ಎನ್ನಲಾಗಿದೆ.

ಅತ್ತ ಕೊರೊನಾ ರಣಕೇಕೆಗೆ ಕನಕಪುರ ಜನ ಕೂಡಾ ಆತಂಕಗೊಂಡಿದ್ದಾರೆ. ಹೀಗಾಗಿ ಕನಕಪುರದಲ್ಲಿ ಸ್ವಯಂ ಪ್ರೇರಿತ ಲಾಕ್‍ಡೌನ್ ಮಾಡಲಾಗಿದೆ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಜುಲೈ 1ರ ವರೆಗೂ ಕನಕಪುರ ಲಾಕ್‍ಡೌನ್ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅವಕಾಶ ನೀಡಲಾಗಿದೆ.

Related posts