‘ಅಮ್ಮಾ ಅಮ್ಮಾ ಓ ಎನ್ನಮ್ಮಾ’.. ಮೋದಿ ಮತ್ತು ತಾಯಿ ಕುರಿತ ಹಾಡಿಗೆ ಸಕತ್ ಲೈಕ್

ಬೆಂಗಳೂರು: ಊರಿಗೆ ಅರಸನಾದರೂ ತಾಯಿಗೆ ಮಗ ಎಂಬ ಗಾದೆ ಮಾತೊಂದಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಾಯಿ ನಡುವಿನ ಮಮತೆಯ ಬಂಧುತ್ವ ಬಗ್ಗೆ ಆಗಾಗ್ಗೆ ಸುದ್ದಿಯಾಗುತ್ತಿದ್ದು ಅದನ್ನೂ ಕೂಡಾ ಈ ಗಾದೆ ಮಾತಿಗೆ ಜನ ಹೋಲಿಸಿ ವರ್ಣನೆ ಮಾಡುತ್ತಿದ್ದಾರೆ.

ಪ್ರಸಕ್ತ ಕೊರೋನಾ ಹೆಮ್ಮಾರಿ ವೈರಾಣು ಇಡೀ ದೇಶವನ್ನು ಕಾಡುತ್ತಿದ್ದು ಎಲ್ಲೆಲ್ಲೂ ಆತಂಕದ ಛಾಯೆ ಆವರಿಸಿದೆ. ಲಾಕ್’ಡೌನ್ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದೇ ವೇಳೆ ಸರ್ಕಾರದ ಕೆಲಸದ ಜೊತೆ ಸಾರ್ವಜನಿಕರೂ ಕೈ ಜೋಡಿಸಿ ಸಂಕಷ್ಟದಲ್ಲಿರುವವರಿಗೆ ನೆರವಾಗುವಂತೆ ಮೋದಿ ಕರೆ ನೀಡಿದ್ದಾರೆ. ಇದನ್ನು ಮೆಚ್ಚಿಕೊಂಡಿರುವ ಪ್ರಧಾನಿ ಮೋದಿಯವರ ತಾಯಿ, ತಾನೂ ಜೋಡಿಸಿಟ್ಟಿರುವ ಉಳಿತಾಯದ ಹಣವನ್ನು ಮಗನ ಸಾರಥ್ಯದಲ್ಲಿ ಸಾಗಿರುವ ಕೆಲಸಕ್ಕೆ ಸಮರ್ಪಿಸಿದ್ದಾರೆ.

ಈ ನಡುವೆ ಈ ಎಲ್ಲಾ ಸಂಗತಿಗಳತ್ತ ಬೆಳಕು ಚೆಲ್ಲುವ ರೀತಿಯಲ್ಲಿ ತಾಯಿ ಕುರಿತ ಮಮತೆಯ ಪದಗಳು ಹಾಡಿನ ರೂಪದಲ್ಲಿ ಸಂಗೀತ ಧಾರೆಯಾಗಿ ಝೇಂಕರಿಸಿದೆ. ಸಿನಿಮಾ ನಟ-ನಿರ್ದೇಶಕ ದೇವದಾಸ್ ಕಾಪಿಕಾಡ್ ಈ ಹಾಡನ್ನು ಹಾಡಿದ್ದು ಇದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದಾಗುತ್ತಿದೆ.

‘ಅಮ್ಮಾ ಅಮ್ಮಾ ಓ ಎನ್ನಮ್ಮಾ’ ಹಾಡಿಗೆ ಗುರು ಬಾಯಾರ್ ಅವರ ಸಂಗೀತವಿದೆ. ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಸಕತ್ತಾಗಿ ವೈರಲ್ ಆಗುತ್ತಿದ್ದು ಮೋದಿ ಅಭಿಮಾನಿಗಳ ಗಮನ ಸೆಳೆದಿದೆ.

ಇದನ್ನೂ ಓದಿ.. ಜನರಿಗಾಗಿ ವಿವಾಹವನ್ನೇ ಮರೆತ ಕನ್ನಡತಿ ಮಹಿಳಾ DYSP 

 

Related posts