ಏಕೈಕ ‘ತುಳು ಪತ್ರಿಕೆಯ ಧೀರ’ ವಿಜಯಕುಮಾರ್ ಹೆಬ್ಬಾರಬೈಲು ಸಾಧನೆಯ ಕಿರೀಟಕ್ಕೆ ಪ್ರಶಸ್ತಿಯ ಗರಿ.. 

‘ಗಡಿನಾಡ ಧ್ವನಿ’ಯಾದ ಏಕೈಕ ‘ತುಳು ಪತ್ರಿಕೆಯ ಧೀರ”ನಿಗೆ ರಾಜ್ಯ ಪ್ರಶಸ್ತಿ.. ವಿಜಯಕುಮಾರ್ ಹೆಬ್ಬಾರಬೈಲು ಅವರಿಗೆ ಪುರಸ್ಕಾರ.. ಮಂಗಳೂರು: ಕವಿ, ಪತ್ರಕರ್ತ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲು ಅವರ ಸಂಪಾದಕತ್ವದ ‘ಪೂವರಿ’ ಪತ್ರಿಕೆಯು ತುಳು ಪತ್ರಿಕಾ ಕ್ಷೇತ್ರದಲ್ಲಿ ನಾಡಿಗೆ ಸಲ್ಲಿಸಿದ ಅನುಪಮ ಸಾಧನೆಗಾಗಿ ಆರನೇ ಕರ್ನಾಟಕ ಗಡಿನಾಡ ಸಮ್ಮೇಳನ – 2023ರ “ಗಡಿನಾಡ ಧ್ವನಿ ಮಾಧ್ಯಮ ರಾಜ್ಯ ಪ್ರಶಸ್ತಿ”ಯನ್ನು ಪಡೆದುಕೊಂಡಿದೆ. ಪುತ್ತೂರು ಸಮೀಪದ ಒಡ್ಯ ಸರಕಾರಿ ಶಾಲಾ ವಠಾರದಲ್ಲಿ ನಡೆದ ಈ ಪ್ರಶಸ್ತಿಯನ್ನು ಸಂಪಾದಕ ವಿಜಯಕುಮಾರ್ ಭಂಡಾರಿ ಹೆಬ್ವಾರಬೈಲು ಅವರಿಗೆ ಪ್ರಧಾನ ಮಾಡಲಾಗಿದೆ. ತುಳುನಾಡಿನಲ್ಲಿ ಕಳೆದ ಎಂಟು ವರ್ಷಗಳಿಂದ ಸದ್ದು ಮಾಡುತ್ತಿರುವ ತುಳು ಭಾಷೆಯ ಏಕೈಕ ತುಳು ಮಾಸಿಕ ‘ಪೂವರಿ’ ಇತ್ತೀಚೆಗೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಒಡಿಯೂರು ತುಳು ಸಾಹಿತ್ಯ ಸಮ್ಮೇಳನದ ಪ್ರಶಸ್ತಿ ಸಹಿತ ಅನೇಕ ಮಾಧ್ಯಮ ಪ್ರಶಸ್ತಿಗಳ ಪಡೆದುಕೊಂಡಿದೆ. ಇದೀಗ ಈ ಸಾಧನೆಗಳ ಕಿರೀಟಕ್ಕೆ ಮತ್ತೊಂದು ಪುರಸ್ಕಾರದ…

‘ಅಂಬಲಿ ಹಲಸಿತು, ಕಂಬಳಿ ಬಿಸಿತು’: ಹೀಗಿದೆ ಮೈಲಾರಲಿಂಗೇಶ್ವರ ಕಾರಣಿಕ ನುಡಿ

ಉತ್ತರ ಕರ್ನಾಟಕದ ಐತಿಹಾಸಿಕ ಸುಪ್ರಸಿದ್ಧ ಮೈಲಾರಲಿಂಗೇಶ್ವರ ಜಾತ್ರೆ 2023ರ ಕಾಣಿಕೋತ್ಸವ#ಅಂಬಲಿ_ಹಳಸಿತು_ಕಂಬಳಿ_ಬೀಸುತ್ತಲೇ_ಪರಾಕ್ pic.twitter.com/A4lK1PcXax — P C ಗಾಣಿಗೇರ (@prashantganige6) February 7, 2023

ಕೊರಳೇರಿದ ‘ಅಡಿಕೆ ಹಾರ’; ಮಂತ್ರಿ ಅರಗ ವೈಖರಿಗೆ ಮೋದಿ ಖುಷ್

ತುಮಕೂರು: ಗಣ್ಯಾತಿಗಣ್ಯರ ಆಗಮನ ಸಂದರ್ಭದಲ್ಲಿ ನಾಡಿನ ಸೊಗಡಿನ ಪ್ರತಿಬಿಂಬವೆಂಬಂತೆ ವಿಶೇಷ ರೀತಿ ಸನ್ಮನ  ಮಾಡುವುದು ಸಾಮಾನ್ಯ. ಅದರಲ್ಲೂ ಕರುನಾಡಿನಲ್ಲಿ ಮೈಸೂರು ಪೇಟ ತೊಡಿಸುವುದು, ಏಲಕ್ಕಿ ಹಾರ ಹಾಕುವುದು, ಮಲ್ಲಿಗೆಯ ಹಾರದೊಂದಿಗೆ ಸನ್ಮಾನಿಸುವುದು, ಇಳಕಲ್ ಸೀರೆ ಸಮರ್ಪಿಸುವುದು ಇತ್ಯಾದಿ ರೀತಿಯ ಗೌರವ ಸಾಮಾನ್ಯ. ಆದರೆ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರೈತರ ಪರವಾಗಿ ಸನ್ಮಾನಿಸಿದ ವೈಖರಿ ನಾಡಿನ ಗಮನಸೆಳೆಯಿತು. ಪ್ರಧಾನಿ ಮೋದಿಗೆ ತುಮಕೂರಿನ ಕಾರ್ಯಕ್ರಮದಲ್ಲಿ ಅಡಿಕೆಯ ಹಾರದೊಂದಿಗೆ ಸನ್ಮಾನಿಸಲಾಯಿತು. ಸ್ವತಃ ಅಡಿಕೆ ಕೃಷಿಕರೂ ಆದ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಪ್ರಧಾನಿಯನ್ನು ಅಡಿಕೆ ಹಾರದೊಂದಿಗೆ ಸನ್ಮಾನಿಸಿದರು. ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ರಾಜ್ಯಕ್ಕೆ ಆಗಮಿಸಿದ ನಮ್ಮೆಲ್ಲರ ನೆಚ್ಚಿನ ಪ್ರಧಾನಮಂತ್ರಿ ಶ್ರೀ @narendramodi ಅವರಿಗೆ ಅಡಿಕೆಯಲ್ಲಿ ತಯಾರಿಸಿದ ವಿಶೇಷ ಹಾರವನ್ನು ಅರ್ಪಿಸುವ ಮೂಲಕ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಸ್ವಾಗತಿಸಲಾಯಿತು. ಮಾನ್ಯ ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಉಪಸ್ಥಿತರಿದ್ದರು.@BSBommai…

ಗಣರಾಜ್ಯೋತ್ಸವ: ಕೇವಲ ಎಂಟು ಹತ್ತು ದಿನಗಳಲ್ಲಿ ‘ನಾರಿ ಶಕ್ತಿ’ ಸ್ಥಬ್ಧಚಿತ್ರ ಸಿದ್ದ

ಬೆಂಗಳೂರು: ಸಣ್ಣ ಭಾವನೆಗಳನ್ನು ಬಿಟ್ಟು,ಕರ್ನಾಟಕದ ಬಗ್ಗೆ ಎಲ್ಲರೂ ಒಂದಾಗಬೇಕು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಕರ್ನಾಟಕದ ಸ್ತಬ್ಧಚಿತ್ರ ಗಣರಾಜ್ಯೋತ್ಸವ ಬಗ್ಗೆ ಪಾಲ್ಗೊಳ್ಳುವ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದರು. ಕೆಪಿಸಿಸಿ ಅಧ್ಯಕ್ಷರು ಈ ಕುರಿತು ನೀಡಿರುವ ಹೇಳಿಕೆಗೆ ಉತ್ತರಿಸಿ ನವದೆಹಲಿಯಲ್ಲಿ 2009 ರಲ್ಲಿ ಯು.ಪಿ.ಎ ಸರ್ಕಾರವಿತ್ತು. ರಾಜ್ಯದಿಂದ ಕಳುಹಿಸಿದ ಸ್ಥಬ್ಧಚಿತ್ರವನ್ನು ನಿರಾಕರಿಸಲಾಗಿತ್ತು. ಕರ್ನಾಟಕದ ಬಗ್ಗೆ ಅಷ್ಟು ಸ್ವಾಭಿಮಾನ ಇರುವವರು, ಆಗ ಯಾರ ಮೇಲಾದರೂ ಒತ್ತಡ ಹೇರಿ ಸ್ಥಬ್ಧಚಿತ್ರಕ್ಕೆ ಸ್ಥಾನಪಡೆದುಕೊಳ್ಳಬಹುದಿತ್ತು. ನಂತರ ಸತತ 14 ವರ್ಷ ಸ್ಥಬ್ಧಚಿತ್ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದೆ. ಕಳೆದ ಬಾರಿ ಪ್ರಶಸ್ತಿ ಪಡೆದವರಿಗೆ ಬೇರೆಯದರಲ್ಲಿ ಅವಕಾಶ ನೀಡಬೇಕೆಂಬ ವಿಚಾರವಿತ್ತು.ಆದಾಗ್ಯೂ ನಾನು ರಕ್ಷಣಾ ಸಚಿವರೊಂದಿಗೆ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಯವರೂ ಮಾತನಾಡಿ ಸ್ತಬ್ಧ ಚಿತ್ರಕ್ಕೆ ಅನುಮತಿ ನೀಡಿದ್ದಾರೆ. ಕೇವಲ ಎಂಟು ಹತ್ತು ದಿನಗಳಲ್ಲಿ ನಾರಿ ಶಕ್ತಿ ಎಂಬ ವಿಷಯದ…

ಲಂಡನ್‌ನಲ್ಲಿ ಕನ್ನಡ ಪ್ರೇಮ.. MS ಪದವಿ ಪ್ರದಾನ ಸಮಾರಂಭದಲ್ಲಿ ರಾರಾಜಿಸಿದ ಕನ್ನಡ ಧ್ವಜ

ಲಂಡನ್: ಲಂಡನ್‌ನಲ್ಲಿ ಎಂಎಸ್ ವಿದ್ಯಾರ್ಥಿಯೊಬ್ಬ ಪದವಿ ಸ್ವೀಕರಿಸಿದ ಸಂದರ್ಭದಲ್ಲಿ ಕನ್ನಡ ಧ್ವಜ ಹಿಡಿದು ತಾಯ್ನಾಡಿನ ಬಗ್ಗೆ ಅಭಿಮಾನ ವ್ಯಕ್ತಪಡಿಸಿ ಗಮನಸೆಳೆದಿದ್ದಾನೆ. ಪದವಿ ಪ್ರದಾನ ಸಮಾರಂಭದಲ್ಲಿ ತನ್ನ ಸರದಿ ಬಂದಾಗ ಕರ್ನಾಟಕ ಮೂಲದ MS ವಿದ್ಯಾರ್ಥಿ ಆದಿಷ್ ವಾಲಿ ಕನ್ನಡ ಧ್ವಜ ಹಿಡಿದು ಹೆಜ್ಜೆ ಹಾಕಿದ್ದಾನೆ. ಈ ಕುರಿತ ವೀಡಿಯೋವನ್ನು ಈ ವಿದ್ಯಾರ್ಥಿ ಟ್ವೀಟ್ ಮಾಡಿದ್ದು, ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ನಾನು @CityUniLondon – @BayesBSchool ನಿಂದ ಮ್ಯಾನೇಜ್‌ಮೆಂಟ್‌ನಲ್ಲಿ ಮಾಸ್ಟರ್ಸ್ ಎಂಎಸ್ (MS) ಪದವಿ ಪಡೆದಿದ್ದೇನೆ. ಲಂಡನ್, ಬ್ರಿಟನ್‌ನಲ್ಲಿ ನಡೆದ ಸಮಾರಂಭದಲ್ಲಿ ನಾನು ನಮ್ಮ ಕರ್ನಾಟಕ ರಾಜ್ಯ ಧ್ವಜವನ್ನು ಹಾರಿಸಿದಾಗ ಹೆಮ್ಮೆಯ ಕ್ಷಣ. 💛♥️#karnataka #bidar #kannada #kannadiga #london #uk #England #karnatakaflag — Adhish R. Wali (@AdhishWali) January 22, 2023 ಇದೇ ವೇಳೆ ಸಂತಸ ಹಂಚಿಕೊಂಡಿರುವ ವಿದ್ಯಾರ್ಥಿ ಆದಿಷ್, ‘ನಾನು ಲಂಡನ್‌ನ…

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ: ಸಮಾರೋಪ ಸಮಾರಂಭದಲ್ಲಿ ಅಭಿವೃದ್ಧಿ ಮಂತ್ರ

ಗಡಿನಾಡಿನ ಅಭಿವೃದ್ಧಿಗೆ 100 ಕೋಟಿ ರೂ.. ಶಾಸ್ತ್ರೀಯ ಭಾಷೆ ಸಂಶೋಧನೆಗೆ ಸರ್ಕಾರದ ಪ್ರೋತ್ಸಾಹ.. 3 ಕೋಟಿ ವೆಚ್ಚದಲ್ಲಿ ಹಾವೇರಿಯಲ್ಲಿ ಕಸಾಪ ಭವನ.. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ.. ಹಾವೇರಿ: ಏಲಕ್ಕಿ ನಾಡು ಹಾವೇರಿಯಲ್ಲಿ 86 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆಬಿದ್ದಿದೆ. ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಮ್ಮೇಳನದ ವೇದಿಕೆಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಘೋಷಿಸಿದರು. ಗಡಿನಾಡಿನ ಶಿಕ್ಷಣ,ಆರೋಗ್ಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರ 100 ಕೋಟಿ ರೂ.ಒದಗಿಸಲಿದೆ.ಕನ್ನಡದ ಶಾಸ್ತ್ರೀಯ ಭಾಷೆ ಸ್ಥಾನಮಾನದ ಸಂಶೋಧನಾ ಕಾರ್ಯಗಳಿಗೆ ಸಾಹಿತಿಗಳ ಸಮಿತಿ ರಚಿಸಲಾಗುವುದು.ಸಮಿತಿ ಸೂಚಿಸುವ ಸಂಶೋಧನಾ ಕಾರ್ಯಗಳಿಗೆ ಬೇಕಾದ ಹಣವನ್ನು ಸರ್ಕಾರ ಒದಗಿಸಲಿದೆ. ಸಮ್ಮೇಳನದ ನೆನಪಿಗೆ ಹಾವೇರಿಯಲ್ಲಿ 3 ಕೋಟಿ ರೂ.ವೆಚ್ಚದಲ್ಲಿ ಕಸಾಪ ಭವನ ನಿರ್ಮಿಸಿ,ಕರ್ನಾಟಕ ಜಾನಪದ ವಿವಿ ಸಹಯೋಗದಲ್ಲಿ ಗುಣಮಟ್ಟದ ಸಂಶೋಧನಾ ಕೇಂದ್ರವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಗಡಿನಾಡಿನ…

ಎಲ್.ಜಿ.ಹಾವನೂರು ವರದಿ ಅನುಷ್ಠಾನದಿಂದ ಸಾಮಾಜಿಕ ಬದಲಾವಣೆ: ಜಯಪ್ರಕಾಶ್ ಹೆಗ್ಡೆ

ಹಾವೇರಿ: ಎಲ್.ಜಿ. ಹಾವನೂರು ವರದಿಯನ್ನು ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಹಿಂದುಳಿದ ವರ್ಗಗಳ ಬೈಬಲ್ ಎಂದು ಬಣ್ಣಿಸಿದ್ದರು. ಸರ್ವೊಚ್ಛ ನ್ಯಾಯಲಯವು ವರದಿಯನ್ನು ಹಿಂದುಳಿದ ವರ್ಗಗಳ ನಿಖರವಾದ ಅಂಶಗಳ ಅಧ್ಯಯನ ಎಂದಿತು. ಈ ವರದಿ ಬಿ.ಪಿ.ಮಂಡಲ್ ಆಯೋಗಕ್ಕೂ ಮಾನದಂಡವಾಗಿ ಕಾರ್ಯನಿರ್ವಹಿಸಿದೆ. ವರಿದಿಯ ಸಂಪೂರ್ಣ ಅನುಷ್ಠಾನದಿಂದಾಗಿ ರಾಜ್ಯದಲ್ಲಿ ಸಾಮಾಜಿಕ ಬದಲಾವಣೆ ಉಂಟಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಎಲ್.ಜಿ.ಹಾವನೂರು ವರದಿಗೆ 50 ವರ್ಷ ಸಂದ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಯೋಜಿಸಲಾಗಿದ್ದ ಕನ್ನಡಪರ ಮತ್ತು ಪಗ್ರತಿಪರ ವರದಿಗಳ ಅನುಷ್ಠಾನದ ಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್.ಜಿ.ಹಾವನೂರು ನೇತೃತ್ವದ ಆಯೋಗ ರಾಜ್ಯದ 180 ನಗರ ಹಾಗೂ 190 ಗ್ರಾಮೀಣ ಭಾಗದ ಬ್ಲಾಕ್‌ಗಳಲ್ಲಿ ಸಂಚರಿಸಿ 63 ಸಾವಿರ ಕುಟುಂಬಗಳ 3 ಲಕ್ಷ ಹಿಂದುಳಿದ ವರ್ಗಗಳ ಜನರ ಸಮಿಕ್ಷೆಯನ್ನು ನಡೆಸಿತು. 1972ರ ಎಸ್.ಎಸ್.ಎಲ್.ಸಿ ಪರೀಕ್ಷೆ ಮಾನದಂಡ ಆಧರಿಸಿ ಹಿಂದುಳಿದ…

‘ಅರಿಯದ ಕರೆಗೆ ಓಗೊಟ್ಟು ಜೀವನದ ಅನ್ವೇಷಣೆಗೆ ತೊಡಗಿದರೆ ಅದೇ ಅನುಭಾವ’

ಹಾವೇರಿ : ಕಣ್ಣಿಗೆ ಕಾಣದ, ಅರಿಯದ ಕರೆಗೆ ಓಗೊಟ್ಟು ಜೀವನದ ಅನ್ವೇಷಣೆಗೆ ತೊಡಗಿದರೆ ಅದೇ ಅನುಭಾವ. ಬಸವಣ್ಣ, ಅಕ್ಕಮಹಾದೇವಿ ಹಾಗೂ ಅಲ್ಲಮಪ್ರಭು ಸೇರಿದಂತೆ ಹಲವು ಶರಣರು ಇಂತಹ ಕರೆಗೆ ಓಗೊಟ್ಟು ಜೀವನದ ಅನ್ವೇಷಣೆಗೆ ತೊಡಗಿದರು ಎಂದು ಆಧ್ಯಾತ್ಮಿಕ ಚಿಂತಕಿ ವೀಣಾ ಬನ್ನಂಜೆ ಹೇಳಿದರು. ಹಾವೇರಿಯಲ್ಲಿ ನಡೆಯುತ್ತಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪಾಪು-ಚಂಪಾ ವೇದಿಕೆಯಲ್ಲಿ ಎರಡನೇ ದಿನದ ಗೋಷ್ಠಿಯಲ್ಲಿ ವಚನ ಪರಂಪರೆ ವಿಷಯದಡಿ, ವಚನಗಳಲ್ಲಿ ಅನುಭಾವದ ಕುರಿತು ಅವರು ಮಾತನಾಡಿದರು. ಅನುಭವ ಹಾಗೂ ಅನುಭಾವ ಎರೆಡೂ ಬೇರೆ ಬೇರೆ. ಜೀವನದ ಪ್ರತಿನಿತ್ಯದ ಜಂಜಾಟಗಳಲ್ಲಿ ನಮಗೆ ಲಭಿಸುವುದು ಅನುಭವ. ಅನುಭಾವ ಆಧ್ಯಾತ್ಮ ಚಿಂತನೆ. ದೇವರ ಸಾಕಾರ ಆಗುವವರೆಗೂ ನಮ್ಮನ್ನು ನಾವು ಅನ್ವೇಷಿಸಿಕೊಳ್ಳಬೇಕು. ಕೂಡಸಂಗಮದೇವನಿಗಾಗಿ ಬಸವಣ್ಣ, ಚನ್ನಮಲ್ಲಿಕಾರ್ಜುನನಿಗಾಗಿ ಅಕ್ಕಮಹಾದೇವಿ, ಗುಹೇಶ್ವರನಿಗಾಗಿ ಅಲ್ಲಮ ಪ್ರಭು ಅನ್ವೇಷಿಸಿ ತಮ್ಮ ಬದುಕನ್ನು ಸಾಗಿಸಿದರು. ಇಂತಹ ಅನ್ವೇಷಣೆಯಲ್ಲಿ ತೊಡಗಿದ ಇವರಿಗೆ ಬದುಕಿನ ಅನಿಶ್ಚಿತತೆ…

ರಾಜ್ಯದ ವಿಶ್ವ ವಿದ್ಯಾಲಯಗಳ ಪಠ್ಯಕ್ರಮಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ವಿಷಯ ಸೇರ್ಪಡೆಯಾಗಲಿ -ಕೆ.ಸತ್ಯನಾರಾಯಣ

ಹಾವೇರಿ: ಉತ್ತರ ಭಾರತದ ವಿವಿ. ಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಅಧ್ಯಯನಕ್ಕೆ ಅಳವಡಿಸಿರುವ ವಿಷಯದಂತೆ ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ವಿಷಯ ಅಳವಡಿಕೆಯಾಗಬೇಕು ಎಂದು ಕೇಂದ್ರ ಸರ್ಕಾರದ ವರಮಾನ ತೆರಿಗೆ ಇಲಾಖೆ ನಿವೃತ್ತ ಪ್ರಧಾನ ಮುಖ್ಯ ಆಯುಕ್ತ ಕೆ.ಸತ್ಯನಾರಾಯಣ ಅವರು ಹೇಳಿದರು. ಶನಿವಾರ ಹಾವೇರಿಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಹಿತ್ಯ ಸಮ್ಮೇಳನದ ಶ್ರೀ ಹಾನಗಲ್ ಕುಮಾರ ಶಿವಯೋಗಿಗಳ ವೇದಿಕೆಯಲ್ಲಿ ಜರುಗಿದ “ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ” ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉತ್ತರ ಭಾರತದ ವಿವಿ ಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿ ವಿಷಯಗಳನ್ನು ಅಭ್ಯಯಿಸುವುದರಿಂದ ಅಲ್ಲಿನ ಅಭ್ಯರ್ಥಿಗಳು ಹೆಚ್ಚಾಗಿ ಯು.ಪಿ.ಎಸ್ಸಿ. ಪರೀಕ್ಷೆಯಲ್ಲಿ ಆಯ್ಕೆಯಾಗುತ್ತಿದ್ದಾರೆ. ಅದರಂತೆ ರಾಜ್ಯದಲ್ಲೂ ಸ್ಪರ್ಧಾತ್ಮಕ ವಿಯಷಗಳ ಸೇರ್ಪಡೆಗೆ ಸರ್ಕಾರ ಮುಂದಾಗಬೇಕು ಎಂದು ಹೇಳಿದರು. ಕನ್ನಡ ಐಚ್ಛಿಕ ವಿಷಯದಲ್ಲಿ ಪರೀಕ್ಷೆ ತೆಗೆದುಕೊಂಡರೆ ನಾವುಗಳು ಇತರ ಪ್ರಾದೇಶಿಕ ಭಾಷೆಗಳ ಅಭ್ಯರ್ಥಿಗಳಿಗೆ ಸ್ಪರ್ಧಿಗಳಾಗುತ್ತೇವೆ. ಕನ್ನಡ…