ರಾಜ್ಯದ ಅತ್ಯಂತ ದುರ್ಬಲ ಬಜೆಟ್; ಡಿಕೆಶಿ ಕಾಮೆಂಟ್

ಬೆಂಗಳೂರು : ರಾಜ್ಯ ಬಜೆಟ್ ಬಗ್ಗೆ ಪ್ರತಿ ಪಕ್ಷಗಳು ಟೀಕೆ ಮಾಡಿವೆ. ಇದು ಆಶಾದಾಯಕ ಬಜೆಟ್ ಅಲ್ಲ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿದ ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಇದು ರಾಜ್ಯದ ಅತ್ಯಂತ ದುರ್ಬಲ ಬಜೆಟ್ ಎಂದಿದ್ದಾರೆ. ಪಾಪ ಬಿಎಸ್​ವೈ ಅವರಿಗೂ ಮಾತಾಡಲು ಶಕ್ತಿ ಕಾಣುತ್ತಿಲ್ಲ. ಯಾವ ಹುರುಪಿನಲ್ಲಿ ಸರ್ಕಾರ ಮಾಡಿದರೂ, ಅದೆಲ್ಲ ಈಗ ಕಾಣ್ತಿಲ್ಲ ಎಂದು ವ್ಯಾಖ್ಯಾನಿಸಿದ ಡಿ.ಕೆ.ಶಿ. ಹಳೆಯ ಯೋಜನೆಗಳಿಗೆ ಹೊಸ ಹೆಸರುಗಳನ್ನೂ ಯಡಿಯೂರಪ್ಪ ಕೊಟ್ಟಿದ್ದಾರೆ ಎಂದರು.

ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್ ಅತ್ಯಂತ ದುರ್ಬಲ ಬಜೆಟ್ ಅಂದುಕೊಂಡಿದ್ದೆ. ಆದರೆ, ಆ ಬಜೆಟನ್ನೂ ಮೀರಿಸಿದ ದುರ್ಬಲ ಬಜೆಟ್ ಯಡಿಯೂರಪ್ಪನವರದ್ದಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Related posts