ಭಾರತ ಈಗ ವಿಶ್ವಗುರು..!! ಜೀವ ಸಂಜೀವಿನಿಗಾಗಿ ಮೋದಿ ಮುಂದೆ ದುಂಬಾಲು ಬಿದ್ದ ಬಲಾಢ್ಯ ರಾಷ್ಟ್ರಗಳು

ಭಾರತ ವಿಶ್ವಗುರು ಎಂದು ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುತ್ತಿದ್ದೆವು. ಇದೀಗ ಇಡೀ ಜಗತ್ತೇ ಭಾರತವನ್ನು ವಿಶ್ವಗುರುವಾಗಿ ನೋಡುತ್ತಿದೆ. ಇದು ಪರಿಸ್ಥಿತಿ ತಂದೊಡ್ಡಿದ ಅನಿವಾರ್ಯತೆಯೂ ಇರಬಹುದು. ಇದು ಪರಿಸ್ಥಿತಿ ನಿರ್ಮಿಸಿದ ಅಚ್ಚರಿ ಅಂತಾನೂ ಹಲವರು ಹೇಳಬಹುದು.

ಜಗತ್ತಿಗೆ ಕೊರೋನಾ ವಕ್ಕರಿಸಿದ ಸಂದರ್ಭದಲ್ಲಿ ಬಲಾಢ್ಯ ರಾಷ್ಟ್ರಗಳೇ ಭಾರತವನ್ನು ಅವಲಂಭಿಸಿದೆ. ಚೀನಾದಲ್ಲಿ ಸೃಷ್ಟಿಯಾಗಿರುವ ಕೋವಿಡ್-19 ಅಗೋಚರ ರಾಕ್ಷಸೀ ವೈರಾಣು ಹಣವಂತ ರಾಷ್ಟ್ರಗಳನ್ನೇ ಹೈರಾಣಾಗಿಸಿದೆ. ಅಮೆರಿಕಾವಂತೂ ತನ್ನ ದೇಶವು ಸ್ಮಶಾನವಾಗುತ್ತಿರುವುದರಿಂದಾಗಿ ಭೀತಿಗೊಳಗಾಗಿದೆ. ಕೆಲ ದಿನಗಳ ಹಿಂದಷ್ಟೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತ ಪ್ರಧಾನಿ  ನರೇಂದ್ರ ಮೋದಿ ಮುಂದೆ ಔಷಧಿಗಾಗಿ ಮೊರೆ ಇಟ್ಟಿದ್ದಾರೆ. ಭಾರತ ಕೂಡಾ ಗುಣಾತ್ಮಕವಾಗಿಯೇ ಸ್ಪಂಧಿಸುವ ಭರವಸೆ ನೀಡಿದೆ. ಆದರೆ ಅಮೆರಿಕಾದಲ್ಲಿ ಸೋಮವಾರ ಒಂದೇ ದಿನದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಜನ ಕೊರೋನಾ ಸೋಂಕಿತರು ಬಲಿಯಾಗಿರುವುದರಿಂದ ಹತಾಶರಾಗಿರುವ ಟ್ರಂಪ್, ಭಾರತದ ಬಗ್ಗೆ ಮುನಿಕೊಂಡಂತಿದೆ.

ಏನಿದು ಜೀವ ಸಂಜೀವಿನಿ?

ಪ್ರಸ್ತುತ ಭಾರತದಲ್ಲಿ ತಯಾರಾಗುತ್ತಿರುವ  Hydroxychloroquine ಔಷಧಿ ಮಲೇರಿಯಾ ಮಾತ್ರವಲ್ಲ ಕೊರೋನಾ ಸೋಂಕಿಗೂ ದಿವ್ಯಔಷಧ. ಹಾಗಾಗಿ ಇದನ್ನು ತರಿಸಿಕೊಳ್ಳುವ ಆತುರದಲ್ಲಿದೆ ಅಮೆರಿಕಾ. ಆದರೆ ಕೇಳಿದ ತಕ್ಷಣವೇ ಕಳುಹಿಸಿಕೊಡಲು ಭಾರತಕ್ಕೆ ವ್ಯವಸ್ಥೆಯೂ ಅಡ್ಡಿಯಾಗಿದೆ. ಈ ತಿಳುವಳಿಕೆಯಿಲ್ಲದ ಟ್ರಂಪ್, ಭಾರತ ಸರ್ಕಾರ Hydroxychloroquine ಔಷಧಿ ರಫ್ತು ಮಾಡದಿದ್ದರೆ, ನಾವು ತಕ್ಕ ತಿರುಗೇಟು ನೀಡುತ್ತೇವೆ ಎಂದು ಹೇಳಿದ್ದಾರೆ.

ಅಮೆರಿಕಾದಲ್ಲಿನ ಕೊರೋನಾ ಕಾರ್ಯಪಡೆಯ ಪ್ರಮುಖರ ಸಭೆಯಲ್ಲಿ ಮಾತನಾಡುತ್ತಾ ಟ್ರಂಪ್ ಅವರು ಹತಾಶ ಭಾವನೆ ವ್ಯಕ್ತಪಡಿಸಿದ್ದಾರೆ. ಭಾರತಕ್ಕೆ ಅಮೆರಿಕದ ಬಗ್ಗೆ ತಿಳಿದಿದೆ. ಔಷಧಿ ರಫ್ತು ಮೇಲಿನ ನಿಷೇಧವನ್ನು ತೆರವುಗೊಳಿಸುವಂತೆ ಮೋದಿಯವರಲ್ಲಿ ಕೇಳಿದ್ದೇನೆ. ಒಂದು ವೇಳೆ ಔಷಧಿ ಕಳುಹಿಸಿಕೊಡದಿದ್ದರೆ  ಪರ್ಯಾಯ ಮಾರ್ಗ ನಮ್ಮಲ್ಲಿದೆ ಎಂದು ಹತಾಶೆಯ ಮಾತುಗಳನ್ನಾಡಿದ್ದಾರೆ ಟ್ರಂಪ್.

ದುಂಬಾಲು ಬಿದ್ದ ಬಲಾಢ್ಯ ರಾಷ್ಟ್ರಗಳು

ಅಮೆರಿಕಾ ಮಾತ್ರವಲ್ಲ 30ಕ್ಕೂ ಹೆಚ್ಚು ದೇಶಗಳು Hydroxychloroquine ಔಷಧಿಗಾಗಿ ಭಾರತಕ್ಕೆ ದುಂಬಾಲು ಬೀಳುತ್ತಿವೆ.  Hydroxychloroquine ಮಲೇರಿಯಾ ನಿರೋಧಕ ಔಷಧ. ಈ ಔಷಧಿ ರಫ್ತಿಗೆ ಭಾರತ ನಿಷೇಧ ಹೇರಿದೆ. ಇದೀಗ ಈ ಔಷಧಿ ಕೊರೋನಾಗೂ ರಾಮಭಾಣವಾಗಿದೆ ಎಂದು ವೈದ್ಯಲೋಕದ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಜಗತ್ತಿನ ಬೇರೆಬೇರೆ ರಾಷ್ಟ್ರಗಳು ಶುಶ್ರುತನ ನಾಡನ್ನು ಈ ಔಷಧಿಗಾಗಿ ಅವಲಂಭಿಸುವುದು ಅನಿವಾರ್ಯವೆನಿಸಿದೆ.

ಇದನ್ನೂ ಓದಿ.. ಟ್ರಂಪ್-ಮೋದಿ ನಡುವಿನ ಮಾತುಕತೆಯ ರಹಸ್ಯ; ಪಾಕ್-ಚೀನಾಕ್ಕೆ ಮುಂದಿದೆ ಮಾರಿಹಬ್ಬ

Related posts