ಜನರ ಸಿಟ್ಟಿಗೆ ಬೆಚ್ಚಿದ ಬಿಎಸ್’ವೈ; ಎಲ್ಲವೂ ಕ್ಯಾನ್ಸಲ್

ಬೆಂಗಳೂರು: ಇಡೀ ದೇಶ ಕೋವಿಡ್-19 ಸೋಂಕಿನಿಂದ ನಲುಗಿದ್ದು ಕರುನಾಡು ಕೂಡಾ ಕೊರೋನಾ ಕಿರಿಕ್’ನಿಂದ ತತ್ತರಿಸಿದೆ. ಆದರೂ ಏಪ್ರಿಲ್ 20 ರ ನಂತರ ಲಾಕ್’ಡೌನ್ ನಿಯಮದಲ್ಲಿ ಸಡಿಲಿಕೆ ಮಾಡುವುದಾಗಿ ಸಿಎಂ ಯಡಿಯೂರಪ್ಪ ಶನಿವಾರ ಘೋಷಿಸಿದ್ದರು.

  • ಸೋಮವಾರದಿಂದ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ.
  • ಐಟಿ ಕಂಪೆನಿಗಳ ಉದ್ಯೋಗಿಗಳಿಗೆ ಕರ್ತವ್ಯಕ್ಕೆ ಹಾಜರಾಗಲು ಅವಕಾಶ.
  • ಕಂಪೆನಿ ನೀಡಿರುವ ಗುರುತಿನ ಇದ್ದರೆ ದ್ವಿಚಕ್ರ ವಾಹನದಲ್ಲಿ ಸಂಚರಿಸಲು ಅನುಮತಿ

ಗೃಹ ಬಂಧನದಲ್ಲಿದ್ದ ರಾಜ್ಯದ ಜನ ಮುಖ್ಯಮಂತ್ರಿಯವರ ಈ ಭರವಸೆಯಿಂದ ತುಸು ನಿರಾಳರಾದರು. ಆದರೆ ಅಷ್ಟರಲ್ಲೇ ಜನರಿಂದ ಆಕ್ರೋಶ ವ್ಯಕ್ತವಾಯಿತು. ಕಿಲ್ಲರ್ ಕೊರೋನಾ ಸೋಂಕು ಶರವೇಗದಲ್ಲಿ ಹರಡುತ್ತಿರುವಾಗ ಇಂತಹಾ ರಿಲ್ಯಾಕ್ಸ್ ಸರಿಯೇ ಎಂಬ ಪ್ರಶ್ನೆಗಳ ಸುರಿಮಳೆಯಾಗಿದೆ.
ಜನಾಭಿಪ್ರಾಯ ಹೀಗಿರುವಾಗ ತಾವು ಕೂಡಾ ಆತುರದ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ ಎಂದು ನಿರ್ಧಾರಕ್ಕೆ ಬಂದ ಸಿಎಂ ಯಡಿಯೂರಪ್ಪ, ರಾತ್ರಿಯಾಗುತ್ತಿದ್ದಂತೆಯೇ ತಮ್ಮ ಹೇಳಿಕೆಯನ್ನು ಹಿಂಪಡೆದಿದ್ದಾರೆ.  ಈ ಕುರಿತಂತೆ ಅವರು ಟ್ವೀಟ್ ಮಾಡಿದ್ದಾರೆ.   

  • ದ್ವಿಚಕ್ರ ವಾಹನಗಳ ಮುಕ್ತ ಸಂಚಾರಕ್ಕೆ ಅವಕಾಶ ಕೊಡುತ್ತೇವೆಂಬ ನಿರ್ಧಾರವನ್ನು ಪುನರ್ ಪರಿಶೀಲಿಸಿ, ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಲಾಕ್’ಡೌನ್ ಸಮಯದಲ್ಲಿದ್ದಂತೆ ಯಥಾ ಸ್ಥಿತಿಯನ್ನು ಮುಂದುವರಿಸಲಾಗುತ್ತದೆ.
  • ಐಟಿ-ಬಿಟಿ ಕ್ಷೇತ್ರಗಳಲ್ಲಿ ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ಕೊಟ್ಟು ಉಳಿದಂತೆ ಮನೆಯಿಂದಲೇ ಕೆಲಸ ನೀತಿಯನ್ನು ಮುಂದುವರಿಸಲಾಗುವುದು.

ಈ ರೀತಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸರ್ಕಾರವು ಲಾಕ್’ಡೌನ್ ತೆರವು ಮಾಡುವ ವರೆಗೂ ಬಿಗಿ ನಿಯಮವನ್ನು ಮುಂದುವರಿಸಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ.. ‘ಅಮ್ಮಾ ಅಮ್ಮಾ ಓ ಎನ್ನಮ್ಮಾ’.. ಮೋದಿ ಮತ್ತು ತಾಯಿ ಕುರಿತ ಹಾಡಿಗೆ ಸಕತ್ ಲೈಕ್ 

 

Related posts