ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ನಿರ್ಮಿಸಲಾಗಿರುವ ಮಾದರಿ ಪಾರಂಪರಿಕ ಗ್ರಾಮವನ್ನು ಉದ್ಘಾಟಿಸಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಉಪಸ್ಥಿತರಿದ್ದರು.
Category: ವೈವಿದ್ಯ
ನಂದಿ ಬೆಟ್ಟದಲ್ಲಿ ಜನ ಜಂಗುಳಿ; ಸಾಮಾಜಿಕ ಅಂತರ ಇಲ್ಲ
ಬೆಂಗಳೂರು: ಲಾಕ್’ಡೌನ್ ಕಾರಣದಿಂದ ಕಳೆದ ಹಲವು ತಿಂಗಳಿನಿಂದ ಪರಿಸ್ಥಿತಿ ತಂದೊಡ್ಡಿದ್ದ ಪಜೀತಿಯಲ್ಲಿ ಬಂಧಿಯಾಗಿದ್ದ ಜನ ಇದೀಗ ಪ್ರವಾಸಿ ತಾಣಗಳತ್ತ ಮನಸ್ಸು ಕೇಂದ್ರೀಕರಿಸಿದ್ದಾರೆ. ಅದರಲ್ಲೂ ಬೆಂಗಳೂರು ಸುತ್ತಮುತ್ತಲ ಜನರು ನಂದಿ ಬೆಟ್ಟದತ್ತ ಚಿತ್ತ ಹರಿಸಿದ್ದಾರೆ. ಕಳೆದೆರಡು ವಾರಗಳಲ್ಲಿ ನಂದಿಬೆಟ್ಟಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ವಾರಾಂತ್ಯದ ದಿನಗಳಾದ ಶನಿವಾರ, ಭಾನುವಾರದಂದು ನಂದಿಬೆಟ್ಟದಲ್ಲಿ ಜನಜಾತ್ರೆಯ ಸನ್ನಿವೇಶ ಸೃಷ್ಟಿಯಾಗಿದೆ. ನಂದಿಬೆಟ್ಟದ ತಪ್ಪಲಲ್ಲಿ ಹಾಗೂ ವಾಹನ ನಿಲುಗಡೆ ಪ್ರದೇಶಗಳಲ್ಲಿ ಸಾವಿರಾರು ವಾಹನಗಳು ನಿಂತಿದ್ದ ದೃಶ್ಯ ಕಂಡುಬರುತ್ತಿತ್ತು. ಬಹುತೇಕ ಮಂದಿ ಸಾಮಾಜಿಕ ಅಂತರ ಕಾಯ್ದುಕೊಂಡಿಲ್ಲ ಎಂಬ ಆರೋಪಗಳೂ ಕೇಳಿಬಂದಿವೆ. ಪರಿಸರವಾದಿಗಳ ಆತಂಕ: ನಮ್ಮ ಬಹುತೇಕ ಪರಿಸರ ಪ್ರವಾಸೋದ್ಯಮದ ಸ್ಥಳ ಗಳು ಇತ್ತೀಚೆಗೆ ಹೀಗೆ ಆಗುತ್ತಿವೆ. ಇಷ್ಟು ಪ್ರಮಾಣದ ವಾಹನಗಳು ಅರಣ್ಯ ಪ್ರದೇಶದ, ಪ್ರಕೃತಿ ತಾಣಗಳಿಗೆ ಒಮ್ಮೆಲೇ ಲಗ್ಗೆ ಇಟ್ಟರೆ ಆ ಪರಿಸರವನ್ನೆ ಏಕೈಕ ಆಶ್ರಯ ತಾಣವಾಗಿ ನಂಬಿದ , ಜನರ ಗದ್ದಲವನ್ನು ಸಹಿಸದ ವನ್ಯಜೀವಿಗಳ…
ಬಸ್ಸೇ ಸ್ತ್ರೀ ಶೌಚಾಲಯ; ಇದು ಕೆಎಸ್ಸಾರ್ಟಿಸಿ ಟಾಯ್ಲೆಟ್ ಕಥೆ
ಬೆಂಗಳೂರು: ರಾಜ್ಯ ಸಾರಿಗೆ ಸಂಸ್ಥೆಯು ಅನುಪಯುಕ್ತ ಬಸ್ಸನ್ನು ಬಳಸಿಕೊಂಡು ನಿರ್ಮಾಣ ಮಾಡಿರುವ ಸುಸಜ್ಜಿತ ಸ್ತ್ರೀ ಶೌಚಾಲಯ ನಾಡಿನ ಗಮನಸೆಳೆದಿದೆ. ಈ ಸ್ತ್ರೀ ಶೌಚಾಲಯವನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಲೋಕಾರ್ಪಣೆ ಮಾಡಿದ್ದಾರೆ. ಈ ಶೌಚಾಲಯ ಹಲವು ವಿಶೇಷತೆಗಳಿಂದ ಗಮನಸೆಳೆದಿವೆ. ಮಗುವಿಗೆ ಹಾಲುಣಿಸುವ ಸ್ಥಳ, ಸ್ಯಾನಿಟರಿ ನ್ಯಾಪಕಿನ್ ವೆಂಡಿಂಗ್ ಯಂತ್ರ, ಇನ್ಸಿನಿರೇಟರ್, ಮಗುವಿನ ಡೈಪರ್ ಬದಲಿಸುವ ಸ್ಥಳ, ಭಾರತೀಯ ಮತ್ತು ಪಾಶ್ಚಾತ್ಯ ಶೌಚಾಲಯಗಳು, ವಾಷ್ ಬೇಸಿನ್ ಗಳು, ಸೆನ್ಸಾರ್ ದೀಪಗಳು, ಸಂಪೂರ್ಣ ಸೋಲಾರ್ ವಿದ್ಯುತ್ ಅಳವಡಿಸಲಾಗಿದೆ. ಶೌಚಾಲಯ ನಿರ್ಮಾಣಕ್ಕೆ 12 ಲಕ್ಷ ರೂಪಾಯಿ ವೆಚ್ಚ ತಗುಲಿದೆ. ದೇಶದ ರಸ್ತೆ ಸಾರಿಗೆ ನಿಗಮಗಲ್ಲಿಯೇ ಪ್ರಪ್ರಥಮ ಬಾರಿಗೆ ಇಂತಹ ಸುಸಜ್ಜಿತ ಶೌಚಾಲಯವನ್ನು ಅನುಪಯುಕ್ತ ಬಸ್ಸಿನಲ್ಲಿ ನಿರ್ಮಿಸಲಾಗಿದೆ ಎಂದು ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ದಾಸವಾಳ ಹೂವಿನ ಚಹಾ; ಆರೋಗ್ಯಪೂರ್ಣ ಟೀ
ದಾಸವಾಳ ಹೂವಿನಿಂದಲೂ ಚಹಾ ತಯಾರಿಸಬಹುದು. ಇದು ಆರೋಗ್ಯಪೂರ್ಣ ಟೀ ಎನ್ನುತ್ತಾರೆ ಪರಿಣಿತರು. ಬೇಕಾಗುವ ಸಾಮಾಗ್ರಿ ದಾಸವಾಳ ಹೂ 8 ನೀರು 7 ಕಪ್ ಸಕ್ಕರೆ 5 ಚಮಚ ನಿಂಬೆ ರಸ 3 ಚಮಚ ಮಾಡುವ ವಿಧಾನ ದಾಸವಾಳ ಹೂ ಎಸಳನ್ನು ತೆಗದು ಚೆನ್ನಾಗಿ ಸ್ವಚ್ಛ ಮಾಡಿ, ತೊಳೆದು ಇಡಬೇಕು. ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಬೇಕು. ಕುದಿಸಿದ ನೀರನ್ನು ದಾಸವಾಳಕ್ಕೆ ಹಾಕಿ.
‘ಪತ್ರೊಡೆ ಒಗ್ಗರಣೆ’ಯ ರುಚಿಯನ್ನು ನೀವೂ ಒಮ್ಮೆ ಸವಿಯಿರಿ.
ಮೀನು ಪ್ರೀಯರಿಗೂ ಇಷ್ಟ.. ಉದ್ಯೋಗ ಸೃಷ್ಟಿಯೂ ಪಕ್ಕಾ; ChefTalk ಪೂಜಾರಿಯ ‘ಮತ್ಷ್ಯದರ್ಶಿನಿ’ ವೈಶಿಷ್ಟ್ಯ
ಬೆಂಗಳೂರು: ಉದ್ಯೋಗ ಉತ್ತೇಜನ ಪರಿಕಲ್ಪನೆಯಲ್ಲಿ ಯಶಸ್ವಿಯಾಗಿರುವ Chef Talk ಕಂಪೆನಿಯ ಪ್ರವರ್ತಕರಾದ ಗೋವಿಂದ ಪೂಜಾರಿ ಇದೀಗ ರಾಜ್ಯ ಸರ್ಕಾರದ ಮೀನುಗಾರಿಕಾ ಇಲಾಖೆ ಜೊತೆ ಕೈಜೋಡಿಸಿದ್ದಾರೆ. ಮತ್ಯೋದ್ಯಮಕ್ಕೆ ಸ್ಫೂರ್ತಿಯಾಗಿ ಹಾಗೂ ನಿರುದ್ಯೋಗಿಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ‘ಮತ್ಸ್ಯಬಂಧ’ ಯೋಜನೆಯನ್ನು ಆರಂಭಿಸಿರುವ ಗೋವಿಂದ ಬಾಬು ಪೂಜಾರಿ, ಇದೀಗ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಹೊನ್ನಪ್ಪ ರೆಡ್ಡಿ ಬಡಾವಣೆಯಲ್ಲಿ ‘ಮತ್ಸ್ಯದರ್ಶಿನಿ’ ಆರಂಭಿಸಿದ್ದಾರೆ. ಮತ್ಸ್ಯಪ್ರಿಯರ ಅಭಿರುಚಿಗೆ ತಕ್ಕಂತೆ ಖಾದ್ಯ ಸಿದ್ದಪಡಿಸಿ ಒದಗಿಸುವ ಈ ದರ್ಶಿನಿಗೆ ರಾಜ್ಯ ಸರ್ಕಾರದ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧಿಕಾರಿಗಳು ಬುಧವಾರ ಚಾಲನೆ ನೀಡಿದರು. ಕಬ್ಬನ್ ಪಾರ್ಕ್ ಬಳಿ ಗ್ರಾಹಕರನ್ನು ಸಂತುಷ್ಟಗೊಳಿಸುವಲ್ಲಿ ಯಶಸ್ವಿಯಾಗಿರುವ ಮತ್ಸ್ಯದರ್ಶಿನಿ ರೀತಿಯಲ್ಲೇ ಹೊನ್ನಪ್ಪ ರೆಡ್ಡಿ ಲೇಔಟ್‌ನ ಟಿ.ರಾಮಣ್ಣ ಗಾರ್ಡನ್‌ನಲ್ಲಿ ಸುಸಜ್ಜಿತ ಮತ್ಸ್ಯದರ್ಶಿನಿ ಆರಂಭಗೊಂಡಿದೆ. ಕಡಲ ತೋರಕ್ಕಷ್ಟೇ ಸೀಮಿತವಾಗಿದ್ದ ವಿವಿಧ ತಳಿಗಳ ಮೀನುಗಳ ಖಾಧ್ಯ ಇಲ್ಲಿ ಲಬ್ಯವಿದೆ. ತಾಜಾ ಮೀನುಗಳ ಪೂರೈಕೆಗೂ ಅವಕಾಶ ನೀಡಲಾಗುತ್ತಿದೆ ಎಂದು ಇದರ ಮಾಲಕರೂ…
ಬಂಬೂ ವೆಜ್ ಬಿರಿಯಾನಿ.. ಸ್ವಾದ ಹೇಗಿದೆ ಗೊತ್ತಾ?
ತರಕಾರಿಯಲ್ಲಿ ಹಲವಾರು ಬಗೆಯ ಬಿರಿಯಾನಿ ಮಾಡಬಹುದು. ನಳ ಪಾಕ ಪ್ರವೀಣರು ‘ಬಿದಿರು ತರಕಾರಿ ಬಿರಿಯಾನಿ’ ತಯಾರಿಕೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಈ ‘ಬಿದಿರು ತರಕಾರಿ ಬಿರಿಯಾನಿ’ ಘಮಿಸುವ ಸುವಾಸಾಸನೆಯ ಜೊತೆ ಸ್ವಾದಿಷ್ಟ ರುಚಿಯೂ ಹೌದು. ಇದನ್ನು ಮಾಡುವ ವಿಧಾನವೂ ಸುಲಭ.. ಈರುಳ್ಳಿ 1 ವರೆ ಕಪ್ ಟೊಮ್ಯಾಟೋ 2 ಕಪ್ ಬೀನ್ಸ್ 1 ವರೆ ಕಪ್ ಕ್ಯಾರೆಟ್ 1 ಕಪ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ 2 ಚಮಚ ಪುದಿನ ಸೊಪ್ಪು 1 ಕಪ್ ಕೊತ್ತಂಬರಿ ಸೊಪ್ಪು 1 ಕಪ್ ಬಿರಿಯಾನಿ ಹುಡಿ 2 ಚಮಚ ಲವಂಗ 5 ಏಲಕ್ಕಿ 2 ಚೆಕ್ಕೆ 1 ಚಮಚ ನಕ್ಷತ್ರ ಹೂ 1 ಕಾಯಿ ಮೆಣಸು 2 ಲಿಂಬೆ ರಸ 3 ಚಮಚ ತುಪ್ಪ 5 ಚಮಚ ಎಣ್ಣೆ ಅರ್ಧ ಕಪ್ ಕಲ್ಲುಪ್ಪು 2 ಚಮಚ ಅರಿಶಿನ ಹುಡಿ 1 ಚಮಚ ಅಕ್ಕಿ…
ಕರಾವಳಿ ಶೈಲಿ ‘ಪನೀರ್ ಗೀ ರೋಸ್ಟ್’ನ ರುಚಿ ಸವಿದಿದ್ದೀರಾ?
ಹೋಟೆಲ್’ನಲ್ಲಿ ಸ್ನೇಹಿತರಿಗೆ ಪಾರ್ಟಿ ಕೊಡುವಾಗ ಪಕ್ಕ ವೆಜ್ ಅಂದುಕೊಂಡವರಿಗೆ ಚಿಕನ್-ಮಟನ್’ಗೆ ಪರ್ಯಾಯವಾಗಿ ಆಯ್ಕೆ ಮಾಡುವ ಪದಾರ್ಥವೇ ಪನೀರ್.. ಹಾಲಿನಿಂದ ತಯಾರಾದ ಪನೀರ್’ನಲ್ಲಿ ಹಲವಾರು ಸ್ವಾದಿಷ್ಟ ಪದಾರ್ಥಗಳನ್ನು ತಯಾರಿಸಬಹುದು. ಉತ್ತರ ಭಾರತ ಶೈಲಿಯ ಖಾದ್ಯಕ್ಕಿಂತಲೂ ವಿಶಿಷ್ಟವಾಗಿ ಕರಾವಳಿ ಶೈಲಿ (ಉಡುಪಿ ಶೈಲಿ) ಡಿಶ್ ಅಂದ್ರೆ… ಅದು ವಿಶಿಷ್ಟದಲೂ ವಿಶಿಷ್ಟ. ಅದರಲ್ಲೂ ಮಂಗಳೂರು-ಉಡುಪಿ ಕಡೆ ಔತಣಕ್ಕೆ ಪ್ರತಿಷ್ಠೆ ಕರುಣಿಸುವ ‘ಪನೀರ್ ಗೀ ರೋಸ್ಟ್’ನ ರುಚಿ ಸವಿದಿದ್ದೀರಾ? ಹಾಗಿದ್ದರೆ ಈ ರೀತಿ ‘ಪನೀರ್ ಗೀ ರೋಸ್ಟ್’ ತಯಾರಿಸಿ ರುಚಿ ಸವಿಯಿರಿ.. ಇದನ್ನು ಮಾಡುವ ವಿಧಾನವೂ ಸುಲಭ..
ರಾಮಭಕ್ತರನ್ನು ರೊಚ್ಚಿಗೆಬ್ಬಿಸಿದ ಹಾಡು.. ಪೂಜಾ ಹಾಡಿನ ಮೋಡಿ ಹೇಗಿದೆ ಗೊತ್ತಾ?
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಸಂಬಂಧ ಪ್ರಕ್ರಿಯೆಗಳು ಬಿರುಸುಗೊಂಡಿದೆ. ಶಿಲಾನ್ಯಾಸ ಸಮಾರಂಭದ ಸನ್ನಿವೇಶದಿಂದಾಗಿ ರಾಮ ಜನ್ಮಸ್ಥಾನ ಸುತ್ತಮುತ್ತಲ ನಗರಗಳಲ್ಲಿ ಹಬ್ಬದ ವಾತಾವರಣ ಕಂಡುಬಂದಿದೆ. ಈ ಸಡಗರ ಅಯೋಧ್ಯೆಗಷ್ಟೇ ಸೀಮಿತವಾಗಿಲ್ಲ. ದೇಶವ್ಯಾಪಿ ಕೇಸರಿ ಕಾರ್ಯಕರ್ತರಲ್ಲಿ ಸಂಭ್ರಮ ಮೂಡಿಸಿದೆ. ಈ ಸಂದರ್ಭದಲ್ಲಿ ವಿಶೇಷ ಹಾಡೊಂದು ರಾಮಭಕ್ತರನ್ನು ರೊಚ್ಚಿಗೆಬ್ಬಿಸಿದೆ. ‘ಮೇರಾ ಭಾರತ್ ಕ ಬಚ್ಚಾ ಬಚ್ಚಾ ಜೈ ಜೈ ಶ್ರೀ ರಾಮ್ ಬೋಲೆಗ’ ಹಾಡು ಶ್ರೀಮ ಭಕ್ತರ ಉತ್ಸಾಹವನ್ನು ಹೆಚ್ಚಿಸಿದೆ. ಸುಮಾರು 2 ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಈ ಹಾಡು ಹರಿದಾಡಿತ್ತಾದರೂ, ಇತ್ತೀಚಿನ ಕೆಲವು ದಿನಗಳಲ್ಲಿ ಈ ಹಾಡು ಮುನ್ನೆಲೆಗೆ ಬಂದಿದೆ. ಪೂಜಾ ಗೊಲ್ಹಾನಿಯಾ ಹಾಡಿನ ಮೋಡಿ ಎಲ್ಲರ ಗಮನವನ್ನು ಸೂಜಿಗಲ್ಲಿನಂತೆ ಸೆಳೆದಿದೆ. ಎಲ್ಲೆಲ್ಲೂ ಈ ಹಾಡೇ ಝೇಂಕರಿಸುತ್ತಿದ್ದು, ಭಾರೀ ಸುದ್ದಿಯಾಗುತ್ತಿದೆ. ಇದನ್ನೂ ನೋಡಿ.. ‘ದಿ ಕಾರ್ಗಿಲ್ ಗರ್ಲ್..’ ವೀರ ವನಿತೆಯ ಸಾಹಸ ಗಾಥೆ; ಟ್ರೈಲರ್’ನಲ್ಲೇ ಅಡಗಿದೆ ಥ್ರಿಲ್
‘ಟೆಲಿಗ್ರಾಮ್’ನಲ್ಲಿದೆ ದೈತ್ಯ ಫೇಲ್’ಗಳನ್ನು ಕಳುಹಿಸಲು ಅವಕಾಶ
ವಾಟ್ಸಾಪ್ ಜಗತ್ತಿನಲ್ಲೇ ಜನಪ್ರಿಯ ಮೆಸೆಂಜರ್ ಆಗಿ ಗಮನಸೆಳೆದಿದೆ. ಆದರೆ ಇದೀಗ ವಾಟ್ಸಾಪ್’ಗಿಂತಲೂ ಉತ್ತಮ ಆಯ್ಕೆಗೆ ‘ಟೆಲಿಗ್ರಾಮ್’ ವೇದಿಕೆಯಾಗುತ್ತಿದೆ. ವೀ ಟ್ರಾನ್’ಸ್ಫರ್ ನಿರ್ಬಂಧಿಸಲ್ಪಟ್ಟ ನಂತರ ದೈತ್ಯ ಫೈಲ್’ಗಳನ್ನು ಕಳುಹಿಸುವುದು ಪ್ರಯಾಸದ ಕೆಲಸವಾಗಿದೆ. ಇದೀಗ ಆ ಚಿಂತೆಯನ್ನು ಟೆಲಿಗ್ರಾಮ್ ದೂರ ಮಾಡಿದೆ. ಸೋಶಿಯಲ್ ಮೆಸೇಜಿಂಗ್ ಆ್ಯಪ್ ವಾಟ್ಸ್ ಆಪ್ ನ ಪ್ರತಿಸ್ಪರ್ಧಿ ಟೆಲಿಗ್ರಾಮ್ ತನ್ನ ಚಂದಾದಾರರಿಗೆ ಹೆಚ್ಚಿನ ಸೌಲಭ್ಯ ಒದಗಿಸಿದ್ದು, ಸಂದೇಶ ರವಾನೆಯ ಜೊತೆಗೆ 2 ಜಿಬಿ ವರೆಗಿನ ಫೈಲ್’ ಗಳನ್ನು ಕಳಿಸುವ ಅವಕಾಶ ನೀಡಿದೆ. ಫೈಲ್ ವರ್ಗಾವಣೆ ಮಿತಿಯನ್ನು 1.5ಜಿಬಿಯಿಂದ 2 ಜಿಬಿಗಳಿಗೆ ಏರಿಕೆಮಾಡಿರುವ ಟೆಲಿಗ್ರಾಮ್, 500 ಸದಸ್ಯರಿರುವ ಗ್ರೂಪ್ ರಚನೆಗೂ ಅವಕಾಶ ನೀಡಿದೆ. ಜೊತೆಗೆ ಅನಾಮಿಕ ಖಾತೆಯಿಂದ ಬರುವ ಸಂದೇಶಗಳನ್ನು ತಡೆಯುವ ಆಯ್ಕೆಗೂ ಅವಕಾಶವಿದೆ.
